ವಿಶೇಷ ಅಂಕಣ: ಕ್ವಿಕ್ ಸಪೋರ್ಟ್ ಸೋಗಿನಲ್ಲಿ ಸೈಬರ್ ದಾಳಿ! - ಸೈಬರ್ ದಾಳಿ
ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ತಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಡಿಜಿಟಲ್ ಸೇವೆಗಳನ್ನು ಸಕ್ರಿಯಗೊಳಿಸಿವೆ. ಎಸ್‌ಬಿಐ ಬಡ್ಡಿ ಮತ್ತು ಐಸಿಐಸಿಐ ಪಾಕೆಟ್ಸ್ ಕೆಲವು ಪ್ರಸಿದ್ಧ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್‌ಗಳಾಗಿವೆ.
ಹೈದರಾಬಾದ್: ಸರ್, ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಮಗ ನನ್ನ ಫೋನ್‌ನಲ್ಲಿ ಪೇಟಿಎಮ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಮೂರು ದಿನಗಳ ಹಿಂದೆ ಸಂದೀಪ್ ಎಂಬ ವ್ಯಕ್ತಿ ನನಗೆ ಕರೆ ಮಾಡಿದರು. ನನ್ನ ವಿವರಗಳನ್ನು ನವೀಕರಿಸಲು ಕ್ವಿಕ್‌ಸ್ಪೋರ್ಟ್ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದರು. ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ನನ್ನ ಫೋನ್‌ನಲ್ಲಿ ಕೋಡ್ ಹೊಂದಿರುವ ಸಂದೇಶ ಬರುತ್ತದೆ ಎಂದು ಹೇಳಿದರು. ಸೋಮವಾರ, ನನ್ನ ಮೊಬೈಲ್ ಗೆ ಮೂರು ಎಸ್‌ಎಂಎಸ್ ಬಂದಿದೆ. ಕೆಲವೇ ಗಂಟೆಗಳಲ್ಲಿ, ನನ್ನ ಬ್ಯಾಂಕ್ ಖಾತೆಯಲ್ಲಿ 2.2 ಲಕ್ಷ ರೂ. ಕಡಿಮೆ ಆಗಿದೆ. ವಾಸ್ತವವಾಗಿ, ನಾನು ಯಾರಿಗೂ ಯಾವುದೇ ಒಟಿಪಿ ನೀಡಿಲ್ಲ. ಏನಾಯಿತು ಎಂದು ನನಗೆ ಅರ್ಥವಾಗುತ್ತಿಲ್ಲ – ಇದು ಹೈದರಾಬಾದ್‌ನ ಅಂಬರ್ಪೇಟ್‌ನ ನಿವಾಸಿಯೊಬ್ಬರು ದಾಖಲಿಸಿದ ದೂರಿನ ಸಾರಾಂಶ.
ಇದೊಂದೆ ವಿಶೇಷ ಘಟನೆಯೇನಲ್ಲ. ಕ್ವಿಕ್‌ಸಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಿದ 80 ಪ್ರತಿಶತ ಸ್ಮಾರ್ಟ್‌ಫೋನ್ ಬಳಕೆದಾರರು ಇದೇ ಮಾದರಿಯಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ. ಇದನ್ನು ಮೊಬೈಲ್ ಬ್ಯಾಂಕಿಂಗ್ ಅಥವಾ ಡಿಜಿಟಲ್ ಪಾವತಿ ಅಪ್ಲಿಕೇಶನ್ ಎಂದು ಗ್ರಹಿಸಿ, ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಕ್ವಿಕ್‌ಸಪೋರ್ಟ್ ಡೌನ್‌ಲೋಡ್ ಮಾಡುತ್ತಿದ್ದಾರೆ. ವಾಸ್ತವವಾಗಿ, ಸಾಫ್ಟ್‌ವೇರ್ ಕಂಪನಿಗಳು ಮತ್ತು ಉದ್ಯೋಗಿಗಳು ಈ ಅಪ್ಲಿಕೇಶನ್‌ನಿಂದ ಪ್ರಯೋಜನ ಪಡೆಯುತ್ತಾರೆ. ಆದರೆ ಸೈಬರ್ ಅಪರಾಧಿಗಳು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಲು ಮತ್ತು ಹಣವನ್ನು ಕದಿಯಲು ಈ ಅಪ್ಲಿಕೇಶನ್ ಹೊಂದಿರುವ ವಿಶಿಷ್ಟ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ತಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಡಿಜಿಟಲ್ ಸೇವೆಗಳನ್ನು ಸಕ್ರಿಯಗೊಳಿಸಿವೆ. ಎಸ್‌ಬಿಐ ಬಡ್ಡಿ ಮತ್ತು ಐಸಿಐಸಿಐ ಪಾಕೆಟ್ಸ್ ಕೆಲವು ಪ್ರಸಿದ್ಧ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್‌ಗಳಾಗಿವೆ. ಇವುಗಳ ಜೊತೆಗೆ, ಪೇಟಿಎಂ ಮತ್ತು ಫೋನ್‌ಪೆಯಂತಹ ಕಂಪನಿಗಳು ಇ-ವಾಣಿಜ್ಯ ಪಾವತಿ ವ್ಯವಸ್ಥೆಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಒದಗಿಸುತ್ತಿವೆ. ನಂತರದ ದಿನಗಳಲ್ಲಿ ಸೈಬರ್ ಅಪರಾಧಿಗಳು ಬ್ಯಾಂಕ್ ಖಾತೆ ಹೊಂದಿರುವವರ ಖಾತೆಗಳನ್ನು ಖಾಲಿ ಮಾಡಿ ಅವರನ್ನು ಬಲಿಪಶು ಮಾಡಲು ಕ್ವಿಕ್‌ಸ್ಪೋರ್ಟ್‌ನಂತಹ ವಿಶಿಷ್ಟ ಮತ್ತು ಸುಲಭ ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ರಾಜಸ್ಥಾನ ಮತ್ತು ಬಿಹಾರದ ಸೈಬರ್ ದಾಳಿಕೋರರು ಸ್ಮಾರ್ಟ್ಫೋನ್ ಬಳಕೆದಾರರಿಗೆ ಕರೆ ಮಾಡುತ್ತಾರೆ, ಅವರೊಂದಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ಕ್ವಿಕ್‌ಸಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಲು ಮನವೊಲಿಸುತ್ತಾರೆ.
ಇಂತಹ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳ ಮೂಲಕ ಬ್ಯಾಂಕಿನ ವಿವರಗಳ ಜೊತೆಗೆ ಫೋಟೋಗಳು ಮತ್ತು ವೀಡಿಯೊಗಳಂತಹ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲು ಹ್ಯಾಕರ್‌ಗಳು ಅವಕಾಶ ಪಡೆಯುತ್ತಾರೆ ಎಂದು ಎಸಿಪಿ (ಸೈಬರ್ ಅಪರಾದ) ಕೆವಿಎಂ ಪ್ರಸಾದ್ ವಿವರಿಸಿದರು. ಸೈಬರ್ ದಾಳಿಕೋರರು ಬಳಕೆದಾರರ ಸಂಪರ್ಕಗಳ ವಿವರಗಳನ್ನು ಸಹ ಪಡೆದುಕೊಳ್ಳಬಹುದು. ಕ್ವಿಕ್‌ಸಪೋರ್ಟ್ ಆ್ಯಪ್ ಡೌನ್‌ಲೋಡ್ ಮಾಡಲು ಕೇಳುವ ಯಾವುದೇ ಕರೆಗಳನ್ನು ನಿರ್ಲಕ್ಷಿಸುವಂತೆ ಅವರು ಜನರನ್ನು ಕೋರಿದರು. ಯಾವುದೇ ಅಪ್ಲಿಕೇಶನ್‌ಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಅವುಗಳನ್ನು ಮೊಬೈಕ್ ನಲ್ಲಿ ಅಥವಾ ಯಾವುದೇ ಸಂವಹನ ಉಪಕರಣಗಳಲ್ಲಿ ಅಳವಡಿಸಿಕೊಳ್ಳದಂತೆ ಸಲಹೆ ನೀಡಿದರು.