ETV Bharat / bharat

ಕೊರೊನಾ ಸೋಂಕು, ಲಕ್ಷಣಗಳ ಬಗ್ಗೆ ಆಯುರ್ವೇದ ಏನು ಹೇಳುತ್ತದೆ? - ಶಾದಂಗ ಪಾನೀಯ

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಿಯಮಿತ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಪೂರಕವಾಗಿ ಆಯುರ್ವೇದ ಚಿಕಿತ್ಸಾ ವಿಧಾನಗಳನ್ನು ಬಳಸುವ ಕುರಿತು ಡಾ. ರಂಗನಾಯಕುಲು ನೀಡಿರುವ ಮಾಹಿತಿ ಇಲ್ಲಿದೆ.

Prevent COVID-19 the Ayurveda Way
Prevent COVID-19 the Ayurveda Way
author img

By

Published : Apr 15, 2020, 4:08 PM IST

ಹೈದರಾಬಾದ್: ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ಗುಣಪಡಿಸಲು ನಿಖರವಾದ ಲಸಿಕೆ ಅಥವಾ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅಲೋಪಥಿ ಬಿಟ್ಟರೆ ಭಾರತದಲ್ಲಿ ಆಯುರ್ವೇದ ಔಷಧ ಪದ್ಧತಿ ಬಹಳ ಜನಪ್ರಿಯವಾಗಿದೆ. ಕೊರೊನಾ ಲಕ್ಷಣಗಳು, ಅದರ ನಿಯಂತ್ರಣ ಮುಂತಾದುವುಗಳ ಬಗ್ಗೆ ಆಯುರ್ವೇದ ಏನನ್ನುತ್ತದೆ ಎಂಬುದನ್ನು ಆಯುರ್ವೇದ ತಜ್ಞರು ಅಭ್ಯಾಸ ಮಾಡುತ್ತಿದ್ದಾರೆ. ಕೊರೊನಾ ಹಾಗೂ ಆಯುರ್ವೇದ ಚಿಕಿತ್ಸೆಯ ಕುರಿತು ಡಾ. ರಂಗನಾಯಕುಲು ಹಲವಾರು ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಸಾಂಕ್ರಾಮಿಕ ರೋಗಗಳ ಬಗ್ಗೆ ಬಹು ವಿಸ್ತೃತವಾಗಿ ಆಯುರ್ವೇದದಲ್ಲಿ ವಿವರಿಸಲಾಗಿದೆ. ರೋಗಿಯ ಸಂಪರ್ಕದಿಂದಾಗಿ ನಿರೋಗಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬುದನ್ನು ಆಯುರ್ವೇದದಲ್ಲಿ ಗುರುತಿಸಲಾಗಿದೆ. ಕೊರೊನಾ ಲಕ್ಷಣಗಳ ಕುರಿತಾಗಿ ಹೇಳುವುದಾದರೆ, ಉಸಿರಾಟದ ಸಮಸ್ಯೆಯನ್ನು ಆಯುರ್ವೇದದಲ್ಲಿ 5 ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಅವು ಹೀಗಿವೆ: ಮಹಾಶ್ವಾಸ, ಊರ್ಧ್ವ ಶ್ವಾಸ, ಚಿನ್ನ ಶ್ವಾಸ, ತಮಕ ಶ್ವಾಸ ಹಾಗೂ ಕ್ಷುದ್ರ ಶ್ವಾಸ.

ಆಯುರ್ವೇದದ ಪ್ರಕಾರ ಕೊರೊನಾ ವೈರಸ್​ ಕ್ಷುದ್ರ ಶ್ವಾಸ ಪ್ರಕಾರದಲ್ಲಿ ಬರುತ್ತದೆ. ಕ್ಷುದ್ರ ಅಥವಾ ಕಡಿಮೆ ಗಂಭೀರತೆಯ ಪ್ರಕಾರದಲ್ಲಿದ್ದರೂ ಕೊರೊನಾ ಪ್ರಾಣಹಾನಿಯನ್ನುಂಟು ಮಾಡಬಹುದು ಎಂದು ಹೇಳಲಾಗಿದೆ.

ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊರೊನಾ ಹರಡುತ್ತಿರುವುದು ಗಮನಕ್ಕೆ ಬಂದಲ್ಲಿ ನಿಗದಿತ ವೈದ್ಯಕೀಯ ಸಲಹೆಗಳನ್ನು ಪಾಲಿಸುತ್ತ ಈ ಕೆಳಗಿನ ಆಯುರ್ವೇದ ವಿಧಾನಗಳ ಪೈಕಿ ಒಂದು ಅಥವಾ ಎರಡು ವಿಧಾನಗಳನ್ನು ಪೂರಕವಾಗಿ ಅಳವಡಿಸಿಕೊಳ್ಳಬಹುದು.

ಆಯುರ್ವೇದದ ಕೆಲ ಜನಪ್ರಿಯ ಮನೆಮದ್ದು ವಿಧಾನಗಳು:

- ಒಂದು ಮುಷ್ಟಿ ಹಸಿ ಶುಂಠಿಯನ್ನು ಶುದ್ಧ ನೀರಿನಿಂದ ತೊಳೆದು, ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇವನ್ನು ಎರಡರಿಂದ ಮೂರು ನಿಮಿಷ ಮುಚ್ಚಿದ ಪಾತ್ರೆಯಲ್ಲಿ ಕುದಿಸಿ. ನೀರನ್ನು ಬಸಿಯಿರಿ ಹಾಗೂ ಶುಂಠಿಯ ತುಂಡುಗಳನ್ನು ಹಿಂಡಿ ಅದರಲ್ಲಿನ ರಸ ಸಂಪೂರ್ಣ ನೀರಿಗೆ ಸೇರುವಂತೆ ಮಾಡಿ. ಚಿಟಿಕೆ ಅರಿಶಿಣ ಹಾಗೂ ಒಂದಿಷ್ಟು ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ. ದಿನಕ್ಕೆರಡು ಬಾರಿ ಈ ಜ್ಯೂಸ್ ಸೇವಿಸಬಹುದು.

- ತೆಳುವಾದ ಶುಂಠಿಯ ತುಂಡನ್ನು ಬಾಯಲ್ಲಿಟ್ಟುಕೊಳ್ಳಿ. 5 ರಿಂದ 10 ನಿಮಿಷಗಳವರೆಗೆ ಇದನ್ನು ನಿಧಾನವಾಗಿ ಜಗಿಯಿರಿ.

- ಮೆಣಸು ಪುಡಿ (pepper powder) ಯೊಂದಿಗೆ ಬಾಳೆಹಣ್ಣು ಸೇವಿಸಿ.

- ಉಗುರು ಬೆಚ್ಚಗಿನ ಹಾಲಿಗೆ ಚಿಟಿಕೆ ಅರಿಶಿಣ ಸೇರಿಸಿ ದಿನಕ್ಕೊಮ್ಮೆ ಸೇವಿಸಿ.

- ಪ್ರತಿನಿತ್ಯ ಯಾವುದಾದರೂ ರೂಪದಲ್ಲಿ 5 ರಿಂದ 6 ಬೆಳ್ಳುಳ್ಳಿ ಎಸಳು ಸೇವಿಸಿ.

- ಬೆಳ್ಳುಳ್ಳಿ ರಸದೊಂದಿಗೆ ಬೆಲ್ಲ ಸೇರಿಸಿ ತಿನ್ನಿ.

- ಎರಡು ತುಳಸಿ ಎಲೆಗಳನ್ನು ತಿನ್ನಿ. ಇದರ ರಸ ತೆಗೆದು ಚಿಟಿಕೆ ಅರಿಶಿಣ ಸೇರಿಸಿ ಸೇವಿಸುವುದು ಇನ್ನೂ ಉತ್ತಮ.

- ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಪ್ರತಿದಿನ ಒಣದ್ರಾಕ್ಷಿ ಸೇವಿಸುವುದರಿಂದ ಕೆಮ್ಮು ಬರದಂತೆ ನಿಯಂತ್ರಿಸಬಹುದು.

- ಚಿಟಿಕೆ ದಾಲ್ಚಿನ್ನಿ ಪುಡಿ, ಮೆಣಸು ಹಾಗೂ ಒಣ ಶುಂಠಿಯ ಪುಡಿಯನ್ನು ಸೇರಿಸಿ ಇದರಿಂದ ಟೀ ಮಾಡಿಕೊಂಡು ಸೇವಿಸಿ.

- ತುಪ್ಪ, ವಿಟಮಿನ್ ಸಿ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಆಗಾಗ ಬೆಚ್ಚಗಿನ ನೀರು ಕುಡಿಯಿರಿ.

- ಕನಿಷ್ಠ ಒಂದು ತಾಸು ವ್ಯಾಯಾಮ ಮಾಡುವುದರಿಂದ ಉಸಿರಾಟ ವ್ಯವಸ್ಥೆ ಬಲಗೊಳ್ಳುತ್ತದೆ ಹಾಗೂ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚುತ್ತದೆ.

ರೋಗನಿರೋಧಕ ಶಕ್ತಿಯ ರೂಪದಲ್ಲಿ ಸೇವಿಸಬಹುದಾದ ಔಷಧಿಗಳು:

- ಅಗಸ್ತ್ಯ ರಸಾಯನ: 5 ಮಿಲಿಗ್ರಾಂ ಬೆಳಗ್ಗೆ ಟಿಫಿನ್​ ಮಾಡುವ ಮೊದಲು, ಹತ್ತು ದಿನಗಳವರೆಗೆ

- ಶಾದಂಗ ಪಾನೀಯ: ಎರಡು ಟೇಬಲ್ ಚಮಚೆ ಹತ್ತು ದಿನಗಳವರೆಗೆ

- ಹರಿದ್ರಾಖಂಡ: ಉಗುರು ಬೆಚ್ಚಗಿನ ಹಾಲಿಗೆ ಒಂದು ಟೀ ಸ್ಪೂನ್​ ಸೇರಿಸಿ ಹತ್ತು ದಿನಗಳವರೆಗೆ ಸೇವಿಸುವುದು

- ತ್ರಿಭುವನಕ್ರಿತಿ: ದಿನಕ್ಕೆರಡು ಮಾತ್ರೆ ಹತ್ತು ದಿನಗಳವರೆಗೆ

- ಯಷ್ಟಿಮಧು ಮಾತ್ರೆ: ದಿನಕ್ಕೊಂದರಂತೆ ಹಾಗೂ ಕಲ್ಮೇಘ ಸಿರಪ್​ ಒಂದು ಟೀ ಸ್ಪೂನ್​ನಂತೆ ಹತ್ತು ದಿನಗಳವರೆಗೆ

ಕ್ವಾರಂಟೈನ್ ಹಾಗೂ ಸ್ವಯಂ ಪ್ರತ್ಯೇಕಿಸಿಕೊಳ್ಳುವಿಕೆ:

ವಾಸನೆ ಕಂಡುಹಿಡಿಯದಿರುವುದು, ಸಾಮಾನ್ಯ ನೆಗಡಿ, ಜ್ವರ, ಸೀನುವಿಕೆ ಹಾಗೂ ಕೆಮ್ಮು, ಸುಸ್ತು, ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಹಾಗೂ ತಮಗೆ ಕೋವಿಡ್​-19 ಸೋಂಕು ತಗುಲಿರುವ ಶಂಕೆ ಇದ್ದಲ್ಲಿ ಆಯುರ್ವೇದ ತಜ್ಞರನ್ನು ಭೇಟಿ ಮಾಡಿ ಈ ಕೆಳಗಿನ ಔಷಧಿಗಳನ್ನು ಸೇವಿಸಬಹುದು:

- ಕನಕಾಸವ: 10 ಎಂಎಲ್​ ದಿನಕ್ಕೆರಡು ಬಾರಿ

- ವಾಸಕಂಟಕಾರಿ ಲೇಹ್ಯ: 5 ಗ್ರಾಂ ದಿನಕ್ಕೆರಡು ಬಾರಿ ಊಟದ ಮುನ್ನ

- ತ್ರಿಭುವನ ಕ್ರಿತಿ ಮಾತ್ರೆ: ದಿನಕ್ಕೆರಡು ಬಾರಿ ಎರಡರಂತೆ ಉಗುರು ಬೆಚ್ಚಗಿನ ನೀರಿನೊಂದಿಗೆ

- ಗುಡುಚಿ ಸತ್ವ: 5 ಗ್ರಾಂ ದಿನಕ್ಕೆರಡು ಬಾರಿ

- ಅಗಸ್ತ್ಯ ರಸಾಯನ: ತಲಿಸಾದಿ ಚೂರ್ಣದೊಂದಿಗೆ ಸೇವಿಸುವುದು

(ಇಲ್ಲಿ ತಿಳಿಸಲಾದ ಆಯುರ್ವೇದ ಔಷಧ ವಿಧಾನಗಳು ಕೇವಲ ಪೂರಕ ಔಷಧ ವಿಧಾನಗಳಾಗಿವೆ. ಕೊರೊನಾ ವೈರಸ್​ ಗುಣಪಡಿಸುವ ಮದ್ದು ಇವಲ್ಲ. ಕೋವಿಡ್​-19 ಸೋಂಕು ತಗುಲಿರುವ ಶಂಕೆ ಇದ್ದಲ್ಲಿ ಕಡ್ಡಾಯವಾಗಿ ನಿಗದಿತ ವೈದ್ಯಕೀಯ ಮಾರ್ಗಸೂಚಿಗಳನ್ವಯ ಚಿಕಿತ್ಸೆ ಪಡೆಯಬೇಕು.)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.