ETV Bharat / bharat

ನಿರ್ಮಲಾ ಸೀತಾರಾಮನ್‌... ಸೇಲ್ಸ್‌ಗರ್ಲ್‌ನಿಂದ ರಕ್ಷಣಾ ಖಾತೆವರೆಗಿನ ಕಹಾನಿ..! - ರಕ್ಷಣಾ ಖಾತೆ

ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಜೀವನ ಸ್ಟೋರಿ ನಿಜಕ್ಕೂ ಪ್ರೇರಣೆ. ಆರ್ಥಿಕ ತಜ್ಞೆ, PriceWaterhouseCooper ಮಾಜಿ ಉದ್ಯೋಗಿ ಈಗ ದೇಶದಲ್ಲಿ ಸ್ವತಂತ್ರವಾಗಿ ರಕ್ಷಣಾ ಖಾತೆ ನಿರ್ವಹಿಸಿದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದ ನಿರ್ಮಲಾ ಸೀತಾರಾಮನ್ ಜೀವನ ಸಾಕಷ್ಟು ಆಸಕ್ತಿಕರ ಸಂಗತಿ ಒಳಗೊಂಡಿದೆ.

ನಿರ್ಮಲಾ ಸೀತಾರಾಮನ್‌
author img

By

Published : Mar 10, 2019, 12:33 PM IST

ನವದೆಹಲಿ: ಮಹಿಳೆ ಕಟ್ಟುಪಾಡು ಮುರಿದ್ರೇ ಎಂಥಾ ಸಾಧನೆ ಸಾಧ್ಯ ಅನ್ನೋದಕ್ಕೆ ನಿರ್ಮಲಾ ಸೀತಾರಾಮನ್‌ ಒಂದೊಳ್ಳೆ ಉದಾಹರಣೆ. ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳು ವಿದೇಶದಲ್ಲಿ ಸೇಲ್ಸ್‌ ಗರ್ಲಾಗಿ ಮುಂದೆ ಭಾರತದ ರಕ್ಷಣಾ ಖಾತೆಯನ್ನ ಸಮರ್ಥವಾಗಿ ನಿಭಾಯಿಸುವ ಮಟ್ಟಕ್ಕೆ ಬೆಳದ ಪರಿ ನಿಜಕ್ಕೂ ಸೋಜಿಗ.

ತಿರುಚಿನಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಪದವಿ ಬಳಿಕ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂ.ಎ ಅರ್ಥಶಾಸ್ತ್ರ ಓದಿದವರು ನಿರ್ಮಲಾ. ಜೆಎನ್‌ಯುನಲ್ಲಿ ಓದುವ ವೇಳೆಯೇ ಪರಾಕಲ ಪ್ರಭಾಕರ್ ಜತೆ ಪ್ರೇಮಾಂಕುರವಾಗಿತ್ತು. ಪ್ರಭಾಕರ್ ಕುಟುಂಬಕ್ಕೆ ರಾಜಕೀಯ ಹಿನ್ನೆಲೆಯಿದೆ. ಪತಿಯ ತಂದೆ ಪರಾಕಲ ಶೇಷಾವತಾರಂ 1970ರ ದಶಕದಲ್ಲಿ ಆಂಧ್ರ ಸಚಿವರಾಗಿದ್ದವರು. ಪತಿ ಪ್ರಭಾಕರ್‌ ಲಂಡನ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌ನಲ್ಲಿ ಪಿಹೆಚ್‌ಡಿ ಮಾಡಲು ತೆರಳಿದಾಗ ಅವರ ಜತೆಗೇ ನಿರ್ಮಲಾ ಅವರೂ ಕೂಡ ವಿದೇಶಕ್ಕೆ ಹಾರಿದ್ದರು.

ಲಂಡನ್‌ನ ರಿಜೆಂಟ್‌ ಸ್ಟ್ರೀಟ್‌ನಲ್ಲಿದ್ದ ಮನೆ ಅಲಂಕಾರಿಕ ಮಳಿಗೆಯೊಂದರಲ್ಲಿ ಮೊದಲು ಸೇಲ್ಸ್ ಗರ್ಲ್ ಆಗಿದ್ದರು. ಆಮೇಲೆ ಬಿಬಿಸಿ ರೇಡಿಯೋ ತಮಿಳು ವಿಭಾಗದಲ್ಲಿ ಟ್ರಾನ್ಸ್‌ಲೇಟರ್‌ ಆಗಿ ಕೆಲಸಕ್ಕೆ ಸೇರಿದರು. ಬಳಿಕ firm Price Waterhouse ಸಂಸ್ಥೆಯ ಸಂಶೋಧನಾ ವಿಭಾಗಕ್ಕೆ ವಿಶ್ಲೇಷಣಾ ಸಲಹೆಗಾರರಾಗಿದ್ದರು. ಸೇಲ್ಸ್‌ ಗರ್ಲ್‌ ಆಗಿ ಮುಂದೆ ದೇಶದ ರಕ್ಷಣಾ ಖಾತೆ ನಿರ್ವಹಿಸುವುದು ಅಂದ್ರೇ ಸಣ್ಣ ಮಾತಲ್ಲ. 1991ರಲ್ಲಿ ಪತಿ ಹಾಗೂ ಮಗುವಿನ ಜತೆ ಲಂಡನ್‌ನಿಂದ ಮರಳಿದರು. ಪತಿ ಪ್ರಭಾಕರ್‌ ಹೈದರಾಬಾದ್‌ನಲ್ಲಿ ಮಾರ್ಕೆಟಿಂಗ್‌ ರೀಸರ್ಚ್‌ ಏಜೆನ್ಸಿ ನಡೆಸುತ್ತಿದ್ದರು. ತಂದೆ ಹೆಸರಿನಲ್ಲಿ ಟ್ರಸ್ಟ್‌ನ ಸ್ಥಾಪಿಸಿ, ಸ್ಕೂಲ್‌ ತೆರೆ
ಪತಿಗೆ ನಿರ್ಮಲಾ ಸಾಥ್ ಕೊಡುತ್ತಿದ್ದರು.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕವಾಗಿ (2003-05) 3 ವರ್ಷದ ಅವಧಿ ಮುಗಿದ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. ಪತಿ ಪ್ರಭಾಕರ್‌ ಕುಟುಂಬ ದಶಕಗಳವರೆಗೂ ಕಾಂಗ್ರೆಸ್‌ನ ಬೆಂಬಲಿಸುತ್ತಾ ಬಂದಿತ್ತು. ಆದರೆ, ರಾಜಕೀಯದಲ್ಲಿ ನಿರ್ಮಲಾ ಭಿನ್ನ ದಾರಿ ತುಳಿದರು. 2010ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ, ನಿರ್ಮಲಾರನ್ನ ಬಿಜೆಪಿ ವಕ್ತಾರೆಯಾಗಿ ನೇಮಿಸಿದ್ದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆರಂಭದಲ್ಲಿ ವಾಣಿಜ್ಯ ಖಾತೆಯ ರಾಜ್ಯ ಸಚಿವೆಯಾಗಿದ್ದರು.

'ಒಂದು ಕಾಲಕ್ಕೆ ಹುಡುಗಿಯಾಗಿದ್ದಕ್ಕೆ ಅಸೂಯೆಪಟ್ಟಿದ್ದೆ. ನನಗೆ ಯಾವಾಗಲೂ ನೆನಪಿಡಬಹುದಾದ ಒಂದು ಒಳ್ಳೇ ಸಲಹೆ ಸಿಕ್ಕಿದ್ದೇನು ಗೊತ್ತಾ? ಸಾಗುವ ದಾರಿಯಲ್ಲಿ ಮಧ್ಯೆ ನಿಂತು ಸಮಚಿತ್ತವನ್ನ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. ಪದಗಳ ಮೇಲೆ ಹಿಡಿತ ಕಳೆದುಕೊಳ್ಳಬಾರದು. ಯಾವಾಗಲೇ ಆದರೂ ಸರಿ ಅತೀರೇಕಕ್ಕೆ ಹೋಗಬಾರದು. ಹೆಚ್ಚು ಮಾತನಾಡಿದರೆ ನಮ್ಮ ಘನತೆ ಕಳೆದುಕೊಳ್ಳುತ್ತೇವೆ. ಅತೀ ಆತ್ಮವಿಶ್ವಾಸವೂ ಒಳ್ಳೇದಲ್ಲ ಮತ್ತು ಆಕ್ರಮಣಕಾರಿ ಅಥವಾ ಕೊನೆಗೆ ಸೋತಾಗಲೂ ಸಮತೋಲನ, ಸಮಚಿತ್ತ ಕಾಪಾಡಿಕೊಳ್ಳಬೇಕು. ಆಗ ಹೋಗುವ ದಾರಿಯಲ್ಲಿ ಯಾವತ್ತೂ ಸೋಲುವುದಿಲ್ಲ' ಅಂತಾ ಸೀತಾರಾಮನ್ ಹೇಳಿಕೊಂಡಿದ್ದರು.

ಈಗಲೂ ನಿತ್ಯ 6 ಗಂಟೆ ಮಾತ್ರ ಮಲಗುವ ಇವರು ಬೆಳಗ್ಗೆ 7 ಗಂಟೆಗೆ ಪೇಪರ್‌ ಓದುವ ಮೂಲಕ ದಿನ ಆರಂಭಿಸುತ್ತಾರೆ. ಜೀವನದಲ್ಲಿ ಸಮತೋಲನದ ಜತೆ ಶಿಸ್ತು ಪಾಲಿಸಿದ್ರೇ, ಅತೀ ಎತ್ತರದ ಸ್ಥಾನ ತಲುಪೋದಕ್ಕೆ ಸಾಧ್ಯ ಅನ್ನೋದಕ್ಕೆ ನಿರ್ಮಲಾ ಸೀತಾರಾಮನ್ ಒಳ್ಳೇ ಉದಾಹರಣೆ.

Intro:Body:

 From A Salesgirl To India's Woman Defence Ministe

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.