ETV Bharat / bharat

ಭಾರತದಲ್ಲಿ 33 ಸಾವಿರ ಕೋವಿಡ್​ ಕೇಸ್​: 1,074 ಸಾವು, 8,324 ಮಂದಿ ಚೇತರಿಕೆ

ಲಾಕ್​ಡೌನ್​ ಮುಕ್ತಾಯಗೊಳ್ಳಲು ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಕೋವಿಡ್​-19 ಸೋಂಕಿನಿಂದ ಹೆಚ್ಚು ಹೆಚ್ಚು ಜನರು ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

COVID-19
COVID-19
author img

By

Published : Apr 30, 2020, 10:29 AM IST

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್​-19 ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ಇದ್ರ ಜೊತೆಗೆ ಈ ಸೋಂಕು ತಗುಲಿ ಸೂಕ್ತ ಚಿಕಿತ್ಸೆ ಪಡೆದ ಪರಿಣಾಮ ಗುಣಮುಖರಾಗುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 67 ಮಂದಿ ಸಾವನ್ನಪ್ಪಿದ್ದು, 1,718 ಮಂದಿಗೆ ಹೊಸದಾಗಿ ಈ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲೀಗ 23,651 ಸಕ್ರಿಯ ಸೋಂಕಿತ ಪ್ರಕರಣಗಳಿದ್ದು 8,325 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 597 ಹೊಸ ಪ್ರಕರಣ ಕಂಡು ಬಂದಿದ್ದು, 32 ಜನರು ಸಾವನ್ನಪ್ಪಿದ್ದರು. ಈ ಮೂಲಕ ರಾಜ್ಯದಲ್ಲಿ 9,915 ಪ್ರಕರಣಗಳಿದ್ದು, ಇದರಲ್ಲಿ 1,593 ಮಂದಿ ಸೋಂಕಿನಿಂದ ಗುಣಮುಕ್ತರಾಗಿದ್ದಾರೆ. ಉಳಿದಂತೆ ಗುಜರಾತ್​​ನಲ್ಲಿ 4,082 ಪ್ರಕರಣಗಳಿದ್ದು, 257 ಜನರು ಡಿಸ್ಚಾರ್ಜ್​ ಆಗಿದ್ದಾರೆ.

ಇನ್ನು, ದೆಹಲಿಯಲ್ಲಿ 3,439, ಮಧ್ಯಪ್ರದೇಶದಲ್ಲಿ 2,561, ರಾಜಸ್ಥಾನ 2,438, ತಮಿಳುನಾಡು 2,162, ಉತ್ತರ ಪ್ರದೇಶ 2,134, ತೆಲಂಗಾಣದಲ್ಲಿ 1,012, ಪಶ್ಚಿಮ ಬಂಗಾಲದಲ್ಲಿ 758, ಆಂಧ್ರಪ್ರದೇಶ 1,332 ಪ್ರಕರಣ ಕಂಡು ಬಂದಿವೆ. ಕರ್ನಾಟಕದಲ್ಲೂ 532 ಪ್ರಕರಣಗಳಿದ್ದು, 216 ಜನರು ಗುಣಮುಖರಾಗಿದ್ದು, 21 ಮಂದಿ ಸಾವನ್ನಪ್ಪಿದ್ದಾರೆ.

ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ನಿಜ. ಇದ್ರ ಜೊತೆ ಜೊತೆಗೆ ಗುಣಮುಖರಾಗುತ್ತಿರುವ ರೋಗಿಗಳ ಸಂಖ್ಯೆ ಕೂಡ ಏರಿಕೆಯಾಗಿದ್ದು, 30 ಸಾವಿರ ಸೋಂಕಿತರ ಪೈಕಿ ವಿವಿಧ ರಾಜ್ಯಗಳಲ್ಲಿ 8,325 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.