ETV Bharat / bharat

ವೈದ್ಯಕೀಯ ಉಪಕರಣಗಳನ್ನು ರಾಜ್ಯಗಳಿಗೆ ಕೇಂದ್ರವೇ ಪೂರೈಸಲಿದೆ: ಆರೋಗ್ಯ ಸಚಿವಾಲಯ ಸೂಚನೆ

author img

By

Published : Apr 10, 2020, 10:24 AM IST

ಕೋವಿಡ್-19 ವಿರುದ್ಧ ಹೋರಾಡಲು ಭಾರತದಾದ್ಯಂತ ವೈದ್ಯಕೀಯ ಸಲಕರಣೆಗಳ ಕೊರತೆಯ ಬಗ್ಗೆ ವರದಿಗಳು ಬರುತ್ತಿವೆ. ಹಾಗಾಗಿ, ವೈಯಕ್ತಿಕ ಸುರಕ್ಷತಾ ಸಾಧನಗಳು (ಪಿಪಿಇ), ಎನ್ 95 ಮುಖಗವಸುಗಳು ಮತ್ತು ವೆಂಟಿಲೇಟರ್‌ಗಳಂತಹ ಅವಶ್ಯಕ ವೈದ್ಯಕೀಯ ಉಪಕರಣಗಳನ್ನು ಸ್ವಂತವಾಗಿ ಖರೀದಿಸಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ರಾಜ್ಯಸರ್ಕಾರಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ

ನವದೆಹಲಿ: ಕೋವಿಡ್​ ವಿರುದ್ಧ ಒಗ್ಗಟ್ಟಾಗಿರುವ ಭಾರತ ಸರ್ವ ರೀತಿಯಲ್ಲೂ ಸನ್ನದ್ಧವಾಗುತ್ತಿದೆ. ಈ ಸಂಬಂಧ ಎಲ್ಲಾ ರಾಜ್ಯ ಸರ್ಕಾರಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಸೂಚನೆ ನೀಡಿದೆ.

ಎನ್ 95 ಮಾಸ್ಕ್​, ವೆಂಟಿಲೇಟರ್​ನಂತಹ ವೈದ್ಯಕೀಯ ಉಪಕರಣಗಳನ್ನು ಸ್ವಂತವಾಗಿ ಸಂಗ್ರಹಣೆ ಮಾಡಬಾರದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವ್ಯದ್ಯಕೀಯ ಪರಿಕರಗಳನ್ನು ಸಂಗ್ರಹಿಸಿ ಎಲ್ಲಾ ರಾಜ್ಯಗಳಿಗೂ ವಿತರಣೆ ಮಾಡುವ ಜವಾಬ್ದಾರಿ ಹೊಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೆಲವು ರಾಜ್ಯಗಳಲ್ಲಿ ಸಾಕಷ್ಟು ವೈದ್ಯಕೀಯ ಪರಿಕರಗಳನ್ನು ಇಟ್ಟುಕೊಂಡರೂ ಸಹ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಇವುಗಳನ್ನು ಬಳಸದೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಕ್ಷೇತ್ರ ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ಪ್ರಮುಖ ಉಪಕರಣಗಳ ವಿತರಣೆಯನ್ನು ಮಾಡುವ ಸಂಬಂಧ ರಾಜ್ಯ ಸರ್ಕಾರ ಖಚಿತಪಡಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಉಪಕರಣಗಳನ್ನು ನಿರ್ವಹಿಸಲು ನುರಿತ ಮತ್ತು ತರಬೇತಿ ಪಡೆದ ಮಾನವಶಕ್ತಿಯ ಸಮರ್ಪಕ ಮೌಲ್ಯಮಾಪನವನ್ನು ರಾಜ್ಯ ಸರ್ಕಾರಗಳು ನಿರ್ಣಯಿಸಬೇಕು ಮತ್ತು ಕೌಶಲ್ಯ ಉನ್ನತೀಕರಣಕ್ಕಾಗಿ ಸಾಕಷ್ಟು ತರಬೇತಿ ಘಟಕಗಳನ್ನೂ ಆಯೋಜಿಸಬೇಕು ಎಂದು ಆರೋಗ್ಯ ಸಚಿವಾಲಯ ನಿರ್ದೇಶನ ಕೊಟ್ಟಿದೆ.

ರಾಜ್ಯಗಳಲ್ಲಿ ಆಮ್ಲಜನಕ ಸಿಲಿಂಡರ್​ಗಳ ಲಭ್ಯತೆಯನ್ನು ಪ್ರಮಾಣೀಕರಿಸುವ ಅವಶ್ಯಕತೆಯಿದೆ. ಕೊರೊನಾ ರೋಗಿಗಳ ನಿರ್ವಹಣೆಗೆ ರಾಜ್ಯಗಳು ಬೇಕಾದ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.