ETV Bharat / bharat

ಕೊರೊನಾ ಗೆದ್ದು ಮನೆಗೆ ಬಂದ ತಾಯಿಯನ್ನ ಒಳಗೆ ಕರೆದುಕೊಳ್ಳದ ಪಾಪಿ ಮಗ-ಸೊಸೆ!

ಮಹಾಮಾರಿ ಕೊರೊನಾ ವಿರುದ್ಧ ಗೆಲುವು ಸಾಧಿಸಿ ಮನೆಗೆ ಬಂದ ತಾಯಿಯನ್ನ ಮಗ ಮನೆಯೊಳಗೆ ಕರೆದುಕೊಳ್ಳದೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ.

COVID Mother
COVID Mother
author img

By

Published : Jul 25, 2020, 3:16 PM IST

ಹೈದರಾಬಾದ್​: ದೇಶಾದ್ಯಂತ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ಹಲವರು ಯಶಸ್ವಿಯಾಗಿ ಕೋವಿಡ್​​ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿ, ಸಂತಸದಿಂದ ಮನೆಗೆ ಹಿಂದಿರುಗುತ್ತಿದ್ದಾರೆ. ಕುಟುಂಬಸ್ಥರು ಅವರನ್ನ ಅಷ್ಟೇ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ.

ಆದರೆ ಹೈದರಾಬಾದ್​​ನ ಫಿಲ್ಮಿಂ ನಗರದ ಬಿಜೆಆರ್​ ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಾಮಾರಿ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ 55 ವರ್ಷದ ಮಹಿಳೆ ಸೋಂಕಿನ ವಿರುದ್ಧ ಗೆಲುವು ಸಾಧಿಸಿ, ಡಿಸ್ಚಾರ್ಜ್​ ಆಗಿದ್ದಾಳೆ. ಆಸ್ಪತ್ರೆಯಿಂದ ಖುಷಿಯಲ್ಲಿ ಆಕೆ ಮನೆಗೆ ಬರುತ್ತಿದ್ದಂತೆ ಪಾಪಿ ಮಗ ಹಾಗೂ ಸೊಸೆ ಮನೆಯೊಳಗೆ ಬಿಟ್ಟುಕೊಳ್ಳದೆ ಹೊರಗಡೆ ನಿಲ್ಲಿಸಿರುವ ಅಮಾನವೀಯ ಘಟನೆ ನಡೆದಿದೆ.

ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾಗಿದ್ದ ಮಹಿಳೆಯನ್ನ ವೈದ್ಯರು ನಿನ್ನೆ ಸಂಜೆ ಡಿಸ್ಚಾರ್ಜ್​​ ಮಾಡಿದ್ದಾರೆ. ಕೊರೊನಾ ಗೆದ್ದ ಸಂತಸದಲ್ಲಿ ಮನೆಗೆ ಬಂದ ಆಕೆಯನ್ನ ಮಗ ಹಾಗೂ ಸೊಸೆ ಮನೆಯೊಳಗೆ ಕರೆದುಕೊಂಡಿಲ್ಲ. ಹೊರಗಡೆ ನಿಲ್ಲಿಸಿದ್ದಾರೆ. ಹೀಗಾಗಿ ಬೇರೆ ದಾರಿ ಕಾಣದೆ ಮಹಿಳೆ ರೋಡ್​ನಲ್ಲಿ ಕಾಲ ಕಳೆದಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.