ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರವಿಂದ್ ಕೇಜ್ರಿವಾಲ್, ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು 21,697 ಮತಗಳ ಅಂತರದಿಂದ ಸೋಲಿಸಿದ್ದಾರೆ.
-
Delhi: Arvind Kejriwal - Aam Aadmi Party (AAP) chief and winning candidate from New Delhi assembly constituency, receives his winning certificate from the Returning Officer. #DelhiResults pic.twitter.com/b4m0kli1kr
— ANI (@ANI) February 11, 2020 " class="align-text-top noRightClick twitterSection" data="
">Delhi: Arvind Kejriwal - Aam Aadmi Party (AAP) chief and winning candidate from New Delhi assembly constituency, receives his winning certificate from the Returning Officer. #DelhiResults pic.twitter.com/b4m0kli1kr
— ANI (@ANI) February 11, 2020Delhi: Arvind Kejriwal - Aam Aadmi Party (AAP) chief and winning candidate from New Delhi assembly constituency, receives his winning certificate from the Returning Officer. #DelhiResults pic.twitter.com/b4m0kli1kr
— ANI (@ANI) February 11, 2020
ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ್ ಕುಮಾರ್ ಯಾದವ್ ಅವರು 25,061 ಮತಗಳನ್ನು ಪಡೆದುಕೊಂಡಿದ್ದಾರೆ. ಇವಿಎಂ ಮತಗಳು (46526) ಮತ್ತು ಅಂಚೆ ಮತಗಳು (232) ಸೇರಿ 46,758 ಮತಗಳನ್ನು ಕೇಜ್ರಿವಾಲ್ ಗಳಿಸಿದ್ದಾರೆ. ಈ ಮೂಲಕ ಸುನೀಲ್ ಕುಮಾರ್ ವಿರುದ್ಧ 21,697 ಮತಗಳಿಂದ ಭರ್ಜರಿ ಜಯ ಸಾಧಿಸಿದರು.
2015ರ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಬರೋಬ್ಬರಿ 31,583 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಕೊಂಚ ಹಿನ್ನೆಡೆ ಅನುಭವಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ 70 ಸ್ಥಾನಗಳ ಪೈಕಿ 62 ಅನ್ನು ಗೆದ್ದಿದೆ. ಬಿಜೆಪಿ 8 ಜಯ ಸಾಧಿಸಿದೆ. ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲೂ ಶೂನ್ಯ ಸುತ್ತಿದೆ.