ಆಗ್ರಾ (ಉ.ಪ್ರ): ಪ್ರೀತಿಯ ಸಂಕೇತವಾದ ತಾಜ್ ಮಹಲ್ ಸೇರಿದಂತೆ ಎಲ್ಲ ಸ್ಮಾರಕಗಳು ಮುಚ್ಚಿವೆ. ಆದರೆ, ಆಗ್ರಾ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ತಾಜ್ ಮಹಲ್ನ ತಾಜ್ ವೀವ್ ಪಾಯಿಂಟ್ ತೆರೆದಿದೆ.
ಹಲವು ದಿನಗಳ ನಂತರ ತಾಜ್ ಪ್ರಿಯರು ಯಮುನಾ ತಪ್ಪಲಿನಲ್ಲಿರುವ ಮೆಹ್ತಾಬ್ ಬಾಗ್ ಬಳಿಯ ತಾಜ್ ವೀವ್ ಪಾಯಿಂಟ್‌ನಿಂದ ತಾಜ್ ಮಹಲನ್ನು ನೋಡಬಹುದಾಗಿದೆ.
ಕೊರೊನಾ ಸೋಂಕಿನಿಂದಾಗಿ ಪ್ರವಾಸಿಗರ ಥರ್ಮಲ್ ಸ್ಕ್ರೀನಿಂಗ್ ನಡೆಸಲು ಎಡಿಎ ಸಿದ್ಧತೆಗೊಳಿಸಿದೆ. ಇದರೊಂದಿಗೆ ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರ ಅನುಸರಿಸಲು ಸೂಚನೆಗಳನ್ನು ನೀಡಲಾಗುತ್ತದೆ.
ಮೆಹ್ತಾಬ್ ಬಾಗ್‌ನ ಯಮುನಾ ದಡದಲ್ಲಿರುವ ತಾಜ್ ವೀವ್ ಪಾಯಿಂಟ್ ತೆರೆಯಲಾಗಿದ್ದು, ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಈಗ ಇಲ್ಲಿಗೆ ಭೇಟಿ ನೀಡಬಹುದು ಎಂದು ಎಡಿಎ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ತ್ರಿಪಾಠಿ ತಿಳಿಸಿದ್ದಾರೆ.