ನವದೆಹಲಿ : ಚಿಕಿತ್ಸಾ ಮೊತ್ತ ಪಾವತಿಸಲು ಅಸಹಾಯಕಳಾದ 17 ವರ್ಷದ ಬಾಲಕಿಯನ್ನು ಉತ್ತಮ್‌ನಗರದ ಖಾಸಗಿ ಆಸ್ಪತ್ರೆಯೊಂದು ಒತ್ತೆಯಾಳಾಗಿ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಬಾಲಕಿ ತನ್ನ ಹೊಟ್ಟೆಯ ಸೋಂಕಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ತರುವಾಯ ಆಸ್ಪತ್ರೆಯಿಂದ ₹6,000 ಬಿಲ್ ಪಾವತಿಸುವಂತೆ ಕೇಳಲಾಗಿದೆ. ಕೇವಲ ನಾಲ್ಕು ಗಂಟೆಗಳ ಸಮಯದ ಚಿಕಿತ್ಸೆಗೆ ಇಷ್ಟೊಂದು ಹಣವನ್ನು ಕಟ್ಟಲು ನಿರಾಕರಿಸಿದ ಆಕೆ,ಈ ಹಣವನ್ನು ಕಟ್ಟುವಷ್ಟು ಶಕ್ತಳಲ್ಲ ಎಂದು ಕೇಳಿಕೊಂಡಿದ್ದಾಳೆ.
ಈ ಬಾಲಕಿಯ ಮಾತನ್ನು ಗಣನೆಗೆ ತೆಗೆದುಕೊಳ್ಳದ ಆಸ್ಪತ್ರೆಯು ರೋಗಿಯನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದು, ಅವಳನ್ನು ಒತ್ತೆಯಾಳಾಗಿರಿಸಿದೆ. ಹೀಗಾಗಿ ಸಹಾಯ ಪಡೆಯುವ ಸಲುವಾಗಿ, ಹುಡುಗಿ ವಿಡಿಯೋವೊಂದರಲ್ಲಿ ಮಾತನಾಡುವ ಮೂಲಕ ತನ್ನ ಅವಸ್ಥೆಯನ್ನು ವಿವರಿಸಿದ್ದಾಳೆ.