ETV Bharat / bharat

ಕೊರೊನಾ ವಾರಿಯರ್ಸ್​ಗೆ ಮೋದಿ ಸರ್ಕಾರದಿಂದ ದ್ರೋಹ; ರಾಹುಲ್ ಗಾಂಧಿ

18 ರಾಜ್ಯಗಳಲ್ಲಿ ಕೊರೊನಾ ವೈರಸ್​ ಸೋಂಕಿಗೆ ಇದುವರೆಗೆ 196 ವೈದ್ಯರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯ ವರದಿಯನ್ನು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ. ಸೋಂಕು ಪೀಡಿತ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸರಿಯಾದ ಆರೈಕೆ ನೀಡುವಂತೆ ಭಾರತೀಯ ವೈದ್ಯಕೀಯ ಸಂಘವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

Rahul Gandhi
ರಾಹುಲ್​ ಗಾಂಧಿ
author img

By

Published : Aug 10, 2020, 7:40 PM IST

ನವದೆಹಲಿ: ಕೋವಿಡ್​​-19 ಹೋರಾಟದಲ್ಲಿನ ಮುಂಚೂಣಿ ಕಾರ್ಮಿಕರಿಗೆ ಸರ್ಕಾರವು ಸಾಕಷ್ಟು ರಕ್ಷಣಾ ಸಾಧನಗಳನ್ನು ಒದಗಿಸದೆ 'ದ್ರೋಹ ಮಾಡಿದೆ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

18 ರಾಜ್ಯಗಳಲ್ಲಿ ಕೊರೊನಾ ವೈರಸ್​ ಸೋಂಕಿಗೆ ಇದುವರೆಗೆ 196 ವೈದ್ಯರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯ ವರದಿಯನ್ನು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ. ಸೋಂಕು ಪೀಡಿತ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸರಿಯಾದ ಆರೈಕೆ ನೀಡುವಂತೆ ಭಾರತೀಯ ವೈದ್ಯಕೀಯ ಸಂಘವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ವಾರಿಯರ್ಸ್​​ಗಾಗಿ ಚಪ್ಪಾಳೆ ತಟ್ಟುವ ಮೂಲಕ ಸಾರ್ವಜನಿಕರು ಮೋದಿ ಜಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಮೋದಿ ಸರ್ಕಾರ ಕೊರೊನಾ ವಾರಿಯರ್ಸ್‌ಗೆ ಸಹಾಯ ಮಾಡದೆ ಕೈ ಎಳೆದು ಅವರಿಗೆ ದ್ರೋಹ ಬಗೆದಿದೆ ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಕರೋನಾ ವಾರಿಯರ್ಸ್‌ಗೆ ಭದ್ರತೆ, ಗೌರವ ಮತ್ತು ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

ಕೋವಿಡ್​​-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸುತ್ತಿದೆ. ನಿರೀಕ್ಷಿತ ಫಲಿತಾಂಶಗಳನ್ನು ನೀಡುವಲ್ಲಿ ಲಾಕ್‌ಡೌನ್‌ಗಳು ವಿಫಲವಾಗಿವೆ ಎಂದು ಟೀಕಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.