ಆಂಧ್ರಪ್ರದೇಶ : ವಿಜಯನಗರಂ ಜಿಲ್ಲೆಯ ನಿವಾಸಿ ಗೌರಿ ನಾಯ್ಡು ಅವರಿಗೆ ತಮ್ಮ ತಾಯಿ ಸಾವನ್ನಪ್ಪಿದರೂ ಕೂಡ ಅವರ ಅಂತಿಮ ದರ್ಶನಕ್ಕೆ ಹೋಗಲು ಸಾಧ್ಯವಾಗಲಿಲ್ಲ.
ಗೌರಿ ನಾಯ್ಡು ಕಳೆದ 4 ವರ್ಷದಿಂದ ತೆಲಂಗಾಣದ ಮಡಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೊನಾ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಕೆಲಸ ನಿರ್ವಹಿಸುತ್ತಿರುವ ಪೇದೆ, ತಾಯಿಯ ಅಂತಿಮ ದರ್ಶನ ಪಡೆಯಲಾಗಲಿಲ್ಲ.
ಮೃತಪಟ್ಟ ಅವರ ತಾಯಿ ಕಳೆದ ಕೆಲ ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಲಾಕ್ ಡೌನ್ ಮತ್ತು ಕೊರೊನಾ ಸೋಂಕು ಭಯದಿಂದಾಗಿ ಗೌರಿ ನಾಯ್ಡು ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.