ಅಯೋಧ್ಯೆ : ಕೊರೊನಾ ಪಾಸಿಟಿವ್ ಪರೀಕ್ಷೆಗೊಳಗಾದ ಗರ್ಭಿಣಿಯೊಬ್ಬರು ಉತ್ತರಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಮಹಿಳೆಯನ್ನು ಸುಲ್ತಾನಪುರದ ಎಲ್-1 ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಹಿಂದಿನ ಕೊರೊನಾ ವೈರಸ್ ಪರೀಕ್ಷೆಗಳು ನಕಾರಾತ್ಮಕವಾಗಿ ಬಂದಿದ್ದವು. ಆಕೆಯ ರಕ್ತದ ಮಾದರಿಗಳನ್ನು ಎರಡು ಬಾರಿ ಲಖನೌದ ಎಸ್‌ಜಿಪಿಜಿಐ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಮೇ 3ರಂದು ಗರ್ಭಿಣಿಯನ್ನು ಸುಲ್ತಾನಪುರದಿಂದ ಅಯೋಧ್ಯೆಯ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮರುದಿನ ಮಹಿಳೆಗೆ ಸಿಸೇರಿಯನ್ ಹೆರಿಗೆ ಮಾಡಲಾಯಿತು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಹೆರಿಗೆ ಸಮಯದಲ್ಲಿ ಕೊರೊನಾಗೆ ಸಂಬಂಧಿಸಿದ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ ಎಂದು ಜಿಲ್ಲಾ ಮಹಿಳಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕಿ ಎಸ್ ಕೆ ಶುಕ್ಲಾ ತಿಳಿಸಿದ್ದಾರೆ.