ಸತಾರಾ(ಮಧ್ಯಪ್ರದೇಶ): ಕೋವಿಡ್-19 ಮಾಹಾಮಾರಿ ಹೊಡೆದೋಡಿಸಲು ಕೊರೊನಾ ವಾರಿಯರ್ಸ್ ಹಗಲು-ರಾತ್ರಿ ಲೆಕ್ಕ ಹಾಕದೇ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ಕೆಲ ಆರೋಗ್ಯ ಸಿಬ್ಬಂದಿ ಮಾಡುವ ಎಡವಟ್ಟು ಎಲ್ಲರಿಗೂ ತೊಂದರೆಯಾಗುವಂತೆ ಮಾಡುತ್ತಿದೆ.
ಮಧ್ಯಪ್ರದೇಶದ ಸತಾರಾದಲ್ಲಿ ಆರೋಗ್ಯ ಸಿಬ್ಬಂದಿ ನಡೆದುಕೊಂಡಿರುವ ರೀತಿಗೆ ಇಡೀ ಆರೋಗ್ಯ ಇಲಾಖೆ ತಲೆತಗ್ಗಿಸುವಂತೆ ಆಗಿದೆ. ಕೊರೊನಾ ಸೋಂಕಿತ ವ್ಯಕ್ತಿಯನ್ನ ಆ್ಯಂಬುಲೆನ್ಸ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿ ನಡುರಸ್ತೆಯಲ್ಲಿ ಮದ್ಯದಂಗಡಿ ಮುಂದೆ ವಾಹನ ನಿಲ್ಲಿಸಿ ಮದ್ಯ ಖರೀದಿ ಮಾಡಿರುವ ದೃಶ್ಯ ಕಂಡು ಬಂದಿದೆ.
ಸತ್ನಾ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಇವರಾಗಿದ್ದು, ಪಿಪಿಟಿ ಕಿಟ್ ಧರಿಸಿರುವ ಇವರು, ಮದ್ಯ ಖರೀದಿ ಮಾಡಿದ್ದಾರೆ. ಆ್ಯಂಬುಲೆಮ್ಸ್ ನಂಬರ ಎಸ್.ಎಂಪಿ 19, ಜಿಎ 4283 ಆಗಿದ್ದು, ಇದರಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಮದ್ಯದಂಗಡಿ ಸಮೀಪದಲ್ಲಿರುವ ಕೆಲವರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.