ಫರೀದಾಬಾದ್(ಹರಿಯಾಣ): ಹಾಡಹಗಲೇ ಕಾಲೇಜು ವಿದ್ಯಾರ್ಥಿನಿಯನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ಹರಿಯಾಣ ರಾಜ್ಯದ ಫರೀದಾಬಾದ್ನ ಬಲ್ಲಬ್ಗಢದಲ್ಲಿ ನಡೆದ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದ್ದು, ನ್ಯಾಯಕ್ಕಾಗಿ ವಿದ್ಯಾರ್ಥಿನಿಯ ಕುಟುಂಬಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ.
ಫರೀದಾಬಾದ್ನಲ್ಲಿ ವಿದ್ಯಾರ್ಥಿಯ ಪೋಷಕರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಲಾಗಿತ್ತು. ಕೆಲವು ದಿನಗಳ ನಂತರ ಇಬ್ಬರ ನಡುವೆ ಸಂಧಾನ ಸಹ ಏರ್ಪಟ್ಟಿತ್ತು. ಈ ವೇಳೆ, ಆರೋಪಿ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಇದು ಲವ್ ಜಿಹಾದ್ ಕುಮ್ಮಕ್ಕು ಎಂದೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಮುಖ್ಯ ಆರೋಪಿಯನ್ನು ನೂಹ್ ನಿವಾಸಿ ತೌಫೀಕ್ ಎಂದು ಗುರುತಿಸಲಾಗಿದ್ದು, ಈತನ ಜೊತೆ ಮತ್ತೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿನಿ ಓದುತ್ತಿದ್ದ ಅಗರವಾಲ್ ಕಾಲೇಜಿನ ವಿದ್ಯಾರ್ಥಿಗಳೂ ಮಥುರಾ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ವಿದ್ಯಾರ್ಥಿ ಸಂಘಟನೆಗಳೂ ಧನಿಗೂಡಿಸಿವೆ.
ಪ್ರಕರಣದ ಬಗ್ಗೆ ಹರಿಯಾಣ ಸಿಎಂ ಹಾಗೂ ಗೃಹ ಸಚಿವರು ಪ್ರತಿಕ್ರಿಯೆ ಏನು?
ಆರೋಪಿಗಳನ್ನು ಈಗಾಗಲೇ ಸೆರೆಹಿಡಿಯಲಾಗಿದೆ. ಅಪರಾಧ ವಿಭಾಗದ ಎಸಿಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚನೆ ಮಾಡಲಾಗಿದ್ದು, ಅವರು ತ್ವರಿತ ತನಿಖೆ ಕೈಗೊಂಡು ವಿದ್ಯಾರ್ಥಿ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹರಿಯಾಣ ಗೃಹ ಮಂತ್ರಿ ಅನಿಲ್ ವಿಜ್ ಸ್ಪಷ್ಟನೆ ನೀಡಿದ್ದಾರೆ.
-
On 26th October, a 21-year-old girl was shot dead in broad daylight by two men outside the Aggarwal college in Ballabgarh, Faridabad. Rushed to the hospital, the victim was declared dead. Do you still think women are safe?#justice4Nikita pic.twitter.com/0pJXNqokfo
— Youth Against Rape™ (@yaifoundations) October 27, 2020 " class="align-text-top noRightClick twitterSection" data="
">On 26th October, a 21-year-old girl was shot dead in broad daylight by two men outside the Aggarwal college in Ballabgarh, Faridabad. Rushed to the hospital, the victim was declared dead. Do you still think women are safe?#justice4Nikita pic.twitter.com/0pJXNqokfo
— Youth Against Rape™ (@yaifoundations) October 27, 2020On 26th October, a 21-year-old girl was shot dead in broad daylight by two men outside the Aggarwal college in Ballabgarh, Faridabad. Rushed to the hospital, the victim was declared dead. Do you still think women are safe?#justice4Nikita pic.twitter.com/0pJXNqokfo
— Youth Against Rape™ (@yaifoundations) October 27, 2020
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರಿಯಾಣ ಸಿಎಂ ಮನೋಹರ ಲಾಲ್ ಕಟ್ಟರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.