ETV Bharat / bharat

ಅಪಾಯದ ಮಟ್ಟದಲ್ಲಿ ನೀರಿನ ಬಿಕ್ಕಟ್ಟು; ಅಂತರ್ಜಲ ಉಳಿವಿಗೆ ಇದೇ ಸಕಾಲ

ದೇಶದಲ್ಲಿ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. ನಾಸಾ ಅಧ್ಯಯನದ ಪ್ರಕಾರ, ಭಾರತವು ಇತ್ತೀಚಿನ ವರ್ಷಗಳಲ್ಲಿ 10 ಅಡಿಗಳಷ್ಟು ಅಂತರ್ಜಲವನ್ನು ಕಳೆದುಕೊಂಡಿದೆ. ಇದು ಯುಎಸ್​​ನಲ್ಲಿ ಮಾನವ ನಿರ್ಮಿತ ಅತಿ ದೊಡ್ಡ ಜಲಾಶಯವಾದ ಲೇಕ್​​ಮೀಡ್​ ಅನ್ನು ತುಂಬಲು ಬೇಕಾದ ನೀರಿಗೆ ಸಮ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದೆ.

MAKE NO MISTAKE ABOUT INDIA WATER CRISIS
ಅಂತರ್ಜಲ
author img

By

Published : Sep 7, 2020, 12:14 AM IST

ನವದೆಹಲಿ: ಸ್ವಾತಂತ್ರ್ಯ ಗಳಿಸಿ ಏಳು ದಶಕ ಪೂರೈಸಿರುವ ಭಾರತ ದೇಶವು ನೀರಿನ ಅಣೆಕಟ್ಟುಗಳು, ಜಲಾಶಯಗಳು ಮತ್ತು ಬ್ಯಾರೇಜ್‌ಗಳ ನಿರ್ಮಾಣವನ್ನು ಮಾಡುತ್ತಲೇ ಬಂದಿದೆ. ಆದರೆ ಇಂದಿಗೂ ಕೂಡ ದೇಶದ ಜನಸಂಖ್ಯೆಯ ಶೇ 85 ರಷ್ಟು ಜನ ಕುಡಿಯುವ ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ರೈತರಿಗೆ ನೀರಾವರಿಯ ಮೂಲ ಕೂಡ ಅಂತರ್ಜಲವೇ ಆಗಿದೆ.

ಅಂತರ್ಜಲ ನೀರಿನ ಮಹತ್ವದ ಮೂಲವಾಗಿದ್ದರೂ ಇದು ನಮ್ಮ ದೇಶದಲ್ಲಿ ಹೆಚ್ಚು ಕಲುಷಿತ ಮತ್ತು ನಿರ್ಲಕ್ಷಿತ ಸಂಪನ್ಮೂಲವಾಗಿದೆ. ಮಳೆನೀರನ್ನು ಸರಿಯಾಗಿ ಸಂಗ್ರಹಿಸದ ಕಾರಣ ಭಾರತವು ತನ್ನ ವಾರ್ಷಿಕ ಮಳೆಯ ಶೇಕಡಾ 8 ರಷ್ಟು ಮಾತ್ರ ಸಂಗ್ರಹಿಸಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿದೆ. ಇದರ ಪರಿಣಾಮವಾಗಿ ಅಂತರ್ಜಲದ ಮಟ್ಟ ಕುಸಿತ ಕಾಣುತ್ತಿದೆ. ಇದು ದೇಶದ ಅನೇಕ ಭಾಗಗಳಲ್ಲಿ ತೀವ್ರ ನೀರಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಅಷ್ಟೇ ಅಲ್ಲ ಭಾರತದ ತಲಾ ನೀರಿನ ಲಭ್ಯತೆಯು 2025 ರಲ್ಲಿ 25 ಪ್ರತಿಶತದಷ್ಟು ಕುಸಿಯುತ್ತದೆ ಮತ್ತು 2035 ರ ವೇಳೆಗೆ ಅಪಾಯಕಾರಿ ಮಟ್ಟವನ್ನು ಮುಟ್ಟುತ್ತದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಈ ಪರಿಸ್ಥಿತಿಯನ್ನು ಸರಿಯಾಗಿ ನಿರ್ಣಯಿಸಿದ ಜಲಶಕ್ತಿ ಸಚಿವಾಲಯವು ನೀರಿನ ಬಳಕೆಯನ್ನು ಉತ್ತಮಗೊಳಿಸುವ ಚೌಕಟ್ಟನ್ನು ಅಭಿವೃದ್ಧಿಪಡಿಸಿತು. ಅದರಂತೆ ಈ ಜಲ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ನಿಗಮಗಳು ಮತ್ತು ಜಲಮಂಡಳಿಗಳನ್ನು ಸಚಿವಾಲಯ ಕೇಳಿತು ಮತ್ತು ನೀರಿನ ವ್ಯರ್ಥಕ್ಕೆ ದಂಡ ವಿಧಿಸುವ ವಿಚಾರವನ್ನು ಪ್ರಸ್ತಾಪಿಸಿತು. ಜೊತೆಗೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯವು 2017 ರ ಅಕ್ಟೋಬರ್‌ನಲ್ಲಿ ಅಂತರ್ಜಲ ಸಂಪನ್ಮೂಲಗಳ ನಿಯಂತ್ರಣಕ್ಕಾಗಿ ಹೊಸ ಕರಡು ನಿಯಮಗಳನ್ನು ಜಾರಿಗೆ ತಂದಿತು.

ಅಂತೆಯೇ 2019 ರ ಆಗಸ್ಟ್ ನಲ್ಲಿ ಆರಂಭಿಸಿದ ಜಲ ಶಕ್ತಿ ಅಭಿಯಾನ್ 256 ಜಿಲ್ಲೆಗಳಲ್ಲಿ ನೀರಿನ ಸಂರಕ್ಷಣಾ ಕ್ರಮಗಳನ್ನು ಪ್ರಾರಂಭಿಸಿದೆ. ಆದರೆ ಪರಿಸ್ಥಿತಿ ತುಂಬಾ ನಿರ್ಣಾಯಕವಾಗುವ ಮೊದಲು, ಈ ಸಂರಕ್ಷಣಾ ಪ್ರಯತ್ನಗಳ ಪರಿಣಾಮಕಾರಿ ಅನುಷ್ಠಾನವನ್ನು ಕೇಂದ್ರವು ಖಚಿತಪಡಿಸಿಕೊಳ್ಳಬೇಕು.

ಪರಿಸರವಾದಿ ಮತ್ತು “ವಾಟರ್‌ಮ್ಯಾನ್ ಆಫ್ ಇಂಡಿಯಾ” ರಾಜೇಂದ್ರ ಸಿಂಗ್ ಅವರು, ದೇಶದ ಶೇಕಡಾ 72 ರಷ್ಟು ಅಂತರ್ಜಲ ಸಂಪನ್ಮೂಲಗಳು ದುರಸ್ತಿಗೆ ಮೀರಿ ಖಾಲಿಯಾಗಿವೆ ಎಂದಿದ್ದಾರೆ.

ನಾಸಾ ಅಧ್ಯಯನದ ಪ್ರಕಾರ, ಭಾರತವು ಇತ್ತೀಚಿನ ವರ್ಷಗಳಲ್ಲಿ 10 ಅಡಿಗಳಷ್ಟು ಅಂತರ್ಜಲವನ್ನು ಕಳೆದುಕೊಂಡಿದೆ. ಇದು ಯುಎಸ್​​ನಲ್ಲಿ ಮಾನವ ನಿರ್ಮಿತ ಅತಿ ದೊಡ್ಡ ಜಲಾಶಯವಾದ ಲೇಕ್​​ಮೀಡ್​ ಅನ್ನು ತುಂಬಲು ಬೇಕಾದ ನೀರಿಗೆ ಸಮ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದೆ.

ಇನ್ನು ಮಿಹಿರ್ ಷಾ ಸಮಿತಿಯ ಪ್ರಕಾರ, ವಿವೇಚನೆಯಿಲ್ಲದೆ ಮತ್ತು ಬೋರ್‌ವೆಲ್‌ಗಳನ್ನು ಆಳವಾಗಿ ಕೊರೆಯುವುದರಿಂದ ದೇಶದ ಹಲವಾರು ಭಾಗಗಳಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದೆ ಎಂದು ವರದಿ ಮಾಡಿದೆ.

ಖಾಸಗಿ ಕುಡಿಯುವ ನೀರಿನ ಬಾಟಲಿ ತಯಾರಿಕಾ ಘಟಕಗಳ ಮೇಲೆ ರಾಜ್ಯದ ಅಧಿಕಾರಿಗಳು ಸೂಕ್ತ ಶುಲ್ಕ ವಿಧಿಸಬೇಕೆಂದು ಮದ್ರಾಸ್ ಹೈಕೋರ್ಟ್ ಮಾರ್ಚ್​​ನಲ್ಲಿಯೇ ಸೂಚಿಸಿತ್ತು. ಯುಕೆ, ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ದಕ್ಷಿಣ ಆಫ್ರಿಕಾಗಳು ಪ್ರತಿ ಮಳೆ ಹನಿಯನ್ನು ಸಂರಕ್ಷಿಸುತ್ತಿದ್ದರೆ, ಇತ್ತ ಜಲಸಂಪನ್ಮೂಲಗಳ ಮಹತ್ವದ ಬಗ್ಗೆ ನ್ಯಾಯಾಲಯಗಳು ನಮಗೆ ತಿಳುವಳಿಕೆ ನೀಡಲು ನಾವು ಕಾಯುವ ದುಸ್ಥಿತಿ ಬಂದೊದಗಿರುವುದು ವಿಷಾದನೀಯ.

ಇಲ್ಲಿ 90 ಪ್ರತಿಶತದಷ್ಟು ಮಳೆನೀರು ಸಮುದ್ರಕ್ಕೆ ಹರಿಯುತ್ತದೆ. ಆದರೂ ಲಕ್ಷಾಂತರ ಜನರಿಗೆ ಲಕ್ಷಾಂತರ ಜನರಿಗೆ ಸುರಕ್ಷಿತ ಕುಡಿಯುವ ನೀರಿಲ್ಲ. ಆದರೆ ಆ ನೀರು ಎಲ್ಲೂ ಕಳೆದುಹೋಗಿಲ್ಲ. ಉಪಯೋಗಿಸಿಕೊಳ್ಳುವ ಮಾರ್ಗಗಳ ಕೊರತೆ ಇದೆ ಅಷ್ಟೆ. ಉದಾಹರಣೆಗೆ ತೆಲಂಗಾಣ ರಾಜ್ಯ ಹಳ್ಳಿಗಳು ಮತ್ತು ನಗರಗಳ ಮನೆಗಳಿಗೆ 'ಮಿಷನ್ ಭಗೀರಥ' ಸುರಕ್ಷಿತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತಂದಿತು. ಇಲ್ಲಿನ ರಾಜ್ಯ ಸರ್ಕಾರವು ಎಲ್ಲಾ ಪ್ರಮುಖ ಜಲಮೂಲಗಳು ಮತ್ತು ಜಲಾಶಯಗಳನ್ನು ಭರ್ತಿ ಮಾಡಿತು. ಇದರ ಪರಿಣಾಮವಾಗಿ ವರ್ಷವೆಲ್ಲಾ ಹೇರಳವಾಗಿ ಕುಡಿಯಲು ನೀರು ಸರಬರಾಜು ಮಾಡಲಾಯಿತು.

ಹೀಗಾಗಿ ಇತರೆ ರಾಜ್ಯಗಳ ಪ್ರಯತ್ನಗಳನ್ನ ನಾವು ಅನುಕರಿಸಬೇಕು. ಆಗ ನೀರಿನ ಸಂಪನ್ಮೂಲಗಳನ್ನು ಮರುಸ್ಥಾಪಿಸುವುದರಿಂದ ಉತ್ತಮ ಬೆಳೆ ಇಳುವರಿ ಖಚಿತವಾಗುತ್ತದೆ. ಸಾಂಪ್ರದಾಯಿಕ ಬೆಳೆಗಳಾದ ಭತ್ತ ಮತ್ತು ಕಬ್ಬು ಸಾಕಷ್ಟು ನೀರನ್ನು ಹೀರಿಕೊಳ್ಳುತ್ತವೆ. ಹೀಗಾಗಿ ಕೃಷಿ ವಿಜ್ಞಾನಿಗಳು ಮತ್ತು ವಿಶ್ವವಿದ್ಯಾಲಯಗಳು ಕಡಿಮೆ ನೀರನ್ನು ಹೀರಿಕೊಳ್ಳುವ ಬೆಳೆಗಳನ್ನು ಸೂಚಿಸಬಹುದು.

ನೀರನ್ನು ಸಂರಕ್ಷಿಸುವಲ್ಲಿ ನಾಗರಿಕರು ಪ್ರಮುಖ ಪಾತ್ರ ವಹಿಸಬೇಕು. ಸರ್ಕಾರಗಳು ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ನೀರಿನ ಬಗ್ಗೆ ಪಾಠಗಳನ್ನು ಪರಿಚಯಿಸಬೇಕು. ಜೊತೆಗೆ ಮುಂಬರುವ ನೀರಿನ ಬಿಕ್ಕಟ್ಟನ್ನು ತಪ್ಪಿಸಲು ಕೇಂದ್ರವು ನೀರಿನ ಸಂರಕ್ಷಣೆಯನ್ನು ರಾಷ್ಟ್ರೀಯ ಕಾರ್ಯತಂತ್ರವನ್ನಾಗಿ ಮಾಡಬೇಕು. ಆಗ ಮಾತ್ರ ಅಂತರ್ಜಲದ ಉಳಿವು ಸಾಧ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.