ನವದೆಹಲಿ: ಭಾರತೀಯ ವಾಯುಪಡೆಯ ಮಹಿಳಾ ವಿಂಗ್ ಕಮಾಂಡರ್ ಆಗಿರುವ ಅಂಜಲಿ ಸಿಂಗ್ ಅವರನ್ನು ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯಲ್ಲಿ ಡೆಪ್ಯೂಟಿ ಏರ್ ಅಟ್ಯಾಚ್ ಸೇವೆಗೆ ನಿಯೋಜನೆಗೊಳಿಸಲಾಗಿದೆ.ಈ ಮೂಲಕ ಅವರು ಭಾರತದಿಂದ ವಿದೇಶದಲ್ಲಿರುವ ಮೊದಲ ಮಿಟಿಟರಿ ಡಿಪ್ಲೊಮ್ಯಾಟ್ ಎಂಬ ಹಿರಿಮೆಗೆ ಪಾತ್ರರಾದ್ರು.
ಅಂಜಲಿ ಸಿಂಗ್ ಅವರು ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ರಕ್ಷಣಾ ವ್ಯವಹಾರಗಳನ್ನು ನೊಡಿಕೊಳ್ಳುವ ಹುದ್ದೆಗೆ ನಿಯೋಜನೆಗೊಂಡ ಪ್ರಥಮ ಮಹಿಳೆ ಎನ್ನಿಸಿಕೊಂಡರು.
-
Wg Cdr Anjali is an AE(L) officer with 17 yrs of service. She is trained on MiG-29 aircraft. @MEAIndia @IndianDiplomacy @ANI @PTI_News @WIONews @IAF_MCC @SpokespersonMoD @DefenceMinIndia @RT_com @SputnikInt @tass_agency @riabreakingnews pic.twitter.com/WFOYwDSaoe
— India in Russia (@IndEmbMoscow) September 16, 2019 " class="align-text-top noRightClick twitterSection" data="
">Wg Cdr Anjali is an AE(L) officer with 17 yrs of service. She is trained on MiG-29 aircraft. @MEAIndia @IndianDiplomacy @ANI @PTI_News @WIONews @IAF_MCC @SpokespersonMoD @DefenceMinIndia @RT_com @SputnikInt @tass_agency @riabreakingnews pic.twitter.com/WFOYwDSaoe
— India in Russia (@IndEmbMoscow) September 16, 2019Wg Cdr Anjali is an AE(L) officer with 17 yrs of service. She is trained on MiG-29 aircraft. @MEAIndia @IndianDiplomacy @ANI @PTI_News @WIONews @IAF_MCC @SpokespersonMoD @DefenceMinIndia @RT_com @SputnikInt @tass_agency @riabreakingnews pic.twitter.com/WFOYwDSaoe
— India in Russia (@IndEmbMoscow) September 16, 2019
ಇದುವರೆಗೂ ಈ ಹುದ್ದೆಗೆ ಮೂರು ದಳಗಳಲ್ಲಿರುವ ಪುರುಷ ಅಧಿಕಾರಿಗಳನ್ನಷ್ಟೇ ನೇಮಿಸಲಾಗುತ್ತಿತ್ತು. ಈ ಸಂಪ್ರದಾಯವನ್ನು ವಾಯುಪಡೆ ಮೊದಲ ಬಾರಿಗೆ ಮುರಿದು ಮಹಿಳೆಗೆ ಸ್ಥಾನ ಕಲ್ಪಿಸಿದೆ. ಏರೋನಾಟಿಕಲ್ ಎಂಜಿನಿಯರ್ ಅಧಿಕಾರಿಯಾಗಿರುವ ಅಂಜಲಿ ಸಿಂಗ್ ಅವರು ಕಳೆದ 17 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಮಿಗ್- 29 ಯುದ್ಧ ವಿಮಾನ ಹಾರಾಟದ ತರಬೇತಿ ಸಹ ಪಡೆದಿದ್ದಾರೆ.