ETV Bharat / bharat

ಗಡಿ ಘರ್ಷಣೆಯಲ್ಲಿ ತಮಿಳುನಾಡಿನ ಯೋಧ ಹುತಾತ್ಮ; ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ - ರಾಮನಾಥಪುರಂ

ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರು ನಿನ್ನೆ ರಾತ್ರಿ ನಡೆಸಿರುವ ಮುಖಾಮುಖಿ ಗಲಾಟೆಯಲ್ಲಿ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಳನಿ ಎಂಬ ಯೋಧ ಹುತಾತ್ಮನಾಗಿದ್ದು, ಮೃತ ಯೋಧನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

grief-gripped-in-the-family-of-the-martyred-soldier-pazhani
ಗಡಿ ಗಲಾಟೆಯಲ್ಲಿ ತಮಿಳುನಾಡಿನ ಯೋಧ ಹುತಾತ್ಮ; ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ
author img

By

Published : Jun 16, 2020, 5:35 PM IST

ರಾಮನಾಥಪುರಂ(ತಮಿಳುನಾಡು): ಗಾಲ್ವನ್‌ ಕಣಿವೆಯಲ್ಲಿ ನಿನ್ನೆ ರಾತ್ರಿ ನಡೆದಿರುವ ಭಾರತ-ಚೀನಾ ಸೈನಿಕರ ಮುಖಾಮುಖಿ ಗಲಾಟೆಯಲ್ಲಿ ತಮಿಳುನಾಡು ಮೂಲದ ಸೈನಿಕ ಪಳನಿ ಹುತಾತ್ಮನಾಗಿದ್ದು, ಯೋಧನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಹುತಾತ್ಮ ಪಳನಿ ರಾಮನಾಥಪುರಂ ಜಿಲ್ಲೆಯವರಾಗಿದ್ದಾರೆ. ಇವರು 22 ವರ್ಷಗಳಿಂದ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರ ಸಹೋದರ ಕೂಡ ಸೈನಿಕರಾಗಿದ್ದು, ರಾಜಸ್ಥಾನದಲ್ಲಿದ್ದಾರೆ.

ಗಡಿ ಗಲಾಟೆಯಲ್ಲಿ ತಮಿಳುನಾಡಿನ ಯೋಧ ಹುತಾತ್ಮ; ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ, ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್‌ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದು, ಯೋಧನ ಕುಟುಂಬಕ್ಕೆ ಸಂತಾಪ ತಿಳಿಸಿ ಆತನ ತ್ಯಾಗವನ್ನು ಸ್ಮರಿಸಿದ್ದಾರೆ.

ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ಭಾರತ-ಚೀನಾ ಸೈನಿಯರು ನಿನ್ನೆ ಮುಖಾಮುಖಿಯಾಗಿ ಹೊಡೆದಾಡಿಕೊಂಡಿದ್ದರು. ಇದರಲ್ಲಿ ಭಾರತದ ಓರ್ವ ಸೇನಾಧಿಕಾರಿ ಸೇರಿ ಮೂವರು ಹುತಾತ್ಮರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.