ನವದೆಹಲಿ: ದೇಶದ ಜನತೆಯನ್ನು ಉದ್ದೇಶಿಸಿ ಮನ್ ಕಿ ಬಾತ್ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳನ್ನು ಕೇಳುಗರ ಮುಂದಿಟ್ಟಿದ್ದಾರೆ.
ಫಿಟ್ ಇಂಡಿಯಾ ಹಾಗೂ ಮಹಾತ್ಮ ಗಾಂಧಿ 150ನೇ ಹುಟ್ಟುಹಬ್ಬ ಆಚರಣೆ, ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಸ್ವಚ್ಛ ಭಾರತ ಪ್ರಧಾನಿ ಮೋದಿಯ ಇಂದಿನ 'ಮನ್ ಕಿ ಬಾತ್' ಪ್ರಮುಖಾಂಶಗಳು. ಆರೋಗ್ಯಕರ ಭಾರತಕ್ಕಾಗಿ ಅಗಸ್ಟ್ 29ರಂದು ಫಿಟ್ ಇಂಡಿಯಾ ಎನ್ನುವ ಹೊಸ ಅಭಿಯಾನ ಪ್ರಾರಂಭಿಸುವ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
-
During today’s #MannKiBaat, I have made some requests to my fellow Indians:
— Narendra Modi (@narendramodi) August 25, 2019 " class="align-text-top noRightClick twitterSection" data="
Visit iconic places relating to Bapu as a part of his 150th Jayanti.
Travel to places related to nature and wildlife.
Strengthen Poshan Abhiyan.
Be a part of Fit India movement https://t.co/vfg9q3u0si
">During today’s #MannKiBaat, I have made some requests to my fellow Indians:
— Narendra Modi (@narendramodi) August 25, 2019
Visit iconic places relating to Bapu as a part of his 150th Jayanti.
Travel to places related to nature and wildlife.
Strengthen Poshan Abhiyan.
Be a part of Fit India movement https://t.co/vfg9q3u0siDuring today’s #MannKiBaat, I have made some requests to my fellow Indians:
— Narendra Modi (@narendramodi) August 25, 2019
Visit iconic places relating to Bapu as a part of his 150th Jayanti.
Travel to places related to nature and wildlife.
Strengthen Poshan Abhiyan.
Be a part of Fit India movement https://t.co/vfg9q3u0si
ಫಿಟ್ ಇಂಡಿಯಾದಲ್ಲಿ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವಯೋಮಾನದವರೂ ಪಾಲ್ಗೊಳ್ಳಬಹುದು ಎಂದಿರುವ ಪ್ರಧಾನಿ, ಅಗಸ್ಟ್ 29ರಂದು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಅಕ್ಟೋಬರ್ 2ರಂದು ಮಹಾತ್ಮ ಗಾಂಧಿಯ 150 ಜನ್ಮದಿನ ಆಚರಣೆಗೆ ಇಡೀ ದೇಶವೇ ಸಿದ್ಧವಾಗುತ್ತಿದೆ. ಇದು ಬಹುದೊಡ್ಡ ಹಬ್ಬ ಎಂದು ಪ್ರಧಾನಿ ಮೋದಿ ಉಲ್ಲೇಖ ಮಾಡಿದ್ದಾರೆ.