ನವದೆಹಲಿ: ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ 30 ಸೆಕೆಂಡುಗಳ ಆಡಿಯೊ ಕ್ಲಿಪ್‌ನ ಮೊಬೈಲ್ ಫೋನ್ ಬಳಕೆದಾರರ ಕಾಲರ್ ಟ್ಯೂನ್ (ರಿಂಗ್ ಬ್ಯಾಕ್ ಟ್ಯೂನ್) ಆಗಿ ಮಾಡುವಂತೆ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಸರ್ಕಾರ ಆದೇಶ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋರಿಕೆ ಮೇರೆಗೆ ದೂರಸಂಪರ್ಕ ಇಲಾಖೆಯು (ಡಿಒಟಿ) ನೀಡಿದ ಈ ಆದೇಶವನ್ನು ಈಗಾಗಲೇ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ರಿಲಯನ್ಸ್ ಜಿಯೋ ಪೂರ್ಣವಾಗಿ ಪಾಲಿಸಿವೆ. ಇತರ ಟೆಲಿಕಾಂ ಸಂಸ್ಥೆಗಳು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ನಿಯಮ ಪಾಲಿಸಿಲ್ಲ.
ಆದರೆ, ಬಳಕೆದಾರರು ಈ ಮುಂದೆಯೇ ನಿರ್ದಿಷ್ಟ ಕಾಲರ್ ಟ್ಯೂನ್‌ನ ಸೆಟ್ ಮಾಡಿಕೊಂಡಿದ್ದರೆ ಅಂತವರಿಗೆ ಇದು ಅನ್ವಯವಾಗುವುದಿಲ್ಲ. ಅಲ್ಲದೇ ಎಸ್ಎಂಎಸ್ ಮೂಲಕ ಕೂಡ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವಂತೆ ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಲಾಗಿದೆ.