ETV Bharat / bharat

ಲಡಾಖ್‌ಗೆ ವಾಯುಸೇನಾ ಮುಖ್ಯಸ್ಥ ಬಧೌರಿಯಾ ಭೇಟಿ, ಪರಿಸ್ಥಿತಿ ಅವಲೋಕನ - ಯುದ್ಧ ವಿಮಾನ

ಗಾಲ್ವನ್‌ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆಯ ಬೆನ್ನಲ್ಲೇ ವಾಯುಸೇನಾ ಮುಖ್ಯಸ್ಥ ಆರ್.‌ಕೆ.ಎಸ್‌ ಬಧೌರಿಯಾ ಲಡಾಖ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರತೀಯ ಸೇನೆಯ ಯುದ್ಧ ವಿಮಾನಗಳು ಮತ್ತು ಸೇನಾ ಹೆಲಿಕಾಪ್ಟರ್ ಲೇಹ್‌ ಮತ್ತು ಲಡಾಖ್‌ನಲ್ಲಿ‌ ಹಾರಾಟ ನಡೆಸುವ ಮೂಲಕ ಚೀನಾಗೆ ಖಡಕ್‌ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.

military-chopper-and-fighter-jet-activity-seen-in-leh-ladakh
ಲೇಹ್‌, ಲಡಾಖ್‌ನಲ್ಲಿ ಹಾರಾಡಿದ ಯುದ್ಧ ವಿಮಾನ; ಚೀನಾಗೆ ರವಾನೆಯಾದ ಖಡಕ್‌ ಎಚ್ಚರಿಕೆ
author img

By

Published : Jun 19, 2020, 4:43 PM IST

ನವದೆಹಲಿ: ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ ವಾಯುಸೇನಾ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ ಇಂದು ಎರಡು ದಿನಗಳ ಭೇಟಿಗಾಗಿ ಲೇಹ್‌ಗೆ ಆಗಮಿಸಿ ಭದ್ರತಾ ವ್ಯವಸ್ಥೆಯ ಅವಲೋಕನ ಮಾಡಿದ್ದಾರೆ.

ಗಡಿ ಬಿಕ್ಕಟ್ಟು ಮತ್ತಷ್ಟು ಉಲ್ಭಣಗೊಂಡರೆ ಪೂರ್ವ ಲಡಾಖ್‌ ಪ್ರದೇಶದಲ್ಲಿ ಸುಲಭವಾಗಿ ಕಾರ್ಯಾಚರಣೆ ನಡೆಸುವ ಸಲುವಾಗಿ ಯುದ್ಧ ವಿಮಾನಗಳನ್ನು ರವಾನಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.

ಈ ವೇಳೆ ಶ್ರೀನಗರದ ವಾಯುನೆಲೆಗೂ ವಾಯುಸೇನಾ ಮುಖ್ಯಸ್ಥರು ಭೇಟಿ ನೀಡಲಿದ್ದಾರೆ. ಭಾರತ-ಚೀನಾ ಸೇನೆಗಳು ಗಾಲ್ವನ್‌ ಕಣಿವೆಯಲ್ಲಿ ಕೈಕೈ ಮಿಲಾಯಿಸಿ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದರು.

ಸಂಘರ್ಷ ನಡೆದ ಮರು ದಿನವೇ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ಪೂರ್ವ ಲಡಾಖ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ಮಾಹಿತಿ ನೀಡಿದ ನಂತರ ವಾಯು ಸೇನಾ ಮುಖ್ಯಸ್ಥರು ಕೂಡ ಲೇಹ್‌ಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಲೇಹ್‌, ಲಡಾಖ್‌ನಲ್ಲಿ ಹಾರಾಡಿದ ಫೈಟರ್‌ ಜೆಟ್‌:

ಗಡಿ ಘರ್ಷಣೆಯ ಬಳಿಕ ತನ್ನ ಗಡಿಯಲ್ಲಿ ಚೀನಾ 10 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿದ್ದವು. ಈ ಬೆನ್ನಲ್ಲೇ ಭಾರತೀಯ ಸೇನೆ ಕಟ್ಟೆಚ್ಚರ‌ವಹಿಸಿದ್ದು, ಲೇಹ್‌ ಮತ್ತು ಲಡಾಖ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ಮತ್ತು ಯುದ್ಧ ವಿಮಾನ ಹಾರಾಟ ನಡೆಸಿವೆ. ಆ ಮೂಲಕ ಡ್ರ್ಯಾಗನ್‌ ದೇಶಕ್ಕೆ ಎಚ್ಚರಿಕೆಯ‌ ಸಂದೇಶವನ್ನು ಭಾರತೀಯ ಸೇನೆ ರವಾನಿಸಿದಂತಿದೆ.

military-chopper-and-fighter-jet-activity-seen-in-leh-ladakh
ಲೇಹ್‌, ಲಡಾಖ್‌ನಲ್ಲಿ ಹಾರಾಡಿದ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು; ಚೀನಾಗೆ ರವಾನೆಯಾದ ಎಚ್ಚರಿಕೆಯ ಸಂದೇಶ

ಕಳೆದ ಸೋಮವಾರ ನಡೆದ ಸೈನಿಕರ ಬಡಿದಾಟಕ್ಕೆ ಭಾರತವೇ ಹೊಣೆ ಎಂದು ಚೀನಾ ಪದೇ ಪದೇ ಆರೋಪಿಸುತ್ತಿದೆ. ಸದ್ಯ ಉಭಯ ದೇಶಗಳು ಶಾಂತಿಯುತ ಮಾತುಕತೆಗೆ ಮುಂದಾಗಿದ್ದು, ಸೇನೆ, ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ.

ನಿನ್ನೆಯಷ್ಟೇ ಉಭಯ ದೇಶಗಳ ವಿದೇಶಾಂಗ ಸಚಿವರುಗಳು ದೂರವಾಣಿ ಕರೆ ಮೂಲಕ ಸದ್ಯದ ಪರಿಸ್ಥಿತಿಯ ಬಗ್ಗೆ ಮಾತುಕತೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.