ETV Bharat / bharat

ಲಕ್ಷಾಂತರ ರೂ. ಮೌಲ್ಯದ ವಸ್ತ್ರ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ತಂಡ ಪೊಲೀಸರ ವಶ

author img

By

Published : Jun 22, 2020, 5:36 PM IST

ನೋಯ್ಡಾದ ಕಾರ್ಖಾನೆಯೊಂದರಲ್ಲಿ ವಸ್ತ್ರ ಕಳ್ಳತನದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ತಂಡವನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 35 ಲಕ್ಷ ರೂಪಾಯಿ ಮೌಲ್ಯದ ಸುಮಾರು 28000 ಮೀಟರ್ ಬಟ್ಟೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ..

New Delhi: Police arrest three thieves with stolen clothes worth Rs 35 lakh
ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತ್ರ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ತಂಡ ಪೊಲೀಸರ ವಶ

ನವದೆಹಲಿ : ನೋಯ್ಡಾದ ಕಾರ್ಖಾನೆಯೊಂದರಲ್ಲಿ ವಸ್ತ್ರ ಕಳ್ಳತನದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ತಂಡವನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ವಸ್ತ್ರ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ತಂಡ ಪೊಲೀಸರ ವಶ

ಎ-15 ಸೆಕ್ಟರ್-83 ಕಂಪನಿಯಿಂದ ಜೂನ್ 31/01 ರ ಮಧ್ಯರಾತ್ರಿ ಬಟ್ಟೆ ಕಳ್ಳತನ ಮಾಡಲಾಗಿದೆ. ಸದ್ಯ ಬಂಧಿತರಿಂದ 35 ಲಕ್ಷ ರೂ. ಮೌಲ್ಯದ ಸುಮಾರು 28000 ಮೀಟರ್ ಬಟ್ಟೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಫಹೀಮ್-ಉದ್-ದಿನ್ ಮಲಿಕ್, ಶಕೀರ್ ಶೇಖ್ ಮತ್ತು ಸಂತೋಷ್ ಪುತ್ರ ಚೇತ್ರಮ್ ಎಂಬ ಮೂವರು ಕಳ್ಳರು ಪೊಲೀಸರ ಪಾಲಾದರೆ ಇನ್ನೂ ಅವರ ನಾಲ್ವರು ಸಹಚರರಾದ ಮುನ್ನಾ ಕರೇಶಿ, ಸಲೀಮ್ ಕಬಡ್ಡಿ (ಗೋದಾಮಿನ ಮಾಲೀಕರು), ರಾಕೇಶ್ ಮತ್ತು ದಿನೇಶ್ ಅಲಿಯಾಸ್ ಪಂಡಿತ್, ಸುದರ್ಶನ್ ಅಖಾ ಸುಖ್ಬೀರ್ ಪರಾರಿಯಾಗಿದ್ದಾರೆ.

ಕಂಪನಿಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸಹಾಯದಿಂದ ಆರೋಪಿಗಳು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾವಲುಗಾರನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಂತರ ಚಹಾದಲ್ಲಿ ಮಾದಕ ದ್ರವ್ಯ ಬೆರೆಸಿ ಕಾರ್ಖಾನೆಯ ಕಾವಲುಗಾರನಿಗೆ ಕುಡಿಸಿ ನಿದ್ರಾಹೀನಗೊಳಿಸಿ ಕಳ್ಳತನ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.