ETV Bharat / bharat

ಡಬ್ಲ್ಯುಹೆಚ್‌ಒ ಮುಖ್ಯಸ್ಥರೊಂದಿಗೆ ಮಾನಸಿಕ ಆರೋಗ್ಯ ಕುರಿತು ದೀಪಿಕಾ ಸಂಭಾಷಣೆ ಸ್ಥಗಿತ

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರು ಡಬ್ಲ್ಯುಹೆಚ್​ಒ ಮಹಾನಿರ್ದೇಶಕ ಡಾ. ಅಧಾನೊಮ್ ಘೆಬ್ರೆಯೆಸಸ್ ಅವರೊಂದಿಗಿನ ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಮಾನಸಿಕ ಆರೋಗ್ಯದ ಬಗೆಗಿನ ಚರ್ಚೆಯನ್ನು ಮುಂದಿನ ನಿರ್ದೇಶನದವರೆಗೆ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ.

Deepika'
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ
author img

By

Published : Apr 23, 2020, 4:46 PM IST

ನವದೆಹಲಿ: ಕೊರೊನಾ ವೈರಸ್​​ ಭೀತಿಯ ಸಮಯದಲ್ಲಿ 'ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ವಿಷಯ'ದ ಕುರಿತ ಡಬ್ಲ್ಯುಹೆಚ್‌ಒ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಯಲಿದೆ ಎಂದು ಘೋಷಿಸಿದ್ದ ನಟಿ ದೀಪಿಕಾ ಪಡುಕೋಣೆ ಇದೀಗ ಆ ಬಗ್ಗೆ ಮತ್ತೊಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್ 23 ರಂದು ಇನ್‌ಸ್ಟಾಗ್ರಾಂ ಲೈವ್ ಮೂಲಕ ನಡೆಯಬೇಕಿದ್ದ ಟಾಕ್ ಸೆಷನ್‌ನ ವಿಳಂಬದ ಬಗ್ಗೆ ಇನ್​ಸ್ಟಾಗ್ರಾಂನಲ್ಲಿಯೇ ಬಹಿರಂಗಪಡಿಸಿದ್ದಾರೆ.

deepikas-conversation-on-mental-health-with-who-chief-put-on-hold
ಇನ್ಸ್ಟಾಗ್ರಾಂ

ಅನಿವಾರ್ಯ ಕಾರಣದಿಂದಾಗಿ 23 ನೇ ಏಪ್ರಿಲ್ 1, 2020 ಕ್ಕೆ ನಿಗದಿಯಾಗಿದ್ದ ಮಾತುಕತೆಯನ್ನು ಸ್ಥಗಿತಗೊಳಿಸಿರುವುದಕ್ಕೆ ವಿಷಾದಿಸುತ್ತೇನೆ ಎಂದಿದ್ದು, ಈ ವಿಷಯವು 'ಸಾಂಕ್ರಾಮಿಕ ಮತ್ತು ಅದಕ್ಕೂ ಮೀರಿದ ಮಾನಸಿಕ ಆರೋಗ್ಯಕ್ಕೆ ಆದ್ಯತೆ' ನೀಡುವ ಕುರಿತಾಗಿ ನನ್ನ ಹಾಗೂ ಡಬ್ಲ್ಯುಹೆಚ್‌ಒನ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ನಡುವಿನ ಮಾತುಕತೆ ಬಗ್ಗೆ ಚರ್ಚೆಯಾಗಿತ್ತು ಎಂದಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪರೀಕ್ಷಾ ಸಮಯದಲ್ಲಿ ಅವರ ಎಲ್ಲಾ ಅಭಿಮಾನಿಗಳಿಗೆ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ಮಾನಸಿಕ ಆರೋಗ್ಯವು ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಿಜವಾದ ಹಾಗೂ ಮಾನ್ಯವಾದ ಅಂಶವಾಗಿದೆ ಎಂದು ದೀಪಿಕಾ ಹೇಳಿದ್ದಾರೆ.

ಕೊರೊನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಮಹತ್ವವನ್ನು ಚರ್ಚಿಸಲು ನಟಿ ಈ ಹಿಂದೆ ಇನ್​ಸ್ಟಾಗ್ರಾಂ ಲೈವ್​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಅವರೊಂದಿಗಿನ ಮಾತುಕತೆಗೆ ತಮ್ಮ ತಂಡವನ್ನು ಸಹ ಘೋಷಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.