ETV Bharat / bharat

ಕುಡಿದು ಕಿರಿಕ್ ಮಾಡುತ್ತಿದ್ದ ತಮ್ಮ.. ಪೊಲೀಸರಿಗೆ ತಿಳಿಸಿದ್ದಕ್ಕೆ ಮಕ್ಕಳೊಂದಿಗೆ ಸೇರಿ ಅಣ್ಣನ ಹತ್ಯೆ - ಅಣ್ಣನನ್ನೇ ಕೊಲೆ ಮಾಡಿದ ತಮ್ಮ

ಕುಟುಂಬಕ್ಕೆ ತೊಂದರೆ ಕೊಡುತ್ತಾನೆ ಎಂದು ಪೊಲೀಸರಿಗೆ ತಿಳಿಸಿದ್ದಕ್ಕೆ ರೊಚ್ಚಿಗೆದ್ದ ತಮ್ಮ ತನ್ನ ಮಕ್ಕಳೊಂದಿಗೆ ಸೇರಿಕೊಂಡು ಅಣ್ಣನನ್ನೇ ಕೊಲೆ ಮಾಡಿದ್ದಾನೆ.

Elderly killed by younger brother
ಪೊಲೀಸರಿಗೆ ತಿಳಿಸಿದ್ದಕ್ಕೆ ಮಕ್ಕಳೊಂದಿಗೆ ಸೇರಿ ಅಣ್ಣನ ಹತ್ಯೆ
author img

By

Published : Jun 25, 2020, 6:48 PM IST

ಉನ್ನಾವೊ(ಉತ್ತರ ಪ್ರದೇಶ): ಕುಡಿದು ಗ್ರಾಮಸ್ಥರು ಮತ್ತು ಕುಟುಂಕ್ಕೆ ತೊಂದರೆ ಕೊಡುತ್ತಾನೆ ಎಂದು ಪೊಲೀಸರಿಗೆ ತಿಳಿಸಿದ್ದಕ್ಕೆ ರೊಚ್ಚಿಗೆದ್ದ ತಮ್ಮ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಉನ್ನಾವೋ ಜಿಲ್ಲೆಯ ಜವಾನ್ ಗ್ರಾಮದಲ್ಲಿ ನಡೆದಿದೆ.

ದಲ್ಗಂಜನ್ ಸಿಂಗ್ ಮೃತ ವ್ಯಕ್ತಿ. ಕಿರಿಯ ಸಹೋದರ ರಾಕೇಶ್ ಸಿಂಗ್ ಕುಡಿದು ಬಂದು ಗ್ರಾಮಸ್ಥರನ್ನೆಲ್ಲ ನಿಂದಿಸುತ್ತಿದ್ದ. ಅಲ್ಲದೆ ದಲ್ಗಂಜನ್ ಸಿಂಗ್ ಕುಟುಂಬಕ್ಕೂ ಸಾಕಷ್ಟು ತೊಂದರೆ ನೀಡಿದ್ದಾನೆ. ಇದರಿಂದ ಬೇಸತ್ತ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಎಚ್ಚರಿಕೆ ನೀಡಿದ ನಂತರ ರಾಕೇಶ್ ಸಿಂಗ್​ನನ್ನು ಬಿಟ್ಟು ಕಳುಹಿಸಿದ್ದಾರೆ.

ಆದರೂ, ಮತ್ತೆ ಗ್ರಾಮಕ್ಕೆ ಬಂದು ಜನರಿಗೆ ತೊಂದರೆ ನೀಡಿದ್ದಾನೆ. ಅಲ್ಲದೆ ತನ್ನ ವಿರುದ್ಧ ಸುಮ್ಮನೆ ಪೊಲೀಸರಿಗೆ ದೂರು ನೀಡಿದ್ದೀಯ ಎಂದು ಅಣ್ಣನ ವಿರುದ್ಧ ಜಗಳ ನಡೆಸಿದ್ದಾನೆ. ರಾಕೇಶ್ ಸಿಂಗ್ ಮತ್ತು ಆತನ ಇಬ್ಬರು ಮಕ್ಕಳು ಸೇರಿ ಕಟ್ಟಿಗೆ ಮತ್ತು ಇಟ್ಟಿಗೆಯಿಂದ ದಲ್ಗಂಜನ್ ಸಿಂಗ್ ಮೇಲೆ ದಾಳಿ ನಡೆಸಿದ್ದಾರೆ.

ದಲ್ಗಂಜನ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.