ಅಹಮದಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮುಂದಿನ ಚುನಾವಣೆಯಲ್ಲಿ ಪಕ್ಕದ ದೇಶದಿಂದ ಸ್ಪರ್ಧಿಸಲಿ ಎಂದು ಸಚಿವ ಪಿಯೂಶ್ ಗೋಯಲ್ ಅವರು ವ್ಯಂಗ್ಯವಾಡಿದ್ದಾರೆ.
ಅಹಮದಾಬಾದ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಾರಿ ಅಮೇಠಿ ಹಾಗೂ ವಯನಾಡು ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಸೋಲು ಅನುಭವಿಸಲಿದ್ದು, ಅವರು ಪಕ್ಕದ ದೇಶದಿಂದ ಸ್ಪರ್ಧಿಸಬೇಕಾಗುತ್ತದೆ ಎಂದು ಕಟುಕಿದರು.
ಅಮೇಠಿಯಲ್ಲಿ ಈ ಸಾರಿ ಸ್ಮೃತಿ ಇರಾನಿ ಅವರು ರಾಹುಲ್ ಅವರನ್ನು ಸೋಲಿಸುವುದು ಖಂಡಿತ. ವಯನಾಡಿನಿಂದ ಸ್ಪರ್ಧಿಸಿರುವ ರಾಹುಲ್ ಅವರು ತಮ್ಮ ಎದುರಾಳಿ ಪಕ್ಷ ಸಿಪಿಐ ವಿರುದ್ಧ ಒಂದೂ ಮಾತನಾಡದಿರುವುದು ಅವರ ಎದೆಗಾರಿಕೆಗೆ ಹಿಡಿದ ಕನ್ನಡಿ ಎಂದು ಕೊಂಕು ಮಾತನಾಡಿದರು.