ETV Bharat / bharat

ನಿರ್ಭಯಾ ಹತ್ಯಾಚಾರಿ ಪ್ರಕರಣ: ಪವನ್​ ಗುಪ್ತಾ ಕ್ಷಮಾದಾನ ಅರ್ಜಿ ವಜಾಗೊಳಿಸಿದ ರಾಷ್ಟ್ರಪತಿ!

ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಾಗಿರುವ ಪವನ್​ ಗುಪ್ತಾ ಸಲ್ಲಿಕೆ ಮಾಡಿದ್ದ ಕ್ಷಮದಾನ ಅರ್ಜಿ ಇದೀಗ ವಜಾಗೊಂಡಿದೆ.

Nirbhaya gang rape convict Pawan Gupta
Nirbhaya gang rape convict Pawan Gupta
author img

By

Published : Mar 4, 2020, 2:35 PM IST

ನವದೆಹಲಿ: 2012ರ ನಿರ್ಭಯಾ ಹತ್ಯಾಚಾರ ಪ್ರಕರಣದ ಆರೋಪಿಗಳ ಗಲ್ಲು ಶಿಕ್ಷೆ ಮೇಲಿಂದ ಮೇಲೆ ಮುಂದೂಡಿಕೆಯಾಗುತ್ತಿದ್ದು, ಇದರ ಮಧ್ಯೆ ಕ್ಷಮದಾನ ನೀಡುವಂತೆ ರಾಷ್ಟ್ರಪತಿಗಳ ಬಳಿ ಮನವಿ ಸಲ್ಲಿಕೆ ಮಾಡಿದ್ದ ಆರೋಪಿ ಪವನ್​ ಗುಪ್ತಾ ಅರ್ಜಿ ಇದೀಗ ವಜಾಗೊಂಡಿದೆ.

ನಿರ್ಭಯಾ ರೇಪ್​ & ಮರ್ಡರ್​ ಕೇಸ್​... ಆರೋಪಿ ಪವನ್​ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್​ ಅರ್ಜಿ ವಜಾ

ಈ ಎಲ್ಲ ಆರೋಪಿಗಳಿಗೆ ಈಗಾಗಲೇ ಸುಪ್ರೀಂಕೋರ್ಟ್​ ಮರಣದಂಡನೆ ವಿಧಿಸಿದೆ. ಆದರೆ, ಮೇಲಿಂದ ಮೇಲೆ ಅರ್ಜಿ ಸಲ್ಲಿಕೆ ಮಾಡುತ್ತಿರುವ ಕಾರಣ ದಿನಾಂಕ ಮುಂದೂಡಿಕೆಯಾಗುತ್ತಿದೆ. ಈ ಹಿಂದೆ ತನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್​ಗೆ ಕ್ಯುರೇಟಿವ್​ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಅರ್ಜಿ ತಿರಸ್ಕರಿಸಿತ್ತು. ಆ ಬಳಿಕ ಗುಪ್ತಾ ಕ್ಷಮಾದಾನ ಮಾಡುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರಪತಿಗಳು ಗುಪ್ತಾ ಕೋರಿಕೆಯನ್ನ ವಜಾಗೊಳಿಸಿದ್ದಾರೆ. 2012ರಲ್ಲಿ ಈ ಘಟನೆ ನಡೆದಾಗ ಪವನ್​ ಗುಪ್ತಾ ಅಪ್ರಾಪ್ತನಾಗಿದ್ದ ಎಂಬ ಕಾರಣವನ್ನೇ ಇಟ್ಟುಕೊಂಡು ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಯನ್ನ ಸಲ್ಲಿಕೆ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.