ನವದೆಹಲಿ: ಇಟಲಿಯ ರೋಮ್ ಗೆ ಹಾರಿದ್ದ ಭಾರತೀಯರನ್ನು ಮರಳಿ ಗೂಡಿಗೆ ಕರೆತಂದ ಏರ್ ಇಂಡಿಯಾ ಸಿಬ್ಬಂದಿ ಕ್ವಾರಂಟೈನ್ಗೆ ದಾಖಲಾಗಬೇಕಾಗಿ ಸೂಚಿಸಲಾಗಿದೆ.
ಕೋವಿಡ್-19 ಹರಡುತ್ತಿರುವ ಹಿನ್ನೆಲೆ ವಿದೇಶಗಳಿಂದ ಭಾರತೀಯರನ್ನು ಹೊರಗೆ ಕಳುಹಿಸಲಾಗುತ್ತಿದ್ದು ಅವರನ್ನು ಏರ್ ಇಂಡಿಯಾ ವಿಶೇಷ ವಿಮಾನಗಳ ಮೂಲಕ ದೇಶಕ್ಕೆ ಕರೆತರಲಾಗುತ್ತಿದೆ.
ವಿದೇಶಗಳಿಂದ ದೇಶಕ್ಕೆ ಹಿಂತಿರುಗಿದ ಭಾರತೀಯರನ್ನು ಸುರಕ್ಷತಾ ದೃಷ್ಟಿಯಿಂದ ವಿವಿಧ ಭಾಗಗಳ ಹೋಂ ಕ್ವಾರಂಟೈನ್ಗಳಿಗೆ ಕಳಿಸಲಾಗುತ್ತಿದೆ. ಮತ್ತು ಅವರನ್ನೆಲ್ಲ ಪರೀಕ್ಷೆಗೆ ಒಳಪಡಿಸಿ ಬಂದವರಲ್ಲಿ ಕೊರೊನಾ ಸೋಂಕು ಇದೆಯೋ ಇಲ್ಲವೋ ಎಂದು ಪತ್ತೆಹಚ್ಚಲಾಗುತ್ತಿದೆ.
ಸದ್ಯ ದೇಶಿಯರನ್ನು ಇಟಲಿಯ ರೋಮ್‌ನಿಂದ ಸುರಕ್ಷಿತವಾಗಿ ಗೂಡು ಸೇರಿಸಿರುವಲ್ಲಿ ನೆರವಾದ ಏರ್ ಇಂಡಿಯಾ ಸಿಬ್ಬಂದಿಯನ್ನು ಕಂಪನಿಯ ಸ್ಥಾಪಿತ ಮಾನದಂಡಗಳ ಪ್ರಕಾರ ಕ್ವಾರಂಟೈನ್ಗೆ ದಾಖಲಾಗಲು ಸೂಚಿಸಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ.