ETV Bharat / bharat

ಸ್ಮಾರ್ಟ್​ಫೋನ್​ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಯುವಕ

ಮನೆಯವರು ಸ್ಮಾರ್ಟ್​ಫೋನ್​ ಕೊಡಿಸಲಿಲ್ಲವೆಂಬ ಕೋಪದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

17-Year-Old Boy Commits Suicide
17-Year-Old Boy Commits Suicide
author img

By

Published : Jul 14, 2020, 9:08 PM IST

ಕನೌಜ್​​(ಉತ್ತರಪ್ರದೇಶ): ಸ್ಮಾರ್ಟ್​​ಫೋನ್​ ತೆಗೆದುಕೊಡುವಂತೆ ಕಳೆದ ಮೂರು ದಿನಗಳಿಂದ ತಾಯಿಯನ್ನು ಪೀಡಿಸುತ್ತಿದ್ದ 17 ವರ್ಷದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರಪ್ರದೇಶದ ಕನೌಜ್​ನ ಚಿನ್ನಲಪಟ್ಟಿ ಪೂಂಚೋಲೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯ ಮೂರನೇ ಮಗ ಪ್ರದೀಪ್​ 12 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತನಗೆ ಸ್ಮಾರ್ಟ್​​ಫೋನ್​ ಕೊಡಿಸುವಂತೆ ಕಳೆದ ಮೂರು ದಿನಗಳಿಂದ ಆತ ದುಂಬಾಲು ಬಿದ್ದಿದ್ದನಂತೆ.

ಆದರೆ ಸ್ವಲ್ಪ ದಿನ ಕಾಯುವಂತೆ ತಾಯಿ ಬುದ್ಧಿವಾದ ಹೇಳಿದ್ದಾಳೆ. ಇದರಿಂದ ಮನನೊಂದ ಯುವಕ ಆಕೆಯ ಜೊತೆ ಜಗಳವಾಡಿದ್ದು, ಕೋಪದಲ್ಲಿ ಅಣ್ಣನ ಮೊಬೈಲ್​ ಫೋನ್​ ತೆಗೆದುಕೊಂಡು ನಿನ್ನೆ ಮನೆಯಿಂದ ಹೊರ ಹೋಗಿದ್ದಾನೆ.

ಮನೆ ಬಿಟ್ಟ ಹೋದ ಯುವಕ ವಾಪಸ್​​ ಬಾರದ ಕಾರಣ ಸಂಬಂಧಿಕರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿ, ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಅಂಬತೂರ್​ ರೈಲ್ವೆ ಟ್ರ್ಯಾಕ್​ ಮೇಲೆ ಆತನ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವ ರವಾನೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.