ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳ ಮರಣದಂಡನೆಗೆ ಕೆಲವೇ ದಿನಗಳು ಬಾಕಿ ಇವೆ. ತಿಹಾರ್ ಜೈಲು ನಿರ್ದೇಶನಾಲಯವು ಉತ್ತರ ಪ್ರದೇಶದ ಜೈಲು ನಿರ್ದೇಶನಾಲಯಕ್ಕೆ ಮತ್ತೊಮ್ಮೆ ಪತ್ರ ಬರೆದಿದ್ದು, ಮರಣದಂಡನೆ ಪ್ರಕ್ರಿಯೆಗೆ ಮರಣದಂಡನಕಾರ ಪವನ್ ಜಲ್ಲದ್‌ರನ್ನು ಕಳುಹಿಸುವಂತೆ ಮನವಿ ಮಾಡಿದೆ.
ಕಳೆದ 20 ದಿನಗಳಲ್ಲಿ ಇದು ಎರಡನೇ ಬಾರಿ ಬರೆದ ಪತ್ರವಾಗಿದ್ದು, ಈ ಪತ್ರದಲ್ಲಿ ತಿಹಾರ್ ಜೈಲು ನಿರ್ದೇಶನಾಲಯದಲ್ಲಿ ಲಭ್ಯವಿರುವ ಡೆತ್ ವಾರಂಟ್‌ನ ಉಲ್ಲೇಖವೂ ಇದೆ.
ಪವನ್ ಜಲ್ಲದ್ ಮರಣದಂಡನೆ ಪ್ರಕ್ರಿಯೆ ನಡೆಸಬೇಕೆಂದು ತಿಹಾರ್ ಜೈಲು ಆಡಳಿತವು ಬಯಸುವುದಕ್ಕೆ ಹಲವು ಕಾರಣಗಳಿವೆ. ಮುಖ್ಯ ಕಾರಣವೆಂದರೆ ಅವರು ಮರಣದಂಡನೆಕಾರರ ಕುಟುಂಬದಿಂದ ಬಂದವರು, ಎರಡನೆಯದಾಗಿ ಅವರು ದೈಹಿಕವಾಗಿ ಸದೃಢರಾಗಿದ್ದಾರೆ ಮತ್ತು ಅವರ ದೃಷ್ಟಿ ಕೂಡಾ ಅಗತ್ಯಕ್ಕೆ ತಕ್ಕಂತೆ ಉತ್ತಮವಾಗಿರುತ್ತದೆ ಎಂಬುದು ಪ್ರಮುಖ ಅಂಶಗಳಾಗಿವೆ.
ಪವನ್ ಜಲ್ಲದ್ ಅವರ ಭದ್ರತಾ ವ್ಯವಸ್ಥೆಗಳೂ ರಹಸ್ಯವಾಗಿರುತ್ತವೆ. ಒಂದು ವೇಳೆ ಯುಪಿ ಜೈಲು ಆಡಳಿತವು ಅವರಿಗೆ ಭದ್ರತೆಯನ್ನು ಒದಗಿಸಲು ಸಾಧ್ಯವಾಗದಿದ್ದರೆ ಅದನ್ನು ತಿಹಾರ್ ಜೈಲು ಆಡಳಿತವು ನೋಡಿಕೊಳ್ಳಲಿದೆ. ಇದಲ್ಲದೇ, ಮೀರತ್ ದೆಹಲಿಯಿಂದ ತುಂಬಾ ದೂರದಲ್ಲಿಲ್ಲ, ಹಾಗಾಗಿ ಪವನ್ ತಿಹಾರ್ ಜೈಲು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬುದು ಸಹ ಒಂದು ಪ್ರಮುಖ ಅಂಶವಾಗಿದೆ.
ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಬುಧವಾರ ನೀಡಿದ ಮಾಹಿತಿ ಪ್ರಕಾರ, "ದೆಹಲಿ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಅಪರಾಧಿಗಳಿಗೆ ನೀಡಲಾಗಿದೆ. ಆದರೆ ಡೆತ್ ವಾರಂಟ್ ಆಡಳಿತದೊಂದಿಗೆ ಉಳಿಯುತ್ತದೆ. ಅಪರಾಧಿಗಳಿಗೆ ನೀಡಿದ ಆದೇಶದ ನಕಲು ಕಾಪಿಯಲ್ಲಿ ಡೆತ್ ವಾರಂಟ್ ಬಗ್ಗೆ ಉಲ್ಲೇಖವಿದೆ" ಎಂದು ಹೇಳಿದರು.