ETV Bharat / bharat

ಅನಾರೋಗ್ಯದ ಹಿನ್ನೆಲೆ: ರಾಜ್ಯಸಭೆಯಿಂದ ರಜೆ ಕೋರಿದ ಮನಮೋಹನ್ ಸಿಂಗ್

author img

By

Published : Mar 23, 2020, 4:27 PM IST

Updated : Mar 23, 2020, 4:50 PM IST

ಮನಮೋಹನ್ ಸಿಂಗ್ ಅವರು ಅನಾರೋಗ್ಯದ ಹಿನ್ನೆಲೆ ರಾಜ್ಯಸಭೆಯಿಂದ ರಜೆ ಕೋರಿದ್ದು, ಸದನವು ರಜೆ ಮಂಜೂರು ಮಾಡಿದೆ ಎಂದು ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

Manmohan
ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅನಾರೋಗ್ಯದ ಹಿನ್ನೆಲೆ ರಾಜ್ಯಸಭೆಯಿಂದ ರಜೆ ಕೋರಿದ್ದು, ಸದನವು ರಜೆ ಮಂಜೂರು ಮಾಡಿದೆ ಎಂದು ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಸದನದಲ್ಲಿ ಸೋಮವಾರ ಪ್ರಸ್ತಾಪಿಸಿದ್ದಾರೆ.

ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿರುವ ಎಂ.ವೆಂಕಯ್ಯ ನಾಯ್ಡು, ಡಾ.ಮನಮೋಹನಸಿಂಗ್​ ಅವರಿಂದ ಒಂದು ಪತ್ರ ಬಂದಿದೆ. "ನಾನೂ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನಲೆ ಮಾರ್ಚ್ 19 ರಿಂದ ಪ್ರಸ್ತುತ ಅಧಿವೇಶನದ ಉಳಿದ ಭಾಗದವರೆಗೆ ಸಭೆಗೆ ಹಾಜರಾಗಲು ಸಾಧ್ಯವಿಲ್ಲ" ಎಂದು ತಿಳಿಸಿ ಮಾರ್ಚ್ 19 ರಿಂದ ಗೈರುಹಾಜರಿ ರಜೆ ನೀಡುವಂತೆ ಕೋರಿದ್ದಾರೆ ಎಂದು ನಾಯ್ಡು ತಿಳಿಸಿದ್ದಾರೆ.

ನಂತರ ಸದನವು ರಜೆಗೆ ಅನುಮೋದನೆ ನೀಡಿದೆ. ಕೊರೊನಾ ವೈರಸ್ ಏಕಾಏಕಿ ಉಲ್ಭಣಗೊಂಡಿರುವ ಹಿನ್ನೆಲೆ ರಾಜ್ಯಸಭೆ ಕಲಾಪವನ್ನ ಸೋಮವಾರದಿಂದ ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗುವುದು ಎಂದು ನಾಯ್ಡು ಸದನದಲ್ಲಿ ಪ್ರಕಟಿಸಿದರು. ಬಜೆಟ್ ಅಧಿವೇಶನವನ್ನು ಏಪ್ರಿಲ್ 3 ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿಲಾಗಿದೆ.

Last Updated : Mar 23, 2020, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.