ತಿರುವನಂತಪುರಂ: ದೇವರ ನಾಡು ಕೇರಳ ಪ್ರವಾಹದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ ಇದುವರೆಗೆ 42 ಜನ ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿದೆ.
ಪ್ರಮುಖ ಪ್ರವಾಹಪೀಡಿತ ಜಿಲ್ಲೆಗಳಾದ ವಯಾನಾಡು ಹಾಗೂ ಮಲಪ್ಪುರಂನ ಬಹುಭಾಗ ಜಲದಿಗ್ಬಂಧನಕ್ಕೊಳಗಾಗಿದ್ದು, ಸುಮಾರು 40 ಜನರು ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಶುಕ್ರವಾರ ಒಂದೇ ದಿನದಲ್ಲಿ 20 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಇದುವರೆಗೆ ಸುಮಾರು 42 ಜನ ಸಾವನ್ನಪ್ಪಿದ್ದಾರೆ. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ನೆರೆ ಪರಿಹಾರ ಶಿಬಿರಗಳಿಗೆ ಶಿಫ್ಟ್ ಮಾಡಲಾಗಿದೆ.
-
Army personnel continue rescue operations in flood hit Wayanad. #KeralaFloods pic.twitter.com/apvTyKAoxN
— ANI (@ANI) August 10, 2019 " class="align-text-top noRightClick twitterSection" data="
">Army personnel continue rescue operations in flood hit Wayanad. #KeralaFloods pic.twitter.com/apvTyKAoxN
— ANI (@ANI) August 10, 2019Army personnel continue rescue operations in flood hit Wayanad. #KeralaFloods pic.twitter.com/apvTyKAoxN
— ANI (@ANI) August 10, 2019
ವಯನಾಡ್ ಜಿಲ್ಲೆಯಲ್ಲಿ ಇನ್ನೂ ಮಳೆಯ ಅಬ್ಬರ ಮುಂದುವರಿದಿದ್ದು, ಅಲ್ಲಲ್ಲಿ ಭೂಕುಸಿತವುಂಟಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಇನ್ನು ವಯನಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳಿಗೆ ನಾಳೆ ಸಂಸದ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.
ಮತ್ತೊಂದೆಡೆ ವಯನಾಡ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿರುವ ಸೇನಾ ಸಿಬ್ಬಂದಿ ನವಜಾತ ಶಿಶುವನ್ನು ರಕ್ಷಿಸಿದ್ದಾರೆ.
ತಿರುವನಂತಪುರಂನಲ್ಲಿ ನಗರಪಾಲಿಕೆಯು ಪ್ರವಾಹ ಪರಿಹಾರ ಸಾಮಗ್ರಿಗಳನ್ನು ಒಟ್ಟುಗೂಡಿಸಲು ಕೌಂಟರ್ ತೆರೆದಿದೆ. ನೆರೆ ಸಂತ್ರಸ್ಥರಿಗೆ ಪರಿಹಾರವಾಗಿ, ಆಹಾರ ಸಾಮಗ್ರಿ ಅಥವಾ ಬಟ್ಟೆಗಳನ್ನು ಕೊಡಲಿಚ್ಛಿಸುವವರು ಈ ಕೌಂಟರ್ನಲ್ಲಿ ಕೊಡಬಹುದಾಗಿದೆ.
-
Flooding in Kottayam after incessant rainfall in the region. 42 people have died in Kerala so far this monsoon, due to floods. pic.twitter.com/I7CUf8DMfg
— ANI (@ANI) August 10, 2019 " class="align-text-top noRightClick twitterSection" data="
">Flooding in Kottayam after incessant rainfall in the region. 42 people have died in Kerala so far this monsoon, due to floods. pic.twitter.com/I7CUf8DMfg
— ANI (@ANI) August 10, 2019Flooding in Kottayam after incessant rainfall in the region. 42 people have died in Kerala so far this monsoon, due to floods. pic.twitter.com/I7CUf8DMfg
— ANI (@ANI) August 10, 2019
ಇನ್ನೊಂದೆಡೆ ಮಳೆ ಅವಾಂತರದಿಂದಾಗಿ ದಕ್ಷಿಣ ರೈಲ್ವೆಯ ಕೆಲ ರೈಲುಗಳ ಸಂಚಾರವೂ ರದ್ದಾಗಿದೆ. ಅಲ್ಲಲ್ಲಿ ರೈಲ್ವೆ ಹಳಿ ಮೇಲೆ ಭೂಕುಸಿತವಾಗಿದ್ದು, ಕೆಲವೆಡೆ ಮರಗಳು ಉರುಳಿ ಬಿದ್ದಿವೆ. ಕಣ್ಣೂರ್-ಅಲೆಪ್ಪಿ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳು ರದ್ದಾಗಿವೆ. ಮಂಗಳೂರು-ವಡಂಕನ್ಚೆರಿ, ಮಂಗಳೂರು-ತ್ರಿಶೂರ್ ನಡುವೆ ಸಂಚರಿಸುವ ಕೆಲ ರೈಲುಗಳನ್ನು ರದ್ದುಪಡಿಸಲಾಗಿದೆ.