ನವದೆಹಲಿ: ಭಾರತದ ಲಾಕ್‌ಡೌನ್ ಅವಧಿಯಲ್ಲಿ ವಿವಿಧ ಸಾರಿಗೆ ವಾಹನಗಳಲ್ಲಿ 170 ಜನ ಮತ್ತು ಶ್ರಮಿಕ್ ರೈಲುಗಳಲ್ಲಿ 81 ಜನ ಸೇರಿದಂತೆ 251 ವಲಸೆ ಕಾರ್ಮಿಕರು ಮನೆಗೆ ಮರಳಲು ಪ್ರಯತ್ನಿಸುವಾಗ ಸಾವನ್ನಪ್ಪಿದ್ದಾರೆ ಅಂತಿವೆ ರಿಪೋರ್ಟ್ಗಳು.
ಹಲವಾರು ವಲಸೆ ಕಾರ್ಮಿಕರು ಮಹಾನಗರದಲ್ಲಿನ ನಿರುದ್ಯೋಗ, ವಸತಿ ಸಮಸ್ಯೆ ಮತ್ತು ಹಸಿವಿನಿಂದ ಪಾರಾಗಲು ಊರುಗಳಿಗೆ ಮರಳಲು ಪ್ರಯತ್ನಿಸಿದರು.
ಕೆಲವರು ಮನೆ ತಲುಪಿದರೆ, ಇನ್ನೂ ಕೆಲವರು ರಸ್ತೆ ಅಪಘಾತ, ಕಾಳ್ಗಿಚ್ಚು, ಸುಸ್ತು, ಅನಾರೋಗ್ಯ ಹಾಗೂ ಪರಿಹಾರ ಶಿಬಿರಗಳಲ್ಲಿನ ನಿರ್ಲಕ್ಷ್ಯ ಇತ್ಯಾದಿಗಳಿಂದ ಸಾವನ್ನಪ್ಪಿದರು.
ವಲಸೆ ಕಾರ್ಮಿಕರು ಮನೆ ತಲುಪಲು ಸರ್ಕಾರ ವ್ಯವಸ್ಥೆ ಮಾಡಿದ ಶ್ರಮಿಕ್ ರೈಲುಗಳಲ್ಲಿಯೂ ಸರಿಯಾಗಿ ನೀರು ಹಾಗೂ ಆಹಾರದ ವ್ಯವಸ್ಥೆ ಒದಗಿಸಲಾಗುತ್ತಿಲ್ಲ. ಇದರಿಂದಾಗಿ ಕೆಲವರು ಹಸಿವಿನಿಂದ ಬಳಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.