ಗೊಂಡಿಯಾ: ಬಾವಿಯಲ್ಲಿ ವಿಷಾನಿಲ ಸೇವಿಸಿ ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೊದಲು ವ್ಯಕ್ತಿಯೋರ್ವ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಾವಿಯೊಳಗಿನ ವಿಷಾನಿಲ ಸೇವಿಸಿ ಸಾವನ್ನಪ್ಪಿದ್ದಾನೆ. ಈತನನ್ನು ರಕ್ಷಿಸಲು ಮೂವರು ಬಾವಿಯೊಳಗಿಳಿದಿದ್ದು, ಬಳಿಕ ಅವರೂ ಕೂಡ ಮೃತಪಟ್ಟಿದ್ದಾರೆ.
ಗೊಂಡಿಯಾ ಜಿಲ್ಲೆಯ ಅಮಗಾಂವ್ ತಾಲೂಕಿನ ಪಂಗಾಂವ್‌ನಲ್ಲಿ ಘಟನೆ ನಡೆದಿದೆ.