73ನೇ ಸ್ವತಂತ್ರ ಸಂಭ್ರಮದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಅನೇಕ ವಿಚಾರಗಳನ್ನ ದೇಶದ ಜನರ ಮುಂದೆ ಕೋವಿಂದ್ ಹಂಚಿಕೊಂಡರು.
ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದು, ತ್ರಿವಳಿ ತಲಾಖ್,ಮಾಹಿತಿ ಮತ್ತು ಶಿಕ್ಷಣದ ಹಕ್ಕು ಸೇರಿದಂತೆ ಅನೇಕ ವಿಷಯಗಳ ಕುರಿತು ರಾಷ್ಟ್ರಪತಿ ಮಾತನಾಡಿದರು. ಮಹಾತ್ವ ಗಾಂಧಿ ಅವರ ತತ್ವ ಇಂದಿಗೂ ಎಲ್ಲರಿಗೂ ಆದರ್ಶ ಎಂದು ಹೇಳಿದ್ದು, ಪ್ರತಿಯೊಬ್ಬ ವ್ಯಕ್ತಿ, ಕುಟುಂಬ ಮತ್ತು ಒಟ್ಟಾರೆ ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಹಾಗಾದರೆ ಅವರು ಮಾತನಾಡಿರುವ ಪ್ರಮುಖ ಅಂಶಗಳು ಇಂತಿವೆ
- ಈ ವರ್ಷ ಶ್ರೇಷ್ಠ, ಪ್ರತಿಭಾವಂತ ಸಿಖ್ ಧರ್ಮ ಸ್ಥಾಪಕ ಗುರುನಾನಕ್ ದೇವ್ಜೀ 550ನೇ ಜಯಂತಿ ಆಚರಣೆ
- ಅಭಿವೃದ್ಧಿ,ಸಮಾನತಾವಾದ ಮತ್ತು ಆರ್ಟಿಐ ಆದೇಶಗಳಲ್ಲಿ ಬದಲಾವಣೆ
- ಶಿಕ್ಷಣದಲ್ಲಿ ಮೀಸಲಾತಿ,ಹಿಂದುಳಿದ ವರ್ಗಗಳಿಗೆ ಉದ್ಯೋಗ
- ಹಣ್ಣು ಮಕ್ಕಳಿಗೆ ನ್ಯಾಯ ಒದಗಿಸುವುದೇ ಕೇಂದ್ರದ ಮುಖ್ಯ ಆದ್ಯತೆ
- 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚಿನ ಜನರು ಭಾಗಿ
- ಅದಕ್ಕಾಗಿ ನಾನು ಮತದಾರರಿಗೆ ಅಭಿನಂದಿಸುತ್ತೇನೆ
- ಜಮ್ಮು-ಕಾಶ್ಮೀರ್,ಲಡಾಖ್ ಬದಲಾವಣೆಯಿಂದ ಅಲ್ಲಿನ ಜನರಿಗೆ ಲಾಭ