ETV Bharat / bharat

ಗಂಗೋತ್ರಿ ಹೆದ್ದಾರಿಯಲ್ಲಿ ನದಿಗೆ ಬಿದ್ದ ಕಾರು: ಆರು ಮಂದಿ ದುರ್ಮರಣ - vehicle fall in river

ಗಂಗೋತ್ರಿ ಹೆದ್ದಾರಿಯಲ್ಲಿ ನಲುಪಾನಿ ಹಾಗೂ ಧರಸು ನಡುವಿನ ನದಿಗೆ ಕಾರು ಬಿದ್ದು ಅದರಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ.

Accident in gangotri highway
ಗಂಗೋತ್ರಿ ಹೆದ್ದಾರಿಯಲ್ಲಿ ನದಿಗೆ ಬಿದ್ದ ಕಾರು
author img

By

Published : Feb 17, 2020, 7:23 PM IST

ಉತ್ತರಕಾಶಿ(ಉತ್ತರಾಖಾಂಡ್​): ಇಂದು ಮಧ್ಯಾಹ್ನ ಇಲ್ಲಿನ ಗಂಗೋತ್ರಿ ಹೆದ್ದಾರಿಯ ನಲುಪಾನಿ ಹಾಗೂ ಧರಸು ನಡುವಿನ ನದಿಗೆ ಕಾರೊಂದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿ 6 ಮಂದಿ ಮೃತಪಟ್ಟಿದ್ದಾರೆ.

ಕಾರು 300 ಮೀಟರ್ ಆಳಕ್ಕೆ ಬಿದ್ದಿತ್ತು. ಈಗಾಗಲೇ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಕರೆದೊಯುತ್ತಿದ್ದಾಗ ಮಾರ್ಗ ಮಧ್ಯೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣವೇ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಡಿಎಂ ಡಾ.ಆಶಿಶ್ ಚೌಹಾಣ್​ ಮತ್ತು ಎಸ್​ಪಿ ಪಂಕಜ್ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.