ETV Bharat / bharat

ಹೊಸ ಸರ್ಕಾರದ ರಚನೆಗೆ ಅಡಿ ಇಟ್ಟ ಎನ್​ಡಿಎ ಮೈತ್ರಿಕೂಟ; ಹಿಂದುಳಿದ ವರ್ಗದ ಪ್ರತಿನಿಧಿಗೆ ಒಲಿದ ಡಿಸಿಎಂ ಪಟ್ಟ

author img

By

Published : Nov 16, 2020, 6:25 PM IST

243 ವಿಧಾನಸಭಾ ಸದಸ್ಯ ಬಲ ಹೊಂದಿರುವ ಬಿಹಾರದಲ್ಲಿ ಸರ್ಕಾರ ರಚನೆಗೆ 122 ಸ್ಥಾನಗಳು ಬೇಕು. ಎನ್​ಡಿಎ 125 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಎನ್​ಡಿಎ ಮೈತ್ರಿಕೂಟಕ್ಕೆ ಸಿಎಂ ಕುರ್ಚಿ ಖಾತ್ರಿಯಾಗಿದ್ದು, ಒಪ್ಪಂದದಂತೆ ನಿತೀಶ್ ಕುಮಾರ್​ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ..

Know all about Bihar's deputy CM-designate Tarkishore Prasad
ಭಾರತೀಯ ಜನತಾ ಪಕ್ಷದ ಶಾಸಕ ತರ್ಕಿಶೋರ್ ಪ್ರಸಾದ್

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಬಹುಮತ ಗಳಿಸಿದ ಎನ್​ಡಿಎ ಮೈತ್ರಿಕೂಟ ಇಂದು ಮತ್ತೆ ಹೊಸ ಸರ್ಕಾರದ ರಚನೆಗೆ ಅಡಿ ಇಟ್ಟಿತು. ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನಾಗಿ ಹಾಲಿ ಸಿಎಂ ನಿತೀಶ್ ಕುಮಾರ್ ಮರು ಆಯ್ಕೆಯಾಗಿದ್ರೆ ಡಿಸಿಎಂ ಪಟ್ಟವನ್ನು ತರ್ಕಿಶೋರ್ ಪ್ರಸಾದ್ ಅಲಂಕರಿಸಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭಾರತೀಯ ಜನತಾ ಪಕ್ಷದ ಶಾಸಕ ತರ್ಕಿಶೋರ್ ಪ್ರಸಾದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ತರ್ಕಿಶೋರ್ ಪ್ರಸಾದ್ ಅವರು ಇಂದು ಬಿಹಾರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ತರ್ಕಿಶೋರ್ ಪ್ರಸಾದ್ ಆಯ್ಕೆಗೆ ಮುನ್ನ ರಾಜ್ಯದಲ್ಲಿ ಎನ್​ಡಿಎ ಮೈತ್ರಿಕೂಟದ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆದಿತ್ತು. ಸಭೆ ಮೇಲೆ ಸಭೆ ಮಾಡಲಾಗಿತ್ತು.

ಕೊನೆಗೆ ಸರ್ವಾನುಮತದಿಂದ 64 ವರ್ಷದ ಬಿಜೆಪಿ ಮುಖಂಡ, ಶಾಸಕ ತರ್ಕಿಶೋರ್ ಪ್ರಸಾದ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಇಂದು ಸಂಜೆ ಅವರು ಬಿಹಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆರ್​ಎಸ್​ಎಸ್​ನ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಲ್ಲಿ ಗುರುತಿಸಿಕೊಂಡಿದ್ದ ತರ್ಕಿಶೋರ್ ಪ್ರಸಾದ್, ಹಲವು ರಾಜಕೀಯ ತಂತ್ರಗಳನ್ನು ಹೆಣೆಯುವ ಮೂಲಕ ಗಮನ ಸೆಳೆದಿದ್ದರು. ವೈಶ್ಯ ಸಮುದಾಯಕ್ಕೆ ಸೇರುವ ಕಲ್ವಾರ್ ಜಾತಿಗೆ ಸೇರಿದವರಾದ ಕಿಶೋರ್ ಅವರು ಹಿಂದುಳಿದ ವರ್ಗದ ಪ್ರತಿನಿಧಿಯಾಗಿ ಇಂದು ನಿತೀಶ್ ಕುಮಾರ್ ಅವರ ಸಂಪುಟ ಸೇರಿದ್ದಾರೆ.

2005ರಿಂದ ಬಿಹಾರದ ಕಥಿಹಾ ಕ್ಷೇತ್ರದಿಂದ ಪ್ರತಿನಿಧಿಸುತ್ತಾ ಬಂದಿರುವ ತರ್ಕಿಶೋರ್ ಪ್ರಸಾದ್ ಇದೀಗ ನಾಲ್ಕನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ. ಅವರ ತಳಮಟ್ಟದ ಹೋರಾಟದ ಹಾದಿ ಗುರುತಿಸಿ ಹಾಗೂ ಪಕ್ಷಕ್ಕೆ ತೋರಿದ ನಿಷ್ಟೇ ಕಂಡು ಬಿಜೆಪಿಯ ಹೈಕಮಾಂಡ್​ ಅವರಿಗೆ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗುವಂತೆ ಕರೆ ನೀಡಿತ್ತು. ಅದರಂತೆ ಇಂದು ಪ್ರಮಾಣ ವಚನ ಸ್ವೀಕರಿಸಿದರು.

10+2 ತನಕ ಓದಿರುವ ಕಿಶೋರ್ ಅವರು ವೃತ್ತಿಯಿಂದ ಕೃಷಿಕ ಎಂದು ತಮ್ಮ ಅಫಿಡವಿಟ್​​ನಲ್ಲಿ ಬರೆದುಕೊಂಡಿದ್ದಾರೆ. 1974 ರಲ್ಲಿ ಕಥಿಹಾರ್​​ನ ಡಿಎಸ್ ಕಾಲೇಜಿನಲ್ಲಿ ಈ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿದ ಬಳಿಕ ಸಂಘದ ಚಟುವಟಿಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದರು.

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಅಭ್ಯರ್ಥಿ ಡಾ.ರಾಮ್ ಪ್ರಕಾಶ್ ಮಹ್ತೋ ಅವರನ್ನು 10,500 ಮತಗಳ ಅಂತರದಿಂದ ಸೋಲಿಸುವ ಮೂಲಕ ಕಿಶೋರ್ ದಾಖಲೆ ಬರೆದಿದ್ದಾರೆ. ಇನ್ನು ಲಾಲು ಪ್ರಸಾದ್​ ಯಾದವ್​ ಮತ್ತು ನಿತೀಶ್ ಕುಮಾರ್​ ಅವರ ಪ್ರಬಲ ಪ್ರಚಾರದ ಹೊರತಾಗಿಯೂ ಕಿಶೋರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

243 ವಿಧಾನಸಭಾ ಸದಸ್ಯ ಬಲವಿರುವ ಬಿಹಾರದಲ್ಲಿ ಸರ್ಕಾರ ರಚನೆಗೆ 122 ಸ್ಥಾನಗಳು ಬೇಕು. ಎನ್​ಡಿಎ 125 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಎನ್​ಡಿಎ ಮೈತ್ರಿಕೂಟಕ್ಕೆ ಸಿಎಂ ಕುರ್ಚಿ ಖಾತ್ರಿಯಾಗಿದ್ದು, ಒಪ್ಪಂದದಂತೆ ನಿತೀಶ್ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ.

ಸೀಮಾಂಚಲ್‌ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಮಿತ್ರ ಜೆಡಿಯು 24 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿವೆ. ಬಿಜೆಪಿ ಅಷ್ಟೇ ಎಂಟು ಸ್ಥಾನಗಳನ್ನು ಗೆದ್ದಿದೆ. ಹಾಗಾಗಿ ಸೀಮಾಂಚಲ್‌ನಲ್ಲಿ ಬಿಜೆಪಿ ಇಷ್ಟು ಸೀಟು ಗೆಲ್ಲಲು ಕಾರಣೀಕರ್ತರಾದ ಕಿಶೋರ್ ಅವರನ್ನು ಹೈಕಮಾಂಡ್​ ಪ್ರಶಂಸಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.