ಕೃಷ್ಣಾ (ಆಂಧ್ರಪ್ರದೇಶ): ದೇಶದಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾರಿಗೆ,ಸಂಪರ್ಕ ಬಂದ್ ಆಗಿದ್ದು, ಜನರು ಒಂದೆಡೆಯಿಂದ ಮತ್ತೊಂದೆಡೆ ಪ್ರಯಾಣಿಸೋಕೆ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ 18 ವರ್ಷದ ಯುವತಿಯೊಬ್ಬಳು ಸುಮಾರು 60 ಕಿಲೋಮೀಟರ್ ಬರಿಗಾಲಲ್ಲಿ ತೆರಳಿ ತನ್ನ ಪ್ರಿಯಕರನನ್ನು ಮದುವೆಯಾದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣಾ ಜಿಲ್ಲೆಯ ಹನುಮಾನ್ ಜಂಕ್ಷನ್ನ 18 ವರ್ಷದ ಯುವತಿಯೊಬ್ಬಳು ಸುಮಾರು 60 ಕಿಲೋಮೀಟರ್ ಬರಿಗಾಲಲ್ಲಿ ತೆರಳಿ ಮಚಲೀಪಟ್ಟಣಕ್ಕೆ ತೆರಳಿ ತನ್ನ ಪ್ರಿಯಕರ ಸಾಯಿ ಪುನ್ನಯ್ಯನನ್ನು ಭೇಟಿಯಾಗಿದ್ದಾಳೆ. ವಿಷಯ ತಿಳಿದ ಕುಟುಂಬಸ್ಥರು ಬೆದರಿಕೆ ಹಾಕಿದಾಗ ಚಿಲಕಪುಡಿ ಪೊಲೀಸ್ ಠಾಣೆಗೆ ತೆರಳಿದ ಆಕೆ ಪೊಲೀಸರ ಸಮ್ಮುಖದಲ್ಲಿ ಪುನ್ನಯ್ಯನನ್ನು ಮದುವೆಯಾಗಿದ್ದಾಳೆ. ಪ್ರೇಮಿಗಳ ಪೋಷಕರಿಗೆ ಪೊಲೀಸರು ಕೌನ್ಸೆಲಿಂಗ್ ನಡೆಸಿದ್ದಾರೆ.