ಪುಲ್ವಾಮಾ: ಭಾರತ ಹಾಗೂ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಇಂದು ಭಯೋತ್ಪಾದಕರು ಪುಲ್ವಾಮಾದಲ್ಲಿರುವ ಪೊಲೀಸ್ ಠಾಣೆ ಗುರಿಯಾಗಿಸಿ ಗ್ರೆನೇಡ್ ದಾಳಿ ನಡೆಸಿದ್ದಾರೆ.
ಪೊಲೀಸ್ ಸ್ಟೇಷನ್ ಗುರಿಯಾಗಿಸಿ ಎಸೆಯಲ್ಪಟ್ಟಿದ್ದ ಗ್ರೆನೇಡ್ ಜನನಿಬಿಡ ರಸ್ತೆಯಲ್ಲಿ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದರೆ, ಹಲವರಿಗೆ ಸಣ್ಣ ಪ್ರಮಾಣದ ಏಟುಗಳಾಗಿವೆ. ಗಾಯಾಳು ಪೊಲೀಸರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
-
J&K: Terrorists lobbed a grenade at Pulwama police station which exploded outside the station, today. Some civilians have received injuries. The area has been cordoned off. pic.twitter.com/ruBy9HCOYv
— ANI (@ANI) June 18, 2019 " class="align-text-top noRightClick twitterSection" data="
">J&K: Terrorists lobbed a grenade at Pulwama police station which exploded outside the station, today. Some civilians have received injuries. The area has been cordoned off. pic.twitter.com/ruBy9HCOYv
— ANI (@ANI) June 18, 2019J&K: Terrorists lobbed a grenade at Pulwama police station which exploded outside the station, today. Some civilians have received injuries. The area has been cordoned off. pic.twitter.com/ruBy9HCOYv
— ANI (@ANI) June 18, 2019
ಸೇನಾ ವಾಹನವನ್ನು ಗುರಿಯಾಗಿಸಿ ಕಚ್ಚಾ ಬಾಂಬ್ ಸ್ಫೋಟಿಸಿದ ಮರುದಿನವೇ ಉಗ್ರರು ಮತ್ತೊಂದು ದಾಳಿ ನಡೆಸಿದ್ದಾರೆ. ಪುಲ್ವಾಮಾ ಉಗ್ರದಾಳಿಯ ಬಳಿಕ ಗಡಿ ಪ್ರದೇಶದಲ್ಲಿ ಪ್ರತಿದಿನ ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇದೆ.