ಕೇರಳ: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಬಂದಿದ್ದ ಏರ್ ಇಂಡಿಯಾ ಏಕ್ಸ್ಪ್ರೆಸ್ ವಿಮಾನ ಕೇರಳದ ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಪೈಲೆಟ್ ಸೇರಿ 19 ಮಂದಿ ಸಾವಿಗೀಡಾಗಿದ್ದಾರೆ.
ಏರ್ ಇಂಡಿಯಾ ಬೋಯಿಂಗ್ 1X1344 ವಿಮಾನವಾಗಿದ್ದು, ಸಂಜೆ 7:45ರ ವೇಳೆ ಲ್ಯಾಂಡ್ ಆಗಿದ್ದು, ರನ್ವೇನಿಂದ ಜಾರಿ ಕಣಿವೆಗೆ ಬಿದ್ದಿದೆ.
ಕೇರಳದ ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ 40ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನತದೃಷ್ಟ ವಿಮಾನದಲ್ಲಿ ಕರ್ನಾಟಕದ ಓರ್ವ ಯುವತಿ ಸೇರಿ 191 ಪ್ರಯಾಣಿಕರಿದ್ದರು. 10 ಮಕ್ಕಳು, ಇಬ್ಬರು ಪೈಲೆಟ್, 4 ಕ್ಯಾಬಿನ್ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ನಾಗರಿಕ ವಿಮಾನಯಾನ ಇಲಾಖೆ ಮಾಹಿತಿ ನೀಡಿದೆ.
ಏರ್ ಇಂಡಿಯಾ ವಿಮಾನದಲ್ಲಿ ಪೈಲಟ್ ವಸಂತ್ ದೀಪಕ್, ಕ್ಯಾಪ್ಟನ್ ಅಖಿಲೇಶ್ ಕುಮಾರ್ ಹಾಗು ಸಿಬ್ಬಂದಿಗಳಾದ ಶಿಲ್ಪಾ, ಅಕ್ಷಯ್ ಸಿಂಗ್, ಕುಮಾರ್ ಲಲಿತಾ ಹಾಗೂ ಬಿಸ್ವಾಸ್ ಇದ್ದರು.
ಕಳೆದ ವರ್ಷವೂ ನಡೆದಿತ್ತು ಘಟನೆ!
2019ರ ಜುಲೈ1ರಂದು ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಂಥದ್ದೇ ದುರಂತ ಸಂಭವಿಸಿತ್ತು. ಅಂದು ಸೌದಿ ಅರೇಬಿಯಾದಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡ್ ಆಗುತ್ತಿದ್ದಾಗ ವಿಮಾನದ ಹಿಂಬದಿ ಭಾಗ ರನ್ವೇಗೆ ಟಚ್ ಆಗಿತ್ತು. ಈ ಘಟನೆಯಲ್ಲಿ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದರು.
-
No fire reported at the time of landing. There are 174 passengers, 10 infants, 2 pilots & 5 cabin crew onboard the aircraft. As per initial reports, rescue operations are on & passengers are being taken to hospital: Rajeev Jain, Additional DG Media, Civil Aviation Ministry https://t.co/tsiSSrpNTx
— ANI (@ANI) August 7, 2020 " class="align-text-top noRightClick twitterSection" data="
">No fire reported at the time of landing. There are 174 passengers, 10 infants, 2 pilots & 5 cabin crew onboard the aircraft. As per initial reports, rescue operations are on & passengers are being taken to hospital: Rajeev Jain, Additional DG Media, Civil Aviation Ministry https://t.co/tsiSSrpNTx
— ANI (@ANI) August 7, 2020No fire reported at the time of landing. There are 174 passengers, 10 infants, 2 pilots & 5 cabin crew onboard the aircraft. As per initial reports, rescue operations are on & passengers are being taken to hospital: Rajeev Jain, Additional DG Media, Civil Aviation Ministry https://t.co/tsiSSrpNTx
— ANI (@ANI) August 7, 2020