ನವದೆಹಲಿ: ದೇಶದ ಪ್ರಜಾಪ್ರಭುತ್ವವನ್ನು 'ಹೋಟೆಲ್ ರಾಜತಾಂತ್ರಿಕತೆ'ಯಿಂದ ಸೋಲಿಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ನಿಂದ ಈ ಹೇಳಿಕೆ ಬಂದಿದೆ.
ಶುಕ್ರವಾರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕೆಂದು ನಿನ್ನೆ ಸುಪ್ರೀಂಕೋರ್ಟ್ ರಾಜ್ಯ ವಿಧಾನಸಭಾ ಸ್ಫೀಕರ್ಗೆ ಸೂಚಿಸಿತ್ತು. ಈ ಆದೇಶ ಬಂದ ಒಂದು ದಿನದ ನಂತರ ಕಮಲ್ ನಾಥ್ ರಾಜೀನಾಮೆ ನೀಡಿದ್ದಾರೆ. ಸುಮಾರು 15 ತಿಂಗಳ ಕಮಲ್ ನಾಥ್ ಅವಧಿ ಈ ಮೂಲಕ ಮುಕ್ತಾಯವಾಗಿದೆ.
"ಇಂದು ಪ್ರಜಾಪ್ರಭುತ್ವವನ್ನು ಹೋಟೆಲ್ ರಾಜತಾಂತ್ರಿಕತೆಯಿಂದ ಸೋಲಿಸಲಾಯಿತು" ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಟ್ವೀಟ್ ಮಾಡಿದ್ದಾರೆ.
-
Today democracy defeated by hotel diplomacy . #MadhyaPradesh #KamalnathResign
— Abhishek Singhvi (@DrAMSinghvi) March 20, 2020 " class="align-text-top noRightClick twitterSection" data="
">Today democracy defeated by hotel diplomacy . #MadhyaPradesh #KamalnathResign
— Abhishek Singhvi (@DrAMSinghvi) March 20, 2020Today democracy defeated by hotel diplomacy . #MadhyaPradesh #KamalnathResign
— Abhishek Singhvi (@DrAMSinghvi) March 20, 2020
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಹಗಲಲ್ಲಿ ಹತ್ಯೆ ಮಾಡಲಾಗಿದೆ. ಅಧಿಕಾರದ ಆಸೆಗಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಕಿತ್ತುಹಾಕುವುದು ಬಿಜೆಪಿಗೆ ಅಭ್ಯಾಸವಾಗಿದೆ ಎಂದು ಅವರು ಟ್ವೀಟರ್ನಲ್ಲಿ ತಿಳಿಸಿದ್ದಾರೆ.
-
What we have witnessed today in #MadhyaPradesh is a blatant killing of Democracy in broad day light. Dismantling the democratically elected govt for the lust of power has become a habit for the BJP.
— Ashok Gehlot (@ashokgehlot51) March 20, 2020 " class="align-text-top noRightClick twitterSection" data="
">What we have witnessed today in #MadhyaPradesh is a blatant killing of Democracy in broad day light. Dismantling the democratically elected govt for the lust of power has become a habit for the BJP.
— Ashok Gehlot (@ashokgehlot51) March 20, 2020What we have witnessed today in #MadhyaPradesh is a blatant killing of Democracy in broad day light. Dismantling the democratically elected govt for the lust of power has become a habit for the BJP.
— Ashok Gehlot (@ashokgehlot51) March 20, 2020
"ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ರಾಜೀನಾಮೆ ನೀಡುತ್ತಾರೆ. ಅದರೊಂದಿಗೆ ಪ್ರಜಾಪ್ರಭುತ್ವ ಹಾಗೂ ಚುನಾವಣೆಯ ಪರಿಕಲ್ಪನೆಯು ಸಾಯುತ್ತದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದಾರೆ.
-
CM Madhya Pradesh #KamalNathResigns, and along with it dies the concept of democracy and elections.
— Avinash Pande (@avinashpandeinc) March 20, 2020 " class="align-text-top noRightClick twitterSection" data="
">CM Madhya Pradesh #KamalNathResigns, and along with it dies the concept of democracy and elections.
— Avinash Pande (@avinashpandeinc) March 20, 2020CM Madhya Pradesh #KamalNathResigns, and along with it dies the concept of democracy and elections.
— Avinash Pande (@avinashpandeinc) March 20, 2020