ETV Bharat / bharat

ಕಮಲ್ ಹಾಸನ್​ ಮನೆಗೆ 'ಹೋಂ ಕ್ವಾರಂಟೈನ್​' ಸ್ಟಿಕ್ಕರ್ ಅಂಟಿಸಿದ್ಯಾಕೆ?

ಕಮಲ್​ ಹಾಸನ್​ ಮನೆಯ ಗೋಡೆಗೆ ಹೋಂ ಕ್ವಾರಂಟೈನ್​ ಎಂದು ಸ್ಟಿಕ್ಕರ್​ ಅಂಟಿಸಿದ್ದು, ನಂತರ ತೆಗೆದಿದ್ದು ವಿವಾದ ಸೃಷ್ಟಿಸಿದೆ. ಈ ಸ್ವತಃ ಕಮಲ್ ಹಾಸನ್​ ಸ್ಪಷ್ಟೀಕರಣ ನೀಡಿದ್ದು, ನನ್ನನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿಲ್ಲ ಎಂದಿದ್ದಾರೆ.

kamal-haasan, home quarantine
kamal-haasan
author img

By

Published : Mar 28, 2020, 2:55 PM IST

ಚೆನ್ನೈ: ಖ್ಯಾತ ನಟ ಕಮಲ್​ ಹಾಸನ್​ ಅವರ ಮನೆಯ ಗೋಡೆಗೆ ಕೋವಿಡ್​-19 'ಹೋಂ ಕ್ವಾರಂಟೈನ್​' ಸ್ಟಿಕ್ಕರ್ ಅಂಟಿಸಿದ್ದು ಹಾಗೂ ನಂತರ ತೆಗೆದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಗ್ರೇಟರ್​ ಚೆನ್ನೈ ಮಹಾನಗರಪಾಲಿಕೆ ಸಿಬ್ಬಂದಿ ಕಮಲ್​ ಹಾಸನ್​ ಮನೆಯ ಗೋಡೆಗೆ 'ಹೋಂ ಕ್ವಾರಂಟೈನ್​' ಸ್ಟಿಕ್ಕರ್ ಅಂಟಿಸಿದ್ದರು. ಆದರೆ ಕೆಲ ಗಂಟೆಗಳ ನಂತರ ಅವರೇ ಹೋಗಿ ಸ್ಟಿಕ್ಕರ್​ ತೆಗೆದಿದ್ದಾರೆ. ತಿಳಿಯದೆ ತಪ್ಪಾಗಿ ಸ್ಟಿಕ್ಕರ್ ಅಂಟಿಸಲಾಗಿತ್ತು ಎಂದು ಪಾಲಿಕೆ ಈ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡಿದೆ. ಮಹಾನಗರ ಪಾಲಿಕೆಯ ಈ ಕ್ರಮ ಈಗ ವಿವಾದಕ್ಕೆ ಕಾರಣವಾಗಿದೆ.

ಸ್ಟಿಕ್ಕರ್ ಅಂಟಿಸುವ ಮೂಲಕ ಸರ್ಕಾರ ಕಮಲ್​ ಹಾಸನ್​ಗೆ ಕಿರುಕುಳ ನೀಡುತ್ತಿದೆ ಎಂದು ಮಕ್ಕಳ್ ನೀಧಿ ಮೈಯಮ್​ ಪಕ್ಷದ ವಕ್ತಾರ ಮುರಲಿ ಅಪ್ಪಾಸ್ ಆರೋಪಿಸಿದ್ದಾರೆ. ಕಮಲ್​ ಕಳೆದ ಜನೇವರಿಯಿಂದ ಭಾರತದಲ್ಲೇ ಇದ್ದಾರೆ. ಪ್ರಸ್ತುತ ಕಮಲ್​ ಅವರ ಈ ಮನೆ ಪಕ್ಷದ ಕಚೇರಿಯಾಗಿದೆ. ಕಚೇರಿ ಎದುರು ಭದ್ರತಾ ಸಿಬ್ಬಂದಿ ಇದ್ದರೂ ಅವರಿಗೆ ಒಂದು ಮಾತೂ ಕೇಳದೆ ರಾತ್ರಿ ಸಮಯದಲ್ಲಿ ಸ್ಟಿಕ್ಕರ್ ಅಂಟಿಸಲಾಗಿದೆ ಎಂದು ಮುರಲಿ ಅಪ್ಪಾಸ್ ಹೇಳಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಕಮಲ್ ಹಾಸನ್, 'ನನ್ನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂಬುದು ಸುಳ್ಳು. ಸುರಕ್ಷತೆಯ ದೃಷ್ಟಿಯಿಂದ ನಾನಾಗಿಯೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇನೆ. ಜನತೆಗೂ ಅದನ್ನೇ ಮಾಡುವಂತೆ ತಿಳಿಸಿದ್ದೇನೆ.' ಎಂದಿದ್ದಾರೆ.

'ನಮ್ಮ ಸಂಪೂರ್ಣ ಕುಟುಂಬ ಸ್ವಇಚ್ಛೆಯಿಂದ ಪ್ರತ್ಯೇಕವಾಸದಲ್ಲಿದೆ. ಅಮ್ಮ (ನಟಿ ಸಾರಿಕಾ) ಮುಂಬೈನಲ್ಲಿ ಬೇರೆ ಅಪಾರ್ಟ್​ಮೆಂಟ್​ನಲ್ಲಿದ್ದಾರೆ. ಅಪ್ಪ (ಕಮಲ್​) ಮತ್ತು ಅಕ್ಷರಾ (ತಂಗಿ) ಇಬ್ಬರೂ ಚೆನ್ನೈನಲ್ಲಿದ್ದರೂ ಬೇರೆ ಬೇರೆ ಮನೆಗಳಲ್ಲಿದ್ದಾರೆ. ಎಲ್ಲರೂ ನಮ್ಮದೇ ಆದ ಪ್ರತ್ಯೇಕ ಪ್ರಯಾಣದ ಶೈಲಿಯನ್ನು ಹೊಂದಿರುವುದರಿಂದ ಎಲ್ಲರೂ ಒಂದೇ ಕಡೆ ಪ್ರತ್ಯೇಕವಾಸದಲ್ಲಿ ಇರುವುದು ಸೂಕ್ತವಾಗಲಾರದು. ಜನತೆ ಸಹ ಇದೇ ರೀತಿ ಇರಬೇಕು' ಎಂದು ಕಮಲ್​ ಪುತ್ರಿ ಶೃತಿ ಹಾಸನ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.