ರಿಷಿಕೇಶ: ಅಧ್ಯಾತ್ಮಿಕ ಜ್ಞಾನ ಮತ್ತು ಯೋಗವನ್ನು ಕಲಿಯಲು ಉತ್ತರಾಖಂಡದ ರಿಷಿಕೇಶಗೆ ಬಂದಿದ್ದ ಏಳು ಜನರ ವಿದೇಶಿಯರ ಗುಂಪು ಲಾಕ್ಡೌನ್ನಿಂದ ಇಲ್ಲಿಯೇ ಉಳಿದುಕೊಂಡಿದೆ.
ದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾದ ಕಾರಣ ಲಾಕ್ಡೌನ್ ಘೋಷಣೆ ಮಾಡಲಾಯಿತು. ಇದರಿಂದ ಯಾವುದೇ ಸಾರಿಗೆ ಸೌಕರ್ಯವಿಲ್ಲದೇ ರಿಷಿಕೇಶದಲ್ಲಿ ಉಳಿದುಕೊಂಡ ಏಳು ಜನ ವಿದೇಶಿಗರ ಗುಂಪು ಇಲ್ಲಿನ ಬಡವರ ಸೇವೆಗೆ ಮುಂದಾಗಿದೆ.
ಜನರು ಹಸಿವಿನಿಂದ ಬಳಲುವುದನ್ನು ನೋಡಲು ಸಾಧ್ಯವಾಗದ ಕಾರಣ ಅವರು ಪ್ರತಿದಿನ ನೂರಾರು ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂದು ರಿಷಿಕೇಶ್ ಮುನ್ಸಿಪಲ್ ಕಮಿಷನರ್ ನರೇಂದ್ರ ಸಿಂಗ್ ಕ್ವಿರಿಯಾಲ್ ತಿಳಿಸಿದ್ದಾರೆ.
ಬಡ ಕುಟುಂಬಗಳು ಮತ್ತು ವಲಸೆ ಕಾರ್ಮಿಕರಿಗೆ ನಿತ್ಯ 300 ಆಹಾರ ಧಾನ್ಯದ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದಾರೆ. ಐದು ಕೆಜಿ ಗೋಧಿ ಹಿಟ್ಟು, ಮೂರು ಕೆಜಿ ಅಕ್ಕಿ, ಎರಡು ಕೆಜಿ ದ್ವಿದಳ ಧಾನ್ಯಗಳು, ಮಸಾಲೆ ಪದಾರ್ಥಗಳು ಮತ್ತು ಉಪ್ಪು ಸೇರಿದಂತೆ ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್ನ್ನು ಪುರಸಭೆಯ ಅಧಿಕಾರಿಗಳಿಗೆ ನಿತ್ಯ ನೀಡುತ್ತಿದ್ದಾರೆ ಎಂದು ನರೇಂದ್ರ ಸಿಂಗ್ ಕ್ವಿರಿಯಾಲ್ ಹೇಳಿದರು.
ಈ ಗುಂಪು ಯುಕೆ ಮೂಲದ ಹೆನ್ರಿ ಜಾನ್ಸ್ಟನ್, ಯುಎಸ್ ಮೂಲದ ಎನ್ಆರ್ಐ ತೇಜಸ್ವಿ ಗಿರಿ, ನೆದರ್ಲೆಂಡ್ನ ರಿಲಿಂಡೆ ರಿಜ್ವಿಜ್, ವೆನೆಜುವೆಲಾದ ತಾರಿನಿ ಡಾಗ್ನಿಮೊ, ಕ್ರೊಯೇಷಿಯಾದ ಅಲೆಜಾಂಡ್ರೊ ಜೆರೋವಿಕ್, ಜರ್ಮನಿಯ ಇವಾ ಲೆನಾ ಮತ್ತು ಲಂಡನ್ ಮೂಲದ ಎನ್ಆರ್ಐ ವರುಣ್ ಜುನೆಜಾ ರಿಷೀಕೆಶದಲ್ಲಿ ಸಿಲುಕಿರುವ ವಿದೇಶಿಗರು.