ಅಹಮದಾಬಾದ್: ಮಹಾಮಾರಿ ಕೊರೊನಾ ವೈರಸ್ ಕಾರಣ ಕಳೆದ ಏಳು ತಿಂಗಳಿಂದ ಸೇವೆ ಸ್ಥಗಿತಗೊಳಿಸಿದ್ದ ತೇಜಸ್ ಎಕ್ಸ್ಪ್ರೆಸ್ ಇಂದಿನಿಂದ ಸೇವೆ ಪುನಾರಂಭ ಮಾಡಿದೆ.ದೇಶದಲ್ಲಿ ಹಬ್ಬಗಳು ಆರಂಭಗೊಳ್ಳುತ್ತಿರುವ ಕಾರಣ ತೇಜಸ್ ಎಕ್ಸ್ಪ್ರೆಸ್ ಇಂದಿನಿಂದ ಕಾರ್ಯರಂಭ ಮಾಡಿದ್ದು, ಇಂದು ಅಹಮದಾಬಾದ್- ಮುಂಬೈ ನಡುವೆ ಮೊದಲ ಪ್ರಯಾಣ ಆರಂಭಿಸಿದೆ.
ಕೊರೊನಾ ಮಾರ್ಗಸೂಚಿ ಬಳಸಿಕೊಂಡು ಬೆಳಗ್ಗೆ 6:40ಕ್ಕೆ ಮುಂಬೈನಿಂದ ಕಾರ್ಯರಂಭ ಆರಂಭಿಸಿದ ತೇಜಸ್ ಮಧ್ಯಾಹ್ನ 01:10ಕ್ಕೆ ಅಹಮದಾಬಾದ್ ತಲುಪಿದೆ. ಇದರಲ್ಲಿ ಪ್ರಯಾಣಿಸಿರುವ ಎಲ್ಲ ಪ್ರಯಾಣಿಕರಿಗೆ ಕೋವಿಡ್ ಕಿಟ್, ಸ್ಯಾನಟೈಸ್ ಬಾಟಲ್ ಹಾಗೂ ಮಾಸ್ಕ್ ನೀಡಲಾಗಿದೆ. ತೇಜಸ್ ಪ್ರಯಾಣದಲ್ಲಿ ಹತ್ತುವುದಕ್ಕೂ ಮುಂಚಿತವಾಗಿ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿದೆ. 200 ಮಂದಿ ಇಂದು ಪ್ರಯಾಣ ಬೆಳೆಸಿದರು.
ಕಳೆದ ವರ್ಷ ಲಕ್ನೋ- ನವದೆಹಲಿ ನಡುವೆ ಮೊದಲ ಸೇವೆ ಆರಂಭಿಸಿತ್ತು. ಇದಾದ ಬಳಿಕ ಮುಂಬೈ- ಅಹಮದಾಬಾದ್ ನಡುವೆ ಕಾರ್ಯರಂಭ ಮಾಡಿದೆ.