ನವದೆಹಲಿ: ದೇಶಾದ್ಯಂತ ಕೊರೊನಾ ಮಹಾಮಾರಿ ಆತಂಕ ಹುಟ್ಟಿಸಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ಉತ್ತಮ ಆಹಾರದ ಜೊತೆಗೆ ವ್ಯಾಯಾಮವೂ ದಿನ ನಿತ್ಯದ ಅಭ್ಯಾಸವೇ ಆಗಿ ಹೋಗಿದೆ. ಯಾಕೆಂದರೆ, ನಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಕೇಂದ್ರ ಸರ್ಕಾರ ಕಳೆದ ವರ್ಷವೇ ಫಿಟ್ ಇಂಡಿಯಾ ಅಭಿಯಾನವನ್ನೂ ಆರಂಭಿಸಿದೆ. ಈಗ ಅಭಿಯಾನಕ್ಕೆ ಒಂದು ವರ್ಷ ತುಂಬಿದೆ. ದೇಶದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಒಂದು ರೀತಿಯ ಆಂದೋಲನ ಈ ಫಿಟ್ ಇಂಡಿಯಾ.
'ಫಿಟ್ ಇಂಡಿಯಾ ಅಭಿಯಾನ' ಒಂದು ವರ್ಷ ಪೂರೈಸಿರುವ ಹಿನ್ನೆಲೆ ಫಿಟ್ನೆಸ್ಗೆ ಸ್ಫೂರ್ತಿಯಾಗಿರುವ ಮತ್ತು ಸಮಾಜದಲ್ಲಿ ಆದರ್ಶಪ್ರಾಯರಾಗಿರುವ ಐಕಾನ್ಗಳ ಜೊತೆ ಇಂದು ಪ್ರಧಾನಿ ಮೋದಿ ಆನ್ಲೈನ್ ಸಂವಾದ ನಡೆಸಲಿದ್ದಾರೆ.
-
Are you already a fitness aficionado?
— Narendra Modi (@narendramodi) September 22, 2020 " class="align-text-top noRightClick twitterSection" data="
Do you intend to make fitness a part of your routine?
Bringing to you, an interesting Fit India Dialogue to discuss aspects related to nutrition, physical health, mental well-being and more...
See you on 24th at 12 noon! #NewIndiaFitIndia pic.twitter.com/LUPFOFnlpk
">Are you already a fitness aficionado?
— Narendra Modi (@narendramodi) September 22, 2020
Do you intend to make fitness a part of your routine?
Bringing to you, an interesting Fit India Dialogue to discuss aspects related to nutrition, physical health, mental well-being and more...
See you on 24th at 12 noon! #NewIndiaFitIndia pic.twitter.com/LUPFOFnlpkAre you already a fitness aficionado?
— Narendra Modi (@narendramodi) September 22, 2020
Do you intend to make fitness a part of your routine?
Bringing to you, an interesting Fit India Dialogue to discuss aspects related to nutrition, physical health, mental well-being and more...
See you on 24th at 12 noon! #NewIndiaFitIndia pic.twitter.com/LUPFOFnlpk
ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಈ ಸಂವಾದ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಜೊತೆ ಟೀಂ ಇಂಡಿಯಾ ನಾಯಕ ಕ್ರಿಕೆಟಿಗ ವಿರಾಟ್ ಕೊಹ್ಲಿ, ಮಾಡೆಲ್ ಮತ್ತು ಓಟಗಾರ ಮಿಲಿಂದ್ ಸೋಮನ್, ಪೌಷ್ಟಿಕ ಆಹಾರ ತಜ್ಞೆ ರುಜುತಾ ದಿವೇಕರ್ ಮತ್ತು ಫಿಟ್ನೆಸ್ಗೆ ಸ್ಫೂರ್ತಿಯಾಗಿರುವ ಇತರರು ಭಾಗವಹಿಸಲಿದ್ದಾರೆ.
ಇವರೆಲ್ಲರ ಫಿಟ್ನೆಸ್ ಮಂತ್ರ ತಿಳಿದುಕೊಳ್ಳಲು ದೇಶದ ಜನರಷ್ಟೇ ಅಲ್ಲ ಸ್ವತಃ ಪ್ರಧಾನಿ ಮೋದಿಯವರೇ ಬಹಳ ಉತ್ಸುಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜನರನ್ನು ಒತ್ತಾಯಿಸಿ ಟ್ವೀಟ್ ಮಾಡಿರುವ ಮೋದಿ, "ನೀವು ಈಗಾಗಲೇ ಫಿಟ್ನೆಸ್ ಅಭಿಮಾನಿಯಾಗಿದ್ದೀರಾ? ಫಿಟ್ನೆಸ್ ಅನ್ನು ನಿಮ್ಮ ದಿನಚರಿಯ ಭಾಗವಾಗಿಸಲು ನೀವು ಬಯಸುತ್ತೀರಾ? ಪೌಷ್ಠಿಕ ಆಹಾರ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ನಾನೂ ಬಹಳ ಖುಷಿಯಿಂದ, ಉತ್ಸುಕನಾಗಿ ಬರುತ್ತಿದ್ದೇನೆ. ಮಧ್ಯಾಹ್ನ 12 ಗಂಟೆಗೆ ನಿಮ್ಮನ್ನ ಕಾಣುವೆ" ಎಂದು ಹೇಳಿದ್ದಾರೆ.
ಆಸಕ್ತರು https://pmindiawebcast.nic.in ಲಿಂಕ್ ಬಳಸಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.