ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಪಣ ತೊಟ್ಟಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಾಕಷ್ಟು ರ‍್ಯಾಲಿ ನಡೆಸಲು ಉದ್ದೇಶಿಸಿದ್ದಾರೆ.
ದೀದಿ ಎರಡು ವಾರದಲ್ಲಿ ಬರೋಬ್ಬರಿ ನೂರು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಮತಾ ಬ್ಯಾನರ್ಜಿ ರ‍್ಯಾಲಿ ಏಪ್ರಿಲ್ 4ರಂದು ಆರಂಭವಾಗಲಿದೆ.
"ಏಪ್ರಿಲ್ 4ರಂದು ನಾನು ಪ್ರಚಾರ ಆರಂಭಿಸಲಿದ್ದು, ಸುಮಾರು ನೂರು ರ‍್ಯಾಲಿಯಲ್ಲಿ ಮಾತನಾಡಲಿದ್ದೇನೆ. ಅಸ್ಸೋಂನಲ್ಲೂ ರ‍್ಯಾಲಿ ನಡೆಸಲಿದ್ದೇವೆ" ಎಂದು ಮಮತಾ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳಿದ್ದು ಪ್ರತಿಯೊಂದು ಕ್ಷೇತ್ರದಲ್ಲೂ ಕನಿಷ್ಠ ಎರಡು ರ‍್ಯಾಲಿ ಉದ್ದೇಶಿಸಿ ದೀದಿ ಮಾತನಾಡಲಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ಮಾರ್ಚ್ 31ರಂದು ಆಂಧ್ರ ಪ್ರದೇಶಕ್ಕೆ ಆಗಮಿಸಲಿದ್ದು ಈ ವೇಳೆ ತೆಲುಗು ದೇಶಂ ಪಾರ್ಟಿ ಪರ ಪ್ರಚಾರ ನಡೆಸಲಿದ್ದಾರೆ.