ಅಲೋವೆರಾ( ಲೋಳೆಸರ)ದ 7 ಪ್ರಮುಖ ಪ್ರಯೋಜನಗಳು:
ಅಲೋವೆರಾ(ಲೋಳೆಸರ) ಜೆಲ್ ಯಾವಾಗಲೂ ಅದರ ಬಹುಕಾರ್ಯದ ಗುಣಲಕ್ಷಣಗಳಿಗಾಗಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚರ್ಮ ಹಾಗೂ ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿದ್ದು, ಒಂದು ಅತ್ಯುಪಯುಕ್ತ ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಅಲೋವೆರಾ ಜೆಲ್ ಹಲವು ಜೀವಸತ್ವಗಳು ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್ಗಳಿಂದ ಕೂಡಿದ್ದು, ಇದು ಹೆಚ್ಚು ನೀರಿನ ಅಂಶ ಹೊಂದಿರುವುದರಿಂದ, ಉತ್ತಮ ಹೈಡ್ರೇಟರ್ ಆಗಿ ಕೆಲಸ ಮಾಡುತ್ತದೆ.
- ಕಣ್ಣಿನ ಕೆಳಗಿನ ಕಪ್ಪುಕಲೆ ನಿವಾರಣೆ : ಕಣ್ಣಿನ ಕೆಳಗೆ ಉಂಟಾಗುವ ಕಪ್ಪು ವರ್ತುಲಗಳು,ಕಲೆಗಳನ್ನು ಅಲೋವೆರಾ ಹೋಗಲಾಡಿಸುತ್ತೆ. ಡಾರ್ಕ್ ಸರ್ಕಲ್ಸ್ ಅಷ್ಟೇ ಅಲ್ಲದೇ ಟಿವಿ ಅಥವಾ ಕಂಪ್ಯೂಟರ್‌ನ ದೀರ್ಘಸಮಯ ನೋಡುವುದರಿಂದ ಉಂಟಾಗುವ ಕಣ್ಣಿನ ನೋವನ್ನು ಸಹ ಶಮನಗೊಳಿಸುತ್ತದೆ. ಇದು ಪ್ರಕೃತಿಯ ಸಹಜ ಬೆಳಕು ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವುದರಿಂದ ಇದು ಕಣ್ಣುಗಳ ಸುತ್ತಲೂ ಇರುವ ತೆಳುವಾದ ಮತ್ತು ಹೆಚ್ಚು ಸೂಕ್ಷ್ಮ ಚರ್ಮಕ್ಕೆ ಹೆಚ್ಚಿನ ಅಪಾಯಗಳನ್ನುಂಟು ಮಾಡದೆ ಕಣ್ಣುಗಳ ಕೆಳಗಿನ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
- ಪ್ರೈಮರ್ : ಅಲೋವೆರಾ ಜೆಲ್ ಅಂಟು- ಅಂಟಾಗಿದ್ದು, ಇದನ್ನು ಪ್ರೈಮರ್ ಆಗಿ ಮುಖಕ್ಕೆ ಲೇಪಿಸುವುದರಿಂದ ಸ್ಕಿನ್ ಬಿಗಿಯಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮದಲ್ಲಿ ತೇವಾಂಶ ಹಿಡಿದಿಡಲು ಸಹಕಾರಿ. ಯಾವುದೇ ಮೇಕಪ್ ನಿಮ್ಮ ಮುಖದ ಮೇಲಿನ ರಂಧ್ರಗಳ ಒಳಹೋಗದಂತೆ ತಡೆಯಲು ಈ ಲೋಳೆಸರ ರಕ್ಷಣಾತ್ಮಕ ಪದರ ರೂಪಿಸುತ್ತದೆ. ಜೊತೆಗೆ ರಂಧ್ರಗಳು ಕಾಣಿಸಿಕೊಳ್ಳದಂತೆ ಅವುಗಳನ್ನು ಮುಚ್ಚಲು ಸಹಕಾರಿಯಾಗಿದೆ.
- ಚರ್ಮದಲ್ಲಿ ಉಂಟಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ : ಅಲೋವೆರಾ ಜೆಲ್ ವಿಟಮಿನ್ ಎ,ಸಿ ಹಾಗೂ ಇ ಹೊಂದಿದ್ದು,ಇದು ಆ್ಯಂಟಿ ಆಕ್ಸಿಡೆಂಟ್ಸ್ ಆಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿ ತಪ್ಪಿಸಲು ಲೋಳೆಸರ ಸಹಕಾರಿ.
- ಶೇವಿಂಗ್ ಅಥವಾ ವ್ಯಾಕ್ಸಿಂಗ್ ನಂತರ ಬಳಸಿ : ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಲು ಚರ್ಮದ ಮೇಲೆ ಬ್ಲೇಡ್ ಬಳಸುವುದರಿಂದ ಅದು ಚರ್ಮಕ್ಕೆ ಹಾನಿಯುಂಟಾಗಬಹುದು ಅಥವಾ ವ್ಯಾಕ್ಸ್ ಮಾಡುವಾಗ ಗಾಯಗಳುಂಟಾಗಬಹುದು. ಅಲೋವೆರಾ ಜೆಲ್ ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ-ಆ್ಯಂಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಈ ಸೂಕ್ಷ್ಮ ಗಾಯಗಳನ್ನು ಗುಣಪಡಿಸಲು ಮತ್ತು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಹೈಡ್ರೇಟರ್ ಆಗಿರುವುದರಿಂದ ಚರ್ಮವನ್ನು ತಂಪಾಗಿಡುತ್ತದೆ.
- ಹೇರ್ ಸ್ಟೈಲಿಂಗ್ ಜೆಲ್ : ಒದ್ದೆಯಾದ ಕೂದಲಿಗೆ ಅಲೋವೆರಾ ಜೆಲ್‌ನ ಹಾಕಿಕೊಳ್ಳಬಹುದು. ಇದು ಹೇರ್ಗೆ ಜೆಲ್ ಆಗಿ ಬಳಕೆಯಾಗುತ್ತದೆ. ಇದರ ಪಿಹೆಚ್ ಮಟ್ಟ 4.5 ಇರುವುದರಿಂದ ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ. ಲೋಳೆಸರ ಉತ್ತಮ ಹೈಡ್ರೇಟರ್ ಆಗಿರುವುದರಿಂದ ಕೂದಲ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿದೆ.
- ಮಾಯಿಶ್ಚರೈಸರ್ ಅಥವಾ ಫೇಸ್‌ಮಾಸ್ಕ್ : ಅಲೋವೆರಾ ಜೆಲ್ನಲ್ಲಿ ಶೇ.98 ನೀರು ಇದ್ದು, ಇದು ಅತ್ಯುತ್ತಮ ಹೈಡ್ರೇಟರ್ ಆಗಿರುತ್ತದೆ ಮತ್ತು ಎಲ್ಲಾ ರೀತಿಯ ಚರ್ಮದವರು ಹಗುರವಾದ ಮಾಯಿಶ್ಚರೈಸರ್ ಆಗಿ ಇದನ್ನು ಬಳಸಬಹುದು. ಈ ಜೆಲ್‌ನ ಫೇಸ್‌ಮಾಸ್ಕ್ ಜೊತೆ ಉಪಯೋಗಿಸುವುದರಿಂದ ನಿಮ್ಮ ತ್ವಚೆಗೆ ಹೊಳಪು ನೀಡುತ್ತದೆ.
- ಹೇರ್ ಕಂಡೀಷನರ್ : ನಿಮ್ಮ ಕೂದಲನ್ನು ತೊಳೆದ ನಂತರ ನೀವು ಅಲೋವೆರಾ ಜೆಲ್‌ನ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಬಹುದು. ಅಥವಾ ಹೇರ್ವಾಷ್ ಮಾಡುವ 10 ನಿಮಿಷಗಳ ಮೊದಲು ಸಹ ಅದನ್ನು ತಲೆಕೂದಲಿಗೆ ಹಚ್ಚಿಕೊಂಡು ನಂತರ ತಲೆಕೂದಲು ತೊಳೆಯಬಹುದು. ಅಥವಾ ನೀವು ಲೋಳೆಸರವನ್ನು ತೆಂಗಿನಕಾಯಿ ಅಥವಾ ಬಾದಾಮಿ ಎಣ್ಣೆ ಮತ್ತಿತರ ತೈಲಗಳೊಂದಿಗೆ ಬೆರೆಸಿ ತಲೆಕೂದಲಿಗೆ ಹಚ್ಚಿಕೊಳ್ಳಬಹುದು.