ಹೈದರಾಬಾದ್ (ತೆಲಂಗಾಣ): ಕೋವಿಡ್ 19 ರೀತಿಯ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ವಿವಿಧ ಸಚಿವಾಲಯಗಳೊಂದಿಗೆ ಕೇಂದ್ರ ಸರ್ಕಾರವು ವಲಯವಾರು ಕ್ರಿಯಾಯೋಜನೆ ಹಾಗೂ ಮೂರು ವಾರಗಳವರೆಗೆ ದೇಶಾದ್ಯಂತ ಲಾಕ್‌ಡೌನ್ ಅನ್ನು ಘೋಷಿಸಿದೆ. ಆರೋಗ್ಯ ಸೇವೆಗೆ 15 000 ಕೋಟಿ ರೂ. ತುರ್ತು ಹಣಕಾಸು ಪ್ಯಾಕೇಜ್, ವೈದ್ಯಕೀಯ ವೃತ್ತಿಪರರಿಗೆ ವೈಯಕ್ತಿಕ ರಕ್ಷಣೆ ಸಲಕರಣೆಯನ್ನು ಒದಗಿಸುವುದು, ಐಸೋಲೇಶನ್ ವಾರ್ಡ್‌ಗಳು ಮತ್ತು ಐಸಿಯು ಬೆಡ್‌ಗಳ ಹೆಚ್ಚಳ ಮತ್ತು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಮಾನವ ಸಂಪನ್ಮೂಲ ತರಬೇತಿಯನ್ನು ಕೂಡ ನೀಡಲಾಗುತ್ತಿದ್ದು, ವೈರಸ್ ಹರಡುವುದನ್ನು ತಡೆಯುವ ಯತ್ನ ನಡೆಸಲಾಗುತ್ತಿದೆ.
ಇದರ ಹೊರತಾಗಿ, ಕೋವಿಡ್ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ರಾಜೆಕ್ಟ್, ಪರಿಸರ ಮತ್ತು ಸಾಮಾಜಿಕ ಬದ್ಧತೆ ಯೋಜನೆ ಹಾಗೂ ಇತರ ಸೇರಿದಂತೆ ಕೊರೊನಾ ವೈರಸ್ ತಡೆ ಹೋರಾಟಕ್ಕಾಗಿ ಇತರ ಯೋಜನೆಗಳನ್ನೂ ರೂಪಿಸಲಾಗಿದೆ.
ಫಾಸ್ಟ್ ಟ್ರ್ಯಾಕ್ ಕೋವಿಡ್ 19 ಪ್ರತಿಕ್ರಿಯೆಯ ಭಾಗವಾಗಿ, ಪ್ರಸ್ತಾವಿತ ಭಾರತೀಯ ಕೋವಿಡ್ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ರಾಜೆಕ್ಟ್ ನಾಲ್ಕು ವರ್ಷದ್ದಾಗಿದ್ದು, ಇದಕ್ಕಾಗಿ ವಿಶ್ವಬ್ಯಾಂಕ್‌ನ ಕೋವಿಡ್ 19 ಫಾಸ್ಟ್ ಟ್ರ್ಯಾಕ್ ಸೌಲಭ್ಯದಿಂದ $500 ಮಿಲಿಯನ್ ಡಾಲರ್ ಮೀಸಲಿಡಲಾಗಿದೆ.
ಪ್ರಾಜೆಕ್ಟ್ ಅಡಿ ಗುರುತಿಸಿದ ಆದ್ಯತೆ ವಲಯಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಕೋವಿಡ್ 19 ತುರ್ತು ಪ್ರತಿಕ್ರಿಯೆ ಕುರಿತು ಡಬ್ಲ್ಯೂಎಚ್‌ಒ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಕೋವಿಡ್ ಭೀತಿಗೆ ಪ್ರತಿಕ್ರಿಯಿಸುವುದು ಮತ್ತು ಈ ಭೀತಿಯನ್ನು ನಿವಾರಿಸುವ ಉದ್ದೇಶವನ್ನು ಪ್ರಸ್ತಾವಿತ ಕೋವಿಡ್ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ರಾಜೆಕ್ಟ್ ಹೊಂದಿದೆ ಮತ್ತು ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸಿದ್ಧತೆಗೆ ರಾಷ್ಟ್ರೀಯ ವ್ಯವಸ್ಥೆಯನ್ನು ಸುಸ್ಥಿರಗೊಳಿಸುವ ಉದ್ದೇಶವನ್ನು ಹೊಂದಿದೆ. ಪ್ರಮುಖ ಪ್ರಾಜೆಕ್ಟ್ ಸೂಚಕಗಳು ಇದನ್ನು ಒಳಗೊಂಡಿದೆ:
(1) ಲ್ಯಾಬ್ ಮೂಲಕ ದೃಢೀಕರಿಸಿದ ಕೋವಿಡ್ 19 ಪ್ರಕರಣಗಳಿಗೆ 48 ಗಂಟೆಗಳೊಳಗೆ ಪ್ರತಿಕ್ರಿಯೆ ನೀಡುವ ಅನುಪಾತ;
(2) ಡಬ್ಲ್ಯೂಎಚ್‌ಒ ನಿಗದಿಸಿದ ಪ್ರಮಾಣಿತ ಸಮಯದೊಳಗೆ ಸಾರ್ಸ್ -ಸಿಒವಿ - 2 ಲ್ಯಾಬ್ ಪರೀಕ್ಷೆಗೆ ಮಾದರಿಗಳನ್ನು ಸಲ್ಲಿಸುವ ಅನುಪಾತ
(3) ಕೋವಿಡ್ 19 ಮತ್ತು/ಅಥವಾ ಸಕಾಲಿಕ ಇನ್‌ಫ್ಲುಯೆಂಜಾದ ಮೂರು ಮುಖ್ಯ ಗುಣಲಕ್ಷಣಗಳನ್ನು ಗುರುತಿಸಲು ಜನರಿಗೆ ಸಾಧ್ಯವಾಗುವುದು ಮತ್ತು ಮೂರು ವೈಯಕ್ತಿಕ ತಡೆ ಕ್ರಮಗಳು (ಜನಸಂಖ್ಯೆ ಸಮೀಕ್ಷೆಯ ಪ್ರತಿನಿಧಿಗಳು ವಿಶ್ಲೇಷಿಸಿದಂತೆ).
ಪ್ರಾಜೆಕ್ಟ್‌ನ ವಿವಿಧ ಅಂಶಗಳೆಂದರೆ:
1. ತುರ್ತು ಕೋವಿಡ್ 19 ಪ್ರತಿಕ್ರಿಯೆ
2. ತಡೆ ಮತ್ತು ಸಿದ್ಧತೆಗೆ ಬೆಂಬಲಿಸಲು ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು
3. ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ಬಹು ವಲಯ, ರಾಷ್ಟ್ರೀಯ ಸಂಸ್ಥೆಗಳು ಮತ್ತು ಒನ್ ಹೆಲ್ತ್‌ಗೆ ಪ್ಲಾಟ್‌ಫಾರಂಗಳನ್ನು ಸ್ಥಿರೀಕರಿಸುವುದು
4. ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ರಿಸ್ಕ್ ಸಂವಹನ
5. ಅನುಷ್ಠಾನ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮತ್ತು ಮೌಲೀಕರಣ
6. ಕಂಟಿಂಜೆಂಟ್ ತುರ್ತು ಪ್ರತಿಕ್ರಿಯೆ ಅಂಶ (ಸಿಇಆರ್‌ಸಿ)
ಕೋವಿಡ್ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತೆ ಪ್ರಾಜೆಕ್ಟ್:
1. ಭಾರತ ಸರ್ಕಾರವು ಕೋವಿಡ್ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತೆ ಪ್ರಾಜೆಕ್ಟ್ ಅನ್ನು ಈ ಕೆಳಗಿನ ಸಚಿವಾಲಯಗಳು / ಏಜೆನ್ಸಿಗಳು / ಯೂನಿಟ್‌ಗಳ ಸಹಭಾಗಿತ್ವದಲ್ಲಿ ಜಾರಿಗೊಳಿಸಲಿದೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್‌ಎಫ್‌ಡಬ್ಲ್ಯೂ), ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ). ಅಂತಾರಾಷ್ಟ್ರೀಯ ಮರುರಚನೆ ಮತ್ತು ಅಭಿವೃದ್ಧಿ ಬ್ಯಾಂಕ್ (ಇನ್ನು ಮುಂದೆ ಬ್ಯಾಂಕ್ ಎಂದು ಉಲ್ಲೇಖಿಸಲಾಗುವ) ಪ್ರಾಜೆಕ್ಟ್‌ಗೆ ಹಣಕಾಸು ಒದಗಿಸಲು ಸಮ್ಮತಿಸಿದೆ.
2. ಪರಿಸರ ಮತ್ತು ಸಾಮಾಜಿಕ ಮಾನದಂಡಗಳಿಗೆ ಅನುಗುಣವಾಗಿ ಈ ಯೋಜನೆಯನ್ನು ಜಾರಿಗೆ ತರುವುದಕ್ಕೆ ಅನುವು ಮಾಡುವಂತೆ ಸ್ವೀಕೃತಿದಾರರು ವಾಸ್ತವಿಕ ಕ್ರಮಗಳು ಮತ್ತು ಕರ್ತವ್ಯಗಳನ್ನು ಅನುಷ್ಠಾನಗೊಳಿಸುತ್ತಾರೆ. ಈ ಪರಿಸರ ಮತ್ತು ಸಾಮಾಜಿಕ ಬದ್ಧತೆ ಯೋಜನೆಯು (ಇಎಸ್‌ಸಿಪಿ) ವಾಸ್ತವಿಕ ಕ್ರಮಗಳು ಮತ್ತು ಕರ್ತವ್ಯಗಳು, ಯಾವುದೇ ನಿರ್ದಿಷ್ಟ ದಾಖಲೆಗಳು ಅಥವಾ ಯೋಜನೆಗಳು ಹಾಗೂ ಈ ಪ್ರತಿಯೊಂದಕ್ಕೂ ಸಮಯವನ್ನೂ ನಿರ್ಧರಿಸುತ್ತವೆ.
3. ಪ್ಯಾರಾ 1 ರಲ್ಲಿ ಉಲ್ಲೇಖಿಸಿದಂತೆ ಜಂಟಿಯಾಗಿ ಅಥವಾ ಸ್ವತಂತ್ರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್‌ಎಫ್‌ಡಬ್ಲ್ಯೂ), ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಿರ್ದಿಷ್ಟ ಕ್ರಮಗಳು ಮತ್ತು ಕರ್ತವ್ಯಗಳನ್ನು ಅನುಷ್ಠಾನಗೊಳಿಸಿದರೂ ಇಎಸ್‌ಸಿಪಿಯ ಎಲ್ಲ ಅಗತ್ಯಗಳಿಗೆ ಬದ್ಧರಾಗಲು ಸ್ವೀಕೃತಿದಾರರು ಜವಾಬ್ದಾರರಾಗಿರುತ್ತಾರೆ.
4. ಈ ಇಎಸ್‌ಸಿಪಿಯಲ್ಲಿ ನಿಗದಿಸಿದ ವಾಸ್ತವಿಕ ಕ್ರಮಗಳು ಮತ್ತು ಕರ್ತವ್ಯಗಳ ಅನುಷ್ಠಾನವನ್ನು ಬ್ಯಾಂಕ್ ತನ್ನ ಸ್ವೀಕೃತಿದಾರರ ಮೂಲಕ, ಇಎಸ್‌ಸಿಪಿ ಅಗತ್ಯಕ್ಕೆ ಅನುಸಾರವಾಗಿ ಮತ್ತು ಕಾನೂನಾತ್ಮಕ ಕರಾರುಗಳಿಗೆ ಅನುಗುಣವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ವರದಿ ಮಾಡುತ್ತದೆ. ಬ್ಯಾಂಕ್ ಪ್ರಗತಿಯ ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯನ್ನ ನಡೆಸುತ್ತದೆ ಮತ್ತು ವಾಸ್ತವಿಕ ಕ್ರಮಗಳು ಮತ್ತು ಕರ್ತವ್ಯಗಳನ್ನು ಪೂರೈಸಲಾಗಿದೆಯೇ ಎಂದು ಪ್ರಾಜೆಕ್ಟ್‌ನ ಅನುಷ್ಠಾನದ ಅವಧಿಯಾದ್ಯಂತ ಪರಿಶೀಲಿಸಲಾಗುತ್ತದೆ.
5. ಬ್ಯಾಂಕ್ ಮತ್ತು ಸ್ವೀಕೃತಿದಾರರು ಸಮ್ಮತಿಸಿದಂತೆ, ಈ ಇಎಸ್‌ಸಿಪಿಯನ್ನು ಪ್ರಾಜೆಕ್ಟ್ ಅನುಷ್ಠಾನದ ಅವಧಿಯಲ್ಲಿ ಕಾಲಕಾಲಕ್ಕೆ ಪರಿಷ್ಕರಿಸಿ, ಪ್ರಾಜೆಕ್ಟ್‌ನ ಬದಲಾವಣೆಗಳನ್ನು ಅಳವಡಿಸಿಕೊಳ್ಳಬಹುದು ಮತ್ತು ಅನಿರೀಕ್ಷಿತ ಸನ್ನಿವೇಶಗಳಿಗೆ ಅಥವಾ ಇಎಸ್‌ಸಿಪಿಯು ನಡೆಸಿದ ಪ್ರಾಜೆಕ್ಟ್ ಕಾರ್ಯಕ್ಷಮತೆ ವಿಶ್ಲೇಷಣೆಗೆ ಪ್ರತಿಕ್ರಿಯೆಯಾಗಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಇಂತಹ ಸನ್ನಿವೇಶಗಳಲ್ಲಿ, ಸ್ವೀಕೃತಿದಾರರು ಬ್ಯಾಂಕ್ ಸೂಚಿಸಿದ ಬದಲಾವಣೆಗೆ ಸಮ್ಮತಿಸುತ್ತಾರೆ ಮತ್ತು ಇಂತಹ ಬದಲಾವಣೆಯು ಪ್ರತಿಫಲಿಸುವುದಕ್ಕಾಗಿ ಇಎಸ್‌ಸಿಪಿಯನ್ನು ಅಪ್‌ಡೇಟ್ ಮಾಡುತ್ತಾರೆ. ಬ್ಯಾಂಕ್ ಮತ್ತು ಸ್ವೀಕೃತಿದಾರರು ಸಹಿ ಮಾಡಿದ ಪತ್ರಗಳ ವಿನಿಮಯದ ಮೂಲಕ ಇಎಸ್‌ಸಿಪಿ ಬದಲಾವಣೆಯ ಕರಾರನ್ನು ಸಮ್ಮತಿಸಲಾಗುತ್ತದೆ. ಅಪ್‌ಡೇಟ್ ಮಾಡಿದ ಇಎಸ್‌ಸಿಪಿ ಅನ್ನು ಸ್ವೀಕೃತಿದಾರರು ಅದಕ್ಕೆ ಅನುಗುಣವಾಗಿ ಪುನಃ ಬಹಿರಂಗಗೊಳಿಸುತ್ತಾರೆ.
6. ಪ್ರಾಜೆಕ್ಟ್ ಬದಲಾವಣೆಗಳು, ಅನಿರೀಕ್ಷಿತ ಸನ್ನಿವೇಶಗಳು ಅಥವಾ ಪ್ರಾಜೆಕ್ಟ್ ಪರ್ಫಾರ್ಮೆನ್ಸ್‌ನಿಂದಾಗಿ ರಿಸ್ಕ್‌ಗಳಲ್ಲಿನ ಬದಲಾವಣೆ ಮತ್ತು ಪ್ರಾಜೆಕ್ಟ್ ಅನುಷ್ಠಾನದ ವೇಳೆ ಪರಿಣಾಮಗಳು ಉಂಟಾದಲ್ಲಿ, ಹೆಚ್ಚುವರಿ ಅನುದಾನ ಮತ್ತು ಸಂಪನ್ಮೂಲವನ್ನು ಸ್ವೀಕೃತಿದಾರರು ಒದಗಿಸಬೇಕು ಮತ್ತು ಈ ಮೂಲಕ ಇಂತಹ ರಿಸ್ಕ್ ಮತ್ತು ಪರಿಣಾಮಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು.
ಪರಿಣಾಮಕಾರಿ ಮತ್ತು ಸಿದ್ಧ ತೊಡಗಿಸಿಕೊಳ್ಳುವಿಕೆ ಉದ್ದೇಶಕ್ಕೆ, ಪ್ರಸ್ತಾವಿತ ಪ್ರಾಜೆಕ್ಟ್‌ಗಳ ಪಾಲುದಾರರನ್ನು ಈ ಮುಂದಿನ ಮುಖ್ಯ ವಿಭಾಗಗಳನ್ನಾಗಿ ವಿಭಜಿಸಬಹುದಾಗಿದೆ:
• ಬಾಧಿತ ಪಕ್ಷಗಳು – ಪ್ರಾಜೆಕ್ಟ್‌ನ ಪ್ರಭಾವದ ವ್ಯಾಪ್ತಿಯೊಳಗೆ ಇರುವ ವ್ಯಕ್ತಿಗಳು, ಗುಂಪುಗಳು ಮತ್ತು ಇತರ ಸಂಸ್ಥೆಗಳು. ಇವರು ಪ್ರಾಜೆಕ್ಟ್‌ನಿಂದ ನೇರ, ವಾಸ್ತವಿಕ ಅಥವಾ ಸಂಭಾವ್ಯ ಪ್ರಭಾವಕ್ಕೆ ಒಳಪಡುತ್ತಾರೆ. ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಉಂಟಾಗುವ ಬದಲಾವಣೆಗೆ ಹೆಚ್ಚು ಬಾಧಿತರು ಎಂದು ಇವರನ್ನು ಗುರುತಿಸಲಾಗಿರುತ್ತದೆ. ಪರಿಣಾಮಗಳನ್ನು ಗುರುತಿಸುವಲ್ಲಿ ಇವರ ಜೊತೆಗೆ ಸಮೀಪದಿಂದ ತೊಡಗಿಸಿಕೊಳ್ಳಬೇಕಾಗುತ್ತದೆ ಮತ್ತು ನಿರ್ಮೂಲನೆ ಮತ್ತು ನಿರ್ವಹಣೆ ಕ್ರಮಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲೂ ಇವರು ಮಹತ್ವದ ಪಾತ್ರ ವಹಿಸುತ್ತಾರೆ;
• ಇತರ ಆಸಕ್ತ ಪಕ್ಷಗಳು – ಪ್ರಾಜೆಕ್ಟ್‌ನಿಂದ ನೇರವಾಗಿ ಪರಿಣಾಮವನ್ನು ಎದುರಿಸದ ವ್ಯಕ್ತಿಗಳು/ ಗುಂಪುಗಳು / ಸಂಸ್ಥೆಗಳು. ಆದರೆ ಇವರು ಪ್ರಾಜೆಕ್ಟ್‌ನಿಂದ ಬಾಧಿಸಲ್ಪಡಬಹುದು ಎಂದು ಪರಿಗಣಿಸಲಾಗುತ್ತದೆ ಅಥವಾ ಊಹಿಸಲಾಗುತ್ತದೆ ಮತ್ತು ಪ್ರಾಜೆಕ್ಟ್‌ನ ಅನುಷ್ಠಾನದಲ್ಲಿ ಯಾವುದಾದರೂ ರೀತಿಯಲ್ಲಿ ಇವರು ತೊಡಗಿಸಿಕೊಳ್ಳಬಹುದು; ಮತ್ತು
• ತೀವ್ರ ಬಾಧಿತ ಗುಂಪುಗಳು – ತಮ್ಮ ಬಾಧ್ಯತೆ ಸ್ಥಿತಿಯಿಂದಾಗಿ ಯಾವುದೇ ಇತರ ಸಮೂಹಗಳಿಗೆ ಹೋಲಿಸಿದರೆ ಪ್ರಾಜೆಕ್ಟ್‌ನಿಂದ ವ್ಯತ್ಯಯ ಅಥವಾ ಅನಾನುಕೂಲಕ್ಕೆ ಒಳಗಾಗುವ ವ್ಯಕ್ತಿಗಳು ಇವರು. ಇವರನ್ನು ಸಮಾನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಪ್ರಾಜೆಕ್ಟ್‌ಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಿರುತ್ತದೆ.
ಜಾಗೃತಿ ಮೂಡಿಸುವ ಚಟುವಟಿಕೆಗಳಿಗೆ:
(i) ಸಾಮಾಜಿಕ ಅಂತರ ಕ್ರಮಗಳಾದ ಶಾಲೆ, ರೆಸ್ಟೋರೆಂಟ್, ಧಾರ್ಮಿಕ ಸಂಸ್ಥೆಗಳು ಮತ್ತು ಕೆಫೆ ಮುಚ್ಚುವುದು ಹಾಗೂ ದೊಡ್ಡ ಸಭೆ ಸಮಾರಂಭಗಳನ್ನು (ಉದಾ,. ವಿವಾಹ) ಮಾಡದೇ ಇರುವುದು.
(ii) ವೈಯಕ್ತಿಕ ನೈರ್ಮಲ್ಯದ ಪ್ರಚಾರ ಮಾಡುವುದು, ಕೈ ತೊಳೆಯುವುದು ಮತ್ತು ಸರಿಯಾಗಿ ಅಡುಗೆ ಮಾಡುವ ಕ್ರಮಗಳನ್ನು ಪ್ರಚಾರ ಮಾಡುವುದು, ಮಾಸ್ಕ್‌ಗಳ ವಿತರಣೆ ಮತ್ತು ಬಳಕೆ ಹಾಗೂ ಸಾಂಕ್ರಾಮಿಕ ರೋಗ ಹರಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮುದಾಯದ ಭಾಗವಹಿಸುವಿಕೆ ಕುರಿತು ಅರಿವು ಮತ್ತು ಪ್ರಚಾರ ಮಾಡುವುದು.
(iii) ಸಮಗ್ರವಾದ ಸಾಮಾಜಿಕ ಮತ್ತು ವರ್ತನೆ ಬದಲಾವಣೆ ಸಂವಹನ (ಎಸ್‌ಬಿಸಿಸಿ) ಕಾರ್ಯತಂತ್ರವನ್ನು ರೂಪಿಸುವುದು ಮತ್ತು ತಡೆಗೆ ಸಂಬಂಧಿಸಿದ ಪ್ರಮುಖ ವರ್ತನೆಗಳು (ಕೈತೊಳೆಯುವುದು ಇತ್ಯಾದಿ) ಇತ್ಯಾದಿಯನ್ನು ಪ್ರೋತ್ಸಾಹಿಸುವುದು. ಪರಿಣಾಮಕಾರಿ ಸಂಸ್ಥೆಗಳು ಮತ್ತು ವಿಧಾನಗಳ ಮೂಲಕ ಸಮುದಾಯವನ್ನು ಸಜ್ಜುಗೊಳಿಸುವ ಕಾರ್ಯ ನಡೆಸುವುದು ಹಾಗೂ ಜನಸಮುದಾಯವನ್ನು ಸಂಪರ್ಕಿಸುವುದು, ಟಿವಿ, ರೇಡಿಯೋ, ಸಾಮಾಜಿಕ ಮಾಧ್ಯಮ ಮತ್ತು ಪ್ರಿಂಟ್ ಸಾಮಗ್ರಿಗಳನ್ನು ಬಳಸುವುದು ಮತ್ತು ಸಮುದಾಯದ ಆರೋಗ್ಯ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದು
(iv) ಮಾನಸಿಕ ಆರೋಗ್ಯ ಮತ್ತು ಮನಃಶಾಸ್ತ್ರೀಯ ಸೇವೆಗಳನ್ನು ಸಮುದಾಯಗಳಿಗೆ ಒದಗಿಸುವುದು
ಕ್ರಮಗಳು ಮತ್ತು ಕರ್ತವ್ಯಗಳನ್ನು ಆಗಾಗ್ಗೆ ಮೇಲ್ವಿಚಾರಣೆ ನಡೆಸುವುದು ಮತ್ತು ವರದಿ ಮಾಡುವುದು:
ಪ್ರಾಜೆಕ್ಟ್‌ನ ಪರಿಸರ, ಸಾಮಾಜಿಕ, ಆರೋಗ್ಯ ಮತ್ತು ಸುರಕ್ಷತೆ (ಇಎಸ್‌ಎಚ್‌ಎಸ್) ಕಾರ್ಯಕ್ಷಮತೆಯನ್ನು ಬ್ಯಾಂಕ್ ಪದೇ ಪದೇ ಮೇಲ್ವಿಚಾರಣೆ ಮಾಡುತ್ತಿರುತ್ತದೆ. ಪಾಲುದಾರರ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗಳು ಮತ್ತು ದೂರು ಪರಿಹಾರಗಳನ್ನು ಸಿದ್ಧಪಡಿಸುವುದು ಮತ್ತು ಎಂಒಎಚ್ಎಫ್ಡಬ್ಲ್ಯೂ, ಐಸಿಎಂಆರ್, ಎನ್‌ಸಿಡಿಸಿ ರೀತಿಯ ಸಂಸ್ಥೆಗಳಿಗೆ ತ್ರೈಮಾಸಿಕವಾಗಿ ಸಲ್ಲಿಸುವುದನ್ನು ಮಾಡುತ್ತದೆ.
ಪರಿಸರ ಮತ್ತು ಸಾಮಾಜಿಕ ರಿಸ್ಕ್‌ಗಳು ಮತ್ತು ಪರಿಣಾಮಗಳ ವಿಶ್ಲೇಷಣೆ ಮತ್ತು ನಿರ್ವಹಣೆ:
ಪಿಎಂಯು ಸಹಭಾಗಿತ್ವದಲ್ಲಿ ಎಂಎಚ್‌ಎಫ್‌ಡಬ್ಲ್ಯೂ, ಅರ್ಹ ಸಿಬ್ಬಂದಿಯನ್ನು ನೇಮಿಸಬೇಕು. ಆರೋಗ್ಯ ಮತ್ತು ಸುರಕ್ಷತೆ ಪರಿಣಿತರು ಮತ್ತು ಸಾಮಾಜಿಕ ವಿಶೇಷಜ್ಞರು ಮತ್ತು ಸಂಪನ್ಮೂಲಗಳನ್ನು ಒದಗಿಸಿ ಇಎಸ್‌ಎಂಎಫ್ ನಿರ್ವಹಣೆ, ಇಎಸ್‌ಎಚ್‌ಎಸ್ ಪ್ರಾಜೆಕ್ಟ್‌ನ ರಿಸ್ಕ್ ಮತ್ತು ಪರಿಣಾಮಗಳಿಗೆ ಬೆಂಬಲ ಒದಗಿಸಬೇಕು. ಇತರ ಅನುಷ್ಠಾ ಏಜೆನ್ಸಿಗಳು ಮತ್ತು ಪರಿಸರ ಸುರಕ್ಷತೆಯಲ್ಲಿ ಹೆಚ್ಚುವರಿ ಪಿಐಯುಗಳನ್ನು ಸ್ಥಾಪಿಸಿದ್ದರೆ, ಅದರ ಸಾಮರ್ಥ್ಯವನ್ನೂ ಸೇರಿಸಿಕೊಂಡಿರಬೇಕು.
ಪಿಎಂಯು ಕೋಆರ್ಡಿನೇರ್, ಆರೋಗ್ಯ ಮತ್ತು ಸುರಕ್ಷತೆ ಪರಿಣಿತರು ಮತ್ತು ಸಾಮಾಜಿಕ ಪರಿಣಿತರನ್ನು ಪರಿಣಾಮಕಾರಿ ದಿನಾಂಕದಿಂದ ಮೂರು ತಿಂಗಳ ನಂತರ ಪ್ರಾಜೆಕ್ಟ್‌ಗೆ ನಿಯೋಜಿಸಲಾಗುತ್ತದೆ. ಪಿಐಯು/ಪಿಎಂಯು ಅನ್ನು ಅನುಷ್ಠಾನದ ಅವಧಿಯಲ್ಲಿ ನಿರ್ವಹಿಸಬೇಕು ಮತ್ತು ಇದರ ಜವಾಬ್ದಾರಿಯು ಎಂಒಎಚ್‌ಎಫ್‌ಡಬ್ಲ್ಯೂ, ಐಸಿಎಂಆರ್, ಎನ್‌ಸಿಡಿಸಿಯಲ್ಲಿ ಇರುತ್ತದೆ.
ಪರಿಸರ ಮತ್ತು ಸಾಮಾಜಿಕ ವಿಶ್ಲೇಷಣೆ / ನಿರ್ವಹಣೆ ಯೋಜನೆಗಳು ಮತ್ತು ಸಲಕರಣೆಗಳು
ಪರಿಸರ ಮತ್ತು ಸಾಮಾಜಿಕ ರಿಸ್ಕ್‌ಗಳು ಮತ್ತು ಪ್ರಸ್ತಾವಿತ ಪ್ರಾಜೆಕ್ಟ್ ಚಟುವಟಿಕೆಗಳ ಪರಿಣಾಮಗಳು ಇಎಸ್‌ಎಸ್‌ಗಳಿಗೆ ಅನುಗುಣವಾಗಿ ಇರಬೇಕು ಮತ್ತು ಪರಿಸರ ಹಾಗೂ ಸಾಮಾಜಿಕ ನಿರ್ವಹಣೆ ರೂಪುರೇಷೆ (ಇಎಸ್‌ಎಂಎಫ್) ಅನ್ನು ಸಿದ್ಧಪಡಿಸಿ ವಿಶ್ಲೇಷಿಸಬೇಕು. ಇದು ವ್ಯಕ್ತಿಗಳು ಅಥವಾ ಸಮೂಹಗಳು ತಮ್ಮ ನಿರ್ದಿಷ್ಟ ಸನ್ನಿವೇಶಗಳಿಂದಾಗಿ ಅನಾನುಕೂಲ ಹೊಂದಿದ್ದರೆ, ಅಂಥವರಿಗೆ ಪ್ರಾಜೆಕ್ಟ್‌ನ ಅಭಿವೃದ್ಧಿ ಲಾಭಗಳು ಲಭ್ಯವಾಗುತ್ತವೆ. ಕೆಳ ಮಧ್ಯಮ ವರ್ಗದ ನಿರ್ಮಾಣ ಕೆಲಸಗಳಿಗೆ ಅಗತ್ಯವಿರುವ ಪರಿಸರ ಮತ್ತು ಸಾಮಾಜಿಕ ನಿರ್ವಹಣೆ ಪ್ಲಾನ್ (ಇಎಸ್‌ಎಂಪಿ) ಗೆ ಟೆಂಪ್ಲೇಟ್ ಅನ್ನು ಇಎಸ್‌ಎಂಎಫ್ ಒಳಗೊಂಡಿರುತ್ತದೆ.
ಸಿಇಆರ್‌ಸಿ ಕಾಂಪೊನೆಂಟ್ ಅಡಿಯಲ್ಲಿ ಬೆಂಬಲಿಸಿದ ತಪಾಸಣೆ ಚಟುವಟಿಕೆಗಳ ಉದ್ದೇಶಕ್ಕೆ ಇಎಸ್‌ಎಂಎಫ್ ಕ್ರಮಗಳನ್ನು ವಿವರಿಸುತ್ತದೆ. ಜಾರಿ ದಿನಾಂಕದಿಂದ 60 ದಿನಗಳಲ್ಲಿ ಇಎಸ್‌ಎಂಎಫ್ ಅನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಇದರ ಅಧಿಕಾರವು ಎಂಒಎಚ್‌ಎಫ್‌ಡಬ್ಲ್ಯೂ, ಐಸಿಎಂಆರ್, ಎನ್‌ಸಿಡಿಸಿಯಲ್ಲಿ ಇರುತ್ತದೆ.
ವರ್ಜ್ಯಗಳು:
ಪ್ರಾಜೆಕ್ಟ್ ಅಡಿಯಲ್ಲಿ ಈ ಕೆಳಗಿನ ಚಟುವಟಿಕೆಗಳಿಗೆ ಹಣಕಾಸು ಸೌಲಭ್ಯ ನೀಡಲಾಗುವುದಿಲ್ಲ:
1. ದೀರ್ಘಕಾಲೀನ, ಶಾಶ್ವತ ಅಥವಾ ಮರಳಿಸಲಾಗದಂತಹ ಅಡ್ಡ ಪರಿಣಾಮವನ್ನು ಉಂಟು ಮಾಡುವ ಚಟಟುವಟಿಕೆಗಳು (ಉದಾ,. ಪ್ರಮುಖ ನೈಸರ್ಗಿಕ ಆವಾಸಸ್ಥಾನದ ನಷ್ಟ)
2. ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಗಂಭೀರ ಅಡ್ಡ ಪರಿಣಾಮವನ್ನು ಉಂಟು ಮಾಡುವ ಹೆಚ್ಚಿನ ಸಾಧ್ಯತೆ ಇರುವ ಚಟುವಟಿಕೆಗಳು (ಉದಾ., ತ್ಯಾಜ್ಯ ಸಂಸ್ಕರಣೆ ಘಟಕಗಳು ಇಲ್ಲದೇ ಹೊಸ ಆಸ್ಪತ್ರೆಗಳನ್ನು ನಿರ್ಮಿಸುವುದು, ಕೋವಿಡ್ 19 ಹೊರತಾಗಿರುವುದು, ಸಾಮಾನ್ಯ ತ್ಯಾಜ್ಯ ನೀರು ಸಂಸ್ಕರಣೆಗೆ ಸಂಬಂಧಿಸಿದಂತೆ)
3. ಮೂಲ ನಿವಾಸಿಗಳು ಅಥವಾ ಇತರ ಅಲ್ಪಸಂಖ್ಯಾತರ ಭೂಮಿ ಅಥವಾ ಹಕ್ಕಗಳಿಗೆ ಬಾಧಿಸಬಹುದಾದ ಚಟುವಟಿಕೆಗಳು
4. ಶಾಶ್ವತ ರಿಸೆಟಲ್‌ಮೆಂಟ್ ಅಥವಾ ಭೂಮಿ ಸ್ವಾಧೀನ ಅಥವಾ ಸಾಂಸ್ಕೃತಿಕ ಸಂಪತ್ತಿನ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಚಟುವಟಿಕೆಗಳು
5. ಪ್ರಾಜೆಕ್ಟ್‌ನ ಇಎಸ್‌ಎಂಎಫ್‌ನಲ್ಲಿ ಹೊರಗಿಟ್ಟ ಎಲ್ಲ ಇತರ ಚಟುವಟಿಕೆಗಳು
ಕೂಲಿ ಮತ್ತು ಕಾರ್ಮಿಕ ಸ್ಥಿತಿಗತಿಗಳು:
1. ಇಎಸ್‌ಎಸ್2 ಅಗತ್ಯಕ್ಕೆ ಅನುಗುಣವಾಗಿ ಪ್ರಾಜೆಕ್ಟ್ ಅನ್ನು ನಡೆಸಬೇಕು. ಇದು ಬ್ಯಾಂಕ್‌ಗೂ ಸಮ್ಮತವಾಗಿರಬೇಕು. ಸೂಕ್ತ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ತುರ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಕ್ರಮಗಳು, ಇಎಸ್‌ಎಚ್‌ಜಿಗಳು ಮತ್ತು ಇತರ ಸಂಬಂಧಿಸಿದ ಜಿಐಐಪಿ ಹಾಗೂ ನವೀಕರಿಸಿದ ರಾಷ್ಟ್ರೀಯ ಹಾಗೂ ಡಬ್ಲ್ಯೂಎಚ್‌ಒ ಮಾರ್ಗಸೂಚಿಗಳು, ಲ್ಯಾಬ್ ಸೇರಿದಂತೆ ಎಲ್ಲ ಘಟಕಗಳು, ಕ್ವಾರಂಟೈನ್ ಮತ್ತು ಐಸೊಲೇಶನ್ ಸೆಂಟರ್‌ಗಳು ಮತ್ತು ತಪಾಸಣೆ ಪೋಸ್ಟ್‌ಗಳಲ್ಲೂ ಸೂಕ್ತ ಔದ್ಯೋಗಿಕ ಮತ್ತು ಸುರಕ್ಷತೆ ಕ್ರಮಗಳನ್ನು ಅಳವಡಿಸಬೇಕು. ಪ್ರಾಜೆಕ್ಟ್ ಕೆಲಸಗಾರರಿಗೆ ದೂರು ಪರಿಹಾರ ವ್ಯವಸ್ಥೆಯನ್ನು ಮಾಡಬೇಕು. ಇಎಸ್ಎಚ್‌ಎಸ್ ವಿವರಣೆಗಳಿಗೆ ಅನುಗುಣವಾಗಿ ಕಾರ್ಮಿಕರ ಅಗತ್ಯಗಳನ್ನು ನಿಗದಿಸಬೇಕು. ಇಡೀ ಪ್ರಾಜೆಕ್ಟ್ ಅವಧಿಯಲ್ಲಿ ಇದನ್ನು ಮಾಡಬೇಕು ಮತ್ತು ಎಂಒಎಚ್ಎಫ್ಡಬ್ಲ್ಯೂ, ಐಸಿಎಂಆರ್, ಎನ್‌ಸಿಡಿಸಿ ಇದರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.
2. ಎಲ್ಲ ಆರೋಗ್ಯ ಕಾರ್ಯಕರ್ತರೂ ಕೂಡ ಡಬ್ಲ್ಯೂಎಚ್‌ಒ ನೀತಿ ಸಂಹಿತೆ ಮತ್ತು ವೃತ್ತಿಪರ ನೀತಿಗೆ ಬದ್ಧವಾಗಿರಬೇಕು ಎಂಬುದನ್ನು ಸ್ವೀಕೃತಿದಾರರು ಖಚಿತಪಡಿಸಬೇಕು. ಅಪಾಯಕಾರಿ ಕೆಲಸದ ಸನ್ನಿವೇಶ ಇದಾಗಿರುವುದರಿಮದ ಬಾಲ ಕಾರ್ಮಿಕರನ್ನು ಸ್ವೀಕೃತಿದಾರರು ನಿಷೇಧಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಬಾಲ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ.
ಸಂಪನ್ಮೂಲ ದಕ್ಷತೆ ಮತ್ತು ಮಾಲಿನ್ಯ ನಿಯಂತ್ರಣ ಮತ್ತು ನಿರ್ವಹಣೆ:
ಈ ಮಾನದಂಡಕ್ಕೆ ಸಂಬಂಧಿಸಿದ ಅಂಶಗಳನ್ನು ಅಗತ್ಯಕ್ಕೆ ಅನುಗುಣವಾಗಿ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಆರೋಗ್ಯ ಸೇವೆ ತ್ಯಾಜ್ಯ ಮತ್ತು ಇತರ ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ತ್ಯಾಜ್ಯಗಳನ್ನು ನಿರ್ವಹಿಸಲು ಕ್ರಮಗಳನ್ನು ಇದರಲ್ಲಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಆರೋಗ್ಯ ಸೇವೆ ಘಟಕಗಳನ್ನು ನವೀಕರಿಸುವಾಗ ಮತ್ತು ಹೊಸದನ್ನು ನಿರ್ಮಿಸಿವಾಗ ಇಂಧನ ಮತ್ತು ಜಲ ದಕ್ಷತೆಯ ಕ್ರಮಗಳನ್ನು ಸ್ವೀಕೃತಿದಾರರು ಅಳವಡಿಸಿಕೊಂಡಿರಬೇಕು. ಇದು ಇಎಸ್‌ಎಂಎಫ್‌ನಲ್ಲಿ ನಿಗದಿಸಿದ ಇಎಸ್‌ಎಸ್3 ಗೆ ಬದ್ಧವಾಗಿರಬೇಕು. ಅಷ್ಟೇ ಅಲ್ಲ, ರಾಷ್ಟ್ರೀಯ ಕಾನೂನು, ಮಾರ್ಗಸೂಚಿಗಳು ಮತ್ತು ನೀತಿಗಳಿಗೆ ಅನುಗುಣವಾಗಿರಬೇಕು ಹಾಗೂ ನಿರ್ಮಾಣ ತ್ಯಾಜ್ಯಗಳ ಸರಿಯಾದ ವಿಲೇವಾರಿಯೂ ನಡೆಯಬೇಕು. ಇಡೀ ಪ್ರಾಜೆಕ್ಟ್ ಅವಧಿಯಲ್ಲಿ ಇದನ್ನು ಮಾಡಬೇಕು ಮತ್ತು ಎಂಒಎಚ್ಎಫ್ಡಬ್ಲ್ಯೂ, ಐಸಿಎಂಆರ್, ಎನ್‌ಸಿಡಿಸಿ ಇದರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.
ಸಮುದಾಯ ಆರೋಗ್ಯ ಮತ್ತು ಸುರಕ್ಷತೆ:
1. ಈ ಮಾನದಂಡಕ್ಕೆ ಅನುಗುಣವಾದ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಸಾಂಕ್ರಾಮಿಕ ರೋಗಗಳಿಗೆ ಸಮುದಾಯ ತೆರೆದುಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು, ವ್ಯಕ್ತಿಗಳು ಅಥವಾ ಸಮೂಹಗಳು ತಮ್ಮ ಪರಿಸ್ಥಿತಿಗಳಿಂದಾಗಿ ಪ್ರಾಜೆಕ್ಟ್‌ನ ಫಲವನ್ನು ಅನುಭವಿಸಲು ವಂಚಿತವಾಗುವುದು, ಭದ್ರತಾ ಸಿಬ್ಬಂದಿಯ ಬಳಕೆಯ ರಿಸ್ಕ್ ಅನ್ನು ನಿರ್ವಹಿಸುವುದು, ಕಾರ್ಮಿಕರನ್ನು ನಿರ್ವಹಿಸುವುದು ಮತ್ತು ಲೈಂಗಿಕ ದುರ್ವರ್ತನೆಗೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿದೆ.
2. ಕ್ವಾರಂಟೈನ್ ಸೌಲಭ್ಯಗಳಲ್ಲಿ ಎಲ್ಲ ಕೆಲಸಗಾರರು ಡಬ್ಲ್ಯೂಎಚ್‌ಒ ನೀತಿ ಸಂಹಿತೆ ಮತ್ತು ವೃತ್ತಿಪರ ಸದಾಚಾರಕ್ಕೆ ಬದ್ಧವಾಗಿರುವ ಮೂಲಕ ಯಾವುದೇ ರೀತಿಯ ಎಸ್‌ಇಎ ನಡೆಯದಂತೆ ಸ್ವೀಕೃತಿದಾರರು ಖಚಿತಪಡಿಸುತ್ತಾರೆ ಮತ್ತು ಇವರು ಲಿಂಗ ಸೂಕ್ಷ್ಮ ಮೂಲಸೌಕ್ಯವನ್ನು ಒದಗಿಸುತ್ತಾರೆ. ಉದಾಹರಣೆಗೆ ಪ್ರತ್ಯೇಕ ಶೌಚಾಲಯಗಳು ಮತ್ತು ಕ್ವಾರಂಟೈನ್ ಮತ್ತು ಐಸೊಲೇಶನ್ ಕೇಂದ್ರಗಳಲ್ಲಿ ಸೂಕ್ತ ಲೈಟಿಂಗ್ ವ್ಯವಸ್ಥೆಯಾಗಿದೆ.
3. ಲ್ಯಾಬೊರೇಟರಿ ಅಪಘಾತಗಳು / ತುರ್ತು ಪರಿಸ್ಥಿತಿಗಳು ಇದ್ದಲ್ಲಿ ಸ್ವೀಕೃತಿದಾರರು ತುರ್ತು ಸಿದ್ಧತೆ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಉದಾ., ಅಗ್ನಿ ಶಾಮಕ ವ್ಯವಸ್ಥೆ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆ.
4. "ನಾವೆಲ್ ಕೊರೊನಾವೈರಸ್ 19 ರ ತಡೆಗೆ ಸಂಬಂಧಿಸಿದಂತೆ ವಾಪಸು ಕಳುಹಿಸುವುದು ಮತ್ತು ಕ್ವಾರಂಟೈನ್‌ಗೆ ತೆರಳುವರ ಪ್ರಮುಖ ಪರಿಗಣನೆಗಳು" ಎಂಬ ಡಬ್ಲ್ಯೂಎಚ್‌ಒ ಮಾರ್ಗಸೂಚಿಗಳೂ ಸೇರಿದಂತೆ ಸಂಬಂಧಿಸಿದ ಜಿಐಐಪಿ, ಇಎಸ್‌ಎಸ್3, ಇಎಸ್‌ಎಚ್‌ಜಿಗಳ ಅಗತ್ಯಗಳಿಗೆ ಅನುಗುಣವಾಗಿ ಸ್ವೀಕೃತಿದಾರರು ಕ್ವಾರಂಟೈನ್ ಮತ್ತು ಐಸೊಲೇಶನ್ ಸೆಂಟರ್‌ಗಳನ್ನು ನಿರ್ವಹಿಸುತ್ತಾರೆ.
5. ಕ್ವಾರಂಟೈನ್ ಮತ್ತು ಐಸೊಲೇಶನ್ ಸೆಂಟರ್‌ಗಳು ಹಾಗೂ ತಪಾಸಣೆ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಯಾವುದೇ ಭದ್ರತಾ ಸಿಬ್ಬಂದಿಯು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ ಎಂಬುದನ್ನು ಸ್ವೀಕೃತಿದಾರರು ಖಚಿತಪಡಿಸುತ್ತಾರೆ.
ಪಾಲುದಾರರ ತೊಡಗಿಸಿಕೊಳ್ಳುವಿಕೆಮತ್ತು ಮಾಹಿತಿ ಬಹಿರಂಗಗೊಳಿಸುವಿಕೆ:
ಪಾಲುದಾರರ ತೊಡಗಿಸಿಕೊಳ್ಳುವಿಕೆ ಯೋಜನೆ (ಎಸ್‌ಇಪಿ) ಇಎಸ್‌ಎಸ್10 ಗೆ ಬದ್ಧವಾಗಿರಬೇಕು ಮತ್ತು ಸೂಕ್ತವಾದ ರೀತಿಯಲ್ಲಿ ಸಿದ್ಧತೆ, ಬಹಿರಂಗ, ಅಳವಡಿಕೆ ಮತ್ತು ಅನುಷ್ಠಾನವನ್ನು ಮಾಡಿರಬೇಕು. ಪ್ರಾಥಮಿಕ ಎಸ್‌ಇಪಿ ಅನ್ನು ಸಿದ್ಧಪಡಿಸಬೇಕು ಮತ್ತು ಜಾರಿ ದಿನಾಂಕದ ನಂತರ 30 ದಿನಗಳಲ್ಲಿ ಅಪ್‌ಡೇಟ್ ಮಾಡಿರಬೇಕು. ಪ್ರಾಜೆಕ್ಟ್ ಅನುಷ್ಠಾನದ ಅವಧಿಯಲ್ಲಿ ನಿರಂತರವಾಗಿ ಎಸ್‌ಇಪಿ ಅನ್ನು ಅಪ್‌ಡೇಟ್ ಮಾಡಿರಬೇಕು. ಎಸ್‌ಇಪಿ ಅನ್ನು ಪ್ರಾಜೆಕ್ಟ್ ಅನುಷ್ಠಾನದ ಅವಧಿಯಲ್ಲಿ ನಿರಂತರವಾಗಿ ಅನುಷ್ಠಾನಗೊಳಿಸಬೇಕು ಮತ್ತು ಇದರ ಜವಾಬ್ದಾರಿಯು ಎಂಒಎಚ್‌ಎಫ್‌ಡಬ್ಲ್ಯೂ, ಐಸಿಎಂಆರ್ ಮತ್ತು ಎನ್‌ಸಿಡಿಸಿಯದ್ದಾಗಿರುತ್ತದೆ.
ಪಾಲುದಾರರ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಪನ್ಮೂಲಗಳು ಮತ್ತು ಜವಾಬ್ದಾರಿಗಳು:
ಇತರ ಸಚಿವಾಲಯಗಳು ಮತ್ತು ಎನ್‌ಡಿಎಂಎ/ಎಸ್‌ಡಿಎಂಎಗಳ ಸಹಿತ ಎಂಒಎಚ್ಎಫ್‌ಡಬ್ಲ್ಯೂ ತಮ್ಮ ವಲಯಗಳಿಗೆ ಪಾಲುದಾರರ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗೆ ಜವಾಬ್ದಾರನಾಗಿರುತ್ತದೆ. ಒಟ್ಟಾರೆ ಸಹಕಾರವನ್ನು ಎಂಒಎಚ್‌ಎಫ್‌ಡಬ್ಲ್ಯೂ ಮಾಡುತ್ತದೆ. ಎಸ್‌ಇಪಿ ಬಜೆಟ್ ಅನ್ನು ಕಾಂಪೊನೆಂಟ್ 4 ರಲ್ಲಿ ಸೇರಿಸಲಾಗಿರುತ್ತದೆ.
ದೂರು ನಿರ್ವಹಣೆ:
ಪ್ರಾಜೆಕ್ಟ್‌ಗೆ ಸಂಬಂಧಿಸಿದ ಆತಂಕಗಳು ಮತ್ತು ದೂರುಗಳನ್ನು ಪರಿಹರಿಸಲು ಮತ್ತು ಸ್ವೀಕರಿಸಲು ಉತ್ತಮ ವ್ಯವಸ್ಥೆಯನ್ನು ಇಎಸ್‌ಎಸ್10 ಪ್ರಕಾರ ಮಾಡಬೇಕು. ಇದು ಅಸೋಸಿಯೇಶನ್‌ಗೆ ಸಮ್ಮತಿಸಬಹುದಾದ ರೀತಿಯಲ್ಲಿ ಇರಬೇಕು ಮತ್ತು ಸಾರ್ವಜನಿಕವಾಗಿ ಮಾಹಿತಿ ಲಭ್ಯವಿರಬೇಕು. ದೂರು ತಾಂತ್ರಿಕತೆಯನ್ನು ಪ್ರಾಜೆಕ್ಟ್ ಅನುಷ್ಠಾನದ ಅವಧಿಯಲ್ಲಿ ಮಾಡಲಾಗುತ್ತದೆ ಮತ್ತು ಇದಕ್ಕೆ ಎಂಒಎಚ್‌ಎಫ್‌ಡಬ್ಲ್ಯೂ, ಐಸಿಎಂಆರ್ ಮತ್ತು ಎನ್‌ಸಿಡಿಸಿ ಇರುತ್ತದೆ.
ಸಾಮರ್ಥ್ಯ ಬೆಂಬಲ:
ಪ್ರಾಜೆಕ್ಟ್ ಅನುಷ್ಠಾನ ಚಟುವಟಿಕೆಗಳಲ್ಲಿ ಇರುವ ಸಿಬ್ಬಂದಿಯ ತರಬೇತಿ ವಿಷಯಗಳೆಂದರೆ:
1. ಕೋವಿಡ್ ಸೋಂಕು ತಡೆ ಮತ್ತು ನಿಯಂತ್ರಣ - ಆರೋಗ್ಯ ಕಾರ್ಯಕರ್ತರ ಸುರಕ್ಷತೆ
2. ಕೋವಿಡ್ 19 ಕ್ಕೆ ಸಂಬಂಧಿಸಿದಂತೆ ಲ್ಯಾಬೊರೇಟರಿ ಬಯೋಸೇಫ್ಟಿ ಮಾರ್ಗಸೂಚಿ
3. ಮಾದರಿ ಸಂಗ್ರಹ ಮತ್ತು ಸಾಗಣೆ
4. ಕೋವಿಡ್ 19 ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್‌ನಿಂದ ಉಂಟಾಗುವ ಬಿಎಂಡಬ್ಲ್ಯೂಎಂ
5. ಕೋವಿಡ್ 19 ರೋಗಿಗಳಿಗೆ ಪ್ರಮಾಣಿತ ಮುನ್ನೆಚ್ಚರಿಕೆಗಳು
6. ರಿಸ್ಕ್ ಸಂವಹನ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆ
7. ಕ್ವಾರಂಟೈನ್ ಉತ್ತಮ ಅಭ್ಯಾಸಗಳು
8. ಆರೋಗ್ಯ ಕಾರ್ಯಕರ್ತರಿಗೆ ಜಿಬಿವಿ, ಎಸ್‌ಇಎ ಮತ್ತು ಎಸ್‌ಎಚ್ ತರಬೇತಿ ತಡೆಯುವುದು
9. ಇಎಸ್‌ಎಂಎಫ್‌ನ ವಿವಿಧ ಅನುಕೂಲವನ್ನು ಅನುಷ್ಠಾನಗೊಳಿಸುವಲ್ಲಿ ತರಬೇತಿ
10. ಪಾಲುದಾರರ ತೊಡಗಿಸಿಕೊಳ್ಳುವಿಕೆ ಮತ್ತು ಸಲಹೆಯ ತರಬೇತಿ
11. ಒಎಚ್‌ಎಸ್ / ಸಮುದಾಯ ಆರೋಗ್ಯ ಮತ್ತು ಸುರಕ್ಷತೆ, ಪಿಪಿಇ ಬಳಕೆ ಇತ್ಯಾದಿಯ ತರಬೇತಿ
12. ತುರ್ತು ಸನ್ನಿವೇಶಗಳಿಗೆ ಸಿದ್ಧತೆ ಮತ್ತು ಪ್ರತಿಕ್ರಿಯೆಯ ತರಬೇತಿ.