ನವದೆಹಲಿ: ಸರ್ವೋಚ್ಛ ನ್ಯಾಯಾಲಯ ಇಂದು ನಿರ್ಭಯಾ ಪ್ರಕರಣ ಅಪಾರಾಧಿಗಳಾದ ವಿನಯ್ ಶರ್ಮಾ ಹಾಗೂ ಮುಖೇಶ್ ಅವರು ಮರಣದಂಡನೆ ಆದೇಶವನ್ನ ಪುನರ್ ಪರಿಶೀಲಿಸುವಂತೆ ಹಾಗೂ ಗಲ್ಲು ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಜಸ್ಟೀಸ್ ಎನ್ ವಿ ರಮಣ್, ಅರುಣ್ ಮಿಶ್ರಾ, ಆರ್ ಎಫ್ ನಾರಿಮನ್, ಆರ್ ಭಾನುಮತಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ಪಂಚ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.
ನವದೆಹಲಿ ಪಾಟಿಯಾಲ್ ಕೋರ್ಟ್ ಕಳೆದ ವಾರ ನಿರ್ಭಯಾ ಕೇಸ್ನ ಅಪರಾಧಿಗಳಾದ ನಾಲ್ವರಿಗೆ ಡೆತ್ ವಾರಂಟ್ ಹೊರಡಿಸಿತ್ತಲ್ಲದೇ ಇದೆ ಜನವರಿ 22 ರಂದು ಗಲ್ಲು ವಿಧಿಸಬೇಕು ಎಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ವಿನಯ್ ಶರ್ಮಾ, ಮುಖೇಶ್ ಕುಮಾರ್ ಅಂತಿಮ ನ್ಯಾಯದಾನ( ಇಲ್ಲವೇ ಪರಿಹಾರಾತ್ಮಕ) ಅರ್ಜಿ ಸಲ್ಲಿಸಿ ಗಲ್ಲು ಶಿಕ್ಷೆ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದರು.