ETV Bharat / bharat

ಮಳೆಗಾಲದ ಸಂಸತ್​​​ ಅಧಿವೇಶನಕ್ಕೆ ದಿನಗಣನೆ: ಕೋವಿಡ್​​ ಟೆಸ್ಟ್​​ಗೆ ಒಳಗಾಗಲು ಎಲ್ಲಾ ಸಂಸದರಿಗೆ ಸೂಚನೆ - ಥರ್ಮಲ್​ ಗನ್​​​, ಸ್ಕ್ಯಾನರ್

ಸಂಸತ್ ಅಧಿವೇಶನ ಸಂಬಂಧ ನಿನ್ನೆ ಆರೋಗ್ಯ ಸಚಿವಾಲಯ, ಡಿಆರ್​​ಡಿಒ, ಎಐಐಎಂಎಸ್​​​​​ ಅಧಿಕಾರಿಗಳ ಜೊತೆ ಸಭೆ ನಡೆಸಿದ ಲೋಕಸಭಾ ಸ್ಪೀಕರ್​​, ಅಧಿವೇಶನಕ್ಕೆ ಬೇಕಾದ ಕೊನೆಯ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

All MPs attending Monsoon Session to undergo Covid-19 test
ಮಳೆಗಾಲದ ಅಧಿವೇಶನಕ್ಕೆ ದಿನಗಣನೆ: ಎಲ್ಲಾ ಸದಸ್ಯರು ಕೋವಿಡ್​​ ಟೆಸ್ಟ್​​ಗೆ ಒಳಗಾಗಲು ಸೂಚನೆ
author img

By

Published : Aug 29, 2020, 11:33 AM IST

ನವದೆಹಲಿ: ಮಳೆಗಾಲದ ಸಂಸತ್​ ಅಧಿವೇಶನ ನಡೆಸಲು ಕೇಂದ್ರ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇದಕ್ಕಾಗಿ ಕಳೆದ ತಿಂಗಳಿನಿಂದಲೇ ಸೂಕ್ತ ತಯಾರಿಯ ಯೋಜನೆ ಹಾಕಿಕೊಂಡು ಬರುತ್ತಿದೆ. ಇದೀಗ ಅಧಿವೇಶನ ಕುರಿತಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಿದ್ದು, ಅಧಿವೇಶನಕ್ಕೂ ಮುನ್ನ ಎಲ್ಲಾ ಸಂಸದರು ಕೋವಿಡ್​ ಟೆಸ್ಟ್​​ಗೆ ಒಳಗಾಗಬೇಕು ಎಂದಿದ್ದಾರೆ.

ಅಲ್ಲದೆ ಅಧಿವೇಶನವು ಎಲ್ಲಾ ಸುರಕ್ಷತಾ ಕ್ರಮಗಳ ಸಿದ್ಧತೆಯ ಬಳಿಕವಷ್ಟೇ ಆರಂಭಗೊಳ್ಳಲಿದೆ ಎಂದಿದ್ದಾರೆ. ಸಂಸತ್ ಅಧಿವೇಶನ ಸಂಬಂಧ ನಿನ್ನೆ ಆರೋಗ್ಯ ಸಚಿವಾಲಯ, ಡಿಆರ್​​ಡಿಒ, ಎಐಐಎಂಎಸ್​​​​​ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಅಧಿವೇಶನಕ್ಕೆ ಬೇಕಾದ ಕೊನೆಯ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿರುವುದಲ್ಲದೆ. ಆರೋಗ್ಯ ತಪಾಸಣೆಯ ಕುರಿತು ಸಮಗ್ರ ವ್ಯವಸ್ಥೆಯನ್ನು ಸಂಸತ್​ ಭವನದೊಳಗೆ ಜಾರಿ ಮಾಡುವಂತೆ ಸೂಚಿಸಿದ್ದಾರೆ.

ಕೋವಿಡ್​ ಹರಡುವಿಕೆ ತಡೆಗಟ್ಟುವ ಸಲುವಾಗಿ ತಜ್ಞರ ಸಲಹೆಯಂತೆಯೇ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಅಲ್ಲದೆ ಎಲ್ಲಾ ಅಧಿಕಾರಿಗಳು ಕೂಡ ಕೋವಿಡ್​​ ಟೆಸ್ಟ್​ಗೆ ಒಳಗಾಗಬೇಕು ಎಂದಿದ್ದಾರೆ.

ಸ್ಪೀಕರ್​​​ ಆದೇಶದ ಹಿನ್ನೆಲೆ ಸಂಸತ್​​​ನಲ್ಲಿ ಥರ್ಮಲ್​ ಗನ್​​​, ಸ್ಕ್ಯಾನರ್​ ಹಾಗೂ ಥರ್ಮಲ್​​​ ಕ್ಯಾಮರಾಗಳ ಬಳಕೆಗೆ ನಿರ್ಧರಿಸಲಾಗಿದ್ದು, ಸಂಸತ್​​​ ಪ್ರವೇಶಿಸುವ ಪ್ರತಿಯೊಬ್ಬರ ದೇಹದ ಉಷ್ಣಾಂಶ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಸಂಸತ್​​​ ಭವನದ ಹಲವೆಡೆ 40 ಆಟೋಮ್ಯಾಟಿಕ್​​ ಸ್ಯಾನಿಟೈಸರ್ ಯಂತ್ರ ಹಾಗೂ ಮೆಡಿಕಲ್​​ ತಂಡದ ಜೊತೆ ಆ್ಯಂಬುಲೆನ್ಸ್ ಸೌಲಭ್ಯ ಕೂಡ ಇರಲಿದೆ.

ಇದನ್ನು ಹೊರತುಪಡಿಸಿ ಕೋವಿಡ್ ನಿಯಮಾವಳಿ ಪ್ರಕಾರ ದೈಹಿಕ ಅಂತರ ಹಾಗೂ ಮಾಸ್ಕ್​ ಧರಿಸುವುದು ಕಡ್ಡಾಯವಾಗಿರಲಿದೆ. ಇನ್ನು ಸದಸ್ಯರು ಭಾಷಣ ಮಾಡುವ ವೇಳೆ ಎದ್ದು ನಿಲ್ಲುವ ಬದಲು ಕುಳಿತಲ್ಲಿಯೇ ಮಾತನಾಡುವಂತೆ ಸೂಚಿಸಲಾಗಿದೆ. ಅಲ್ಲದೆ ಸಂಸತ್ ಅಧಿವೇಶನದ ವೇಳೆ ಸಾರ್ವಜನಿಕರು ಸೇರಿದಂತೆ ಅನಗತ್ಯ ಸಿಬ್ಬಂದಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.