ನವದೆಹಲಿ: ಇವಿಎಂನಲ್ಲಿ ನೀವು ಯಾವುದೇ ಬಟನ್ ಒತ್ತಿದರೂ ನಿಮ್ಮ ಮತ ಬಿಜೆಪಿಗೆ ಬೀಳಲಿದೆ ಎಂದು ಹರಿಯಾಣದ ಬಿಜೆಪಿ ಶಾಸಕ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ರಾಹುಲ್ ಗಾಂಧಿ ಇದೀಗ ಭಾರತೀಯ ಜನತಾ ಪಕ್ಷದ ಕಾಲೆಳೆದಿದ್ದಾರೆ.
ಹರಿಯಾಣದ ಬಿಜೆಪಿ ಶಾಸಕ ಬಕ್ಷೀಶ್ ಸಿಂಗ್ ವಿರ್ಕ್, ಮತದಾರರನ್ನ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ನೀವು ಇವಿಎಂನಲ್ಲಿ ಯಾವುದೇ ಬಟನ್ ಒತ್ತಿದರೂ ನಿಮ್ಮ ಮತ ಬಿಜೆಪಿಗೆ ಬೀಳಲಿದೆ ಎಂದು ಹೆಳಿಕೆ ನೀಡಿದ್ದರು.
-
The most honest man in the BJP. pic.twitter.com/6Q4D43uo0d
— Rahul Gandhi (@RahulGandhi) October 21, 2019 ." class="align-text-top noRightClick twitterSection" data="
.">The most honest man in the BJP. pic.twitter.com/6Q4D43uo0d
— Rahul Gandhi (@RahulGandhi) October 21, 2019
.The most honest man in the BJP. pic.twitter.com/6Q4D43uo0d
— Rahul Gandhi (@RahulGandhi) October 21, 2019
ಈ ವಿಡಿಯೋವನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿಯ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗ, ಶಾಸಕ ಬಕ್ಷೀಶ್ ಸಿಂಗ್ ವಿರ್ಕ್ ಅವರಿಗೆ ಇದೀಗ ನೊಟೀಸ್ ನೀಡಿದೆ. ಆದರೆ ಈ ಆರೋಪವನ್ನ ತಳಿಹಾಕಿರುವ ಬಿಜೆಪಿ ಶಾಸಕ, ನಾನು ಆ ರೀತಿಯಾಗಿ ಹೇಳಿಕೆ ನೀಡಿಲ್ಲ. ಇದರ ಹಿಂದೆ ವಿರೊಧ ಪಕ್ಷದ ಕೈವಾಡವಿದೆ ಎಂದು ಹೇಳಿದ್ದಾರೆ. ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಗುರುವಾರ ಫಲಿತಾಂಶ ಹೊರಬೀಳಲಿದೆ.