ತಿರುಪತಿ: ಆಂಧ್ರಪ್ರದೇಶದ ತಿರುಮಲದಲ್ಲಿರುವ ಆಕಾಶಗಂಗಾ ಬಳಿಯಿರುವ ಹನುಮಂತನ ಜನ್ಮಸ್ಥಳದ ಸೌಂದರ್ಯೀಕರಣ ಕಾಮಗಾರಿ ಆರಂಭವಾಗಿದೆ. ವಿಶಾಖ ಶಾರದ ಪೀಠಾಧಿಪತಿ ಸ್ವರೂಪಾನಂದೇಂದ್ರಸ್ವಾಮಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಅವರು ತಿರುಮಲ ಬಾಲಾಜಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸ್ವರೂಪಾನಂದೇಂದ್ರ ಸರಸ್ವತಿ ಅವರು ಟಿಟಿಡಿ ಪೀಠಾಧಿಪತಿಗಳು ಮತ್ತು ಮಠಾಧಿಪತಿಗಳೊಂದಿಗೆ ಧಾರ್ಮಿಕ ವಿಚಾರ ಸಂಕಿರಣ ನಡೆಸುವಂತೆ ತಿಳಿಸಿದರು. ತಿರುಮಲದ ಅಂಜನಾದ್ರಿಯಲ್ಲಿರುವ ಹನುಮಾನ್ ಜನ್ಮಸ್ಥಳ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಹಲವು ಪೀಠಾಧಿಪತಿಗಳು ಕೋರಿದ್ದಾರೆ.
ಓದಿ: ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಭಾರತ, ಟಿ-20 ಸರಣಿಯಲ್ಲಿ 1-0 ಮುನ್ನಡೆ
ರಾಮಜನ್ಮಭೂಮಿ ತೀರ್ಥ ಟ್ರಸ್ಟ್‌ನ ಕೋಶಾಧ್ಯಕ್ಷ ಸ್ವಾಮಿ ಗೋವಿಂದ ಗಿರಿ ಅವರು ಆಂಜನೇಯ ಸ್ವಾಮಿಯ ಜನ್ಮಸ್ಥಳ ಅಂಜನಾದ್ರಿ ತಿರುಮಲ ಎಂಬ ಪುಸ್ತಕವನ್ನು ಅನಾವರಣಗೊಳಿಸಿದರು. ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಹನುಮಂತನ ಸ್ಥಳವನ್ನು ನಿರ್ಧರಿಸುವುದು ಕಷ್ಟ. ದೇವಸ್ಥಾನವನ್ನು ಎಲ್ಲಿ ನಿರ್ಮಿಸಿದ್ರೂ ಅಂಗಿಕರಿಸುವಂತೆ ತಿಳಿಸಿದರು.
ಅಂಜನಾದ್ರಿಯ ಅಭಿವೃದ್ಧಿಗೆ ಬೇರೆ ರಾಜ್ಯಗಳ ಒಪ್ಪಿಗೆ ಬೇಕೇ ಎಂದು ಸ್ವರೂಪಾನಂದೇಂದ್ರಸ್ವಾಮಿ ಕೇಳಿದರು. ಟಿಟಿಡಿ ಮಠಾಧೀಶರು, ಪೀಠಾಧಿಪತಿಗಳೊಂದಿಗೆ ಧಾರ್ಮಿಕ ಸಮ್ಮೇಳನ ನಡೆಸುವಂತೆ ತಿಳಿಸಿದರು.
ಸಮಾರಂಭದಲ್ಲಿ ಚಿತ್ರಕೂಟ ಪೀಠಾಧಿಪತಿ ರಾಮಭದ್ರಾಚಾರ್ಯ, ರಾಮಜನ್ಮಭೂಮಿ ತೀರ್ಥಯಾತ್ರೆ ಟ್ರಸ್ಟ್‌ನ ಖಜಾಂಚಿ ಸ್ವಾಮಿಗೋವಿಂದದೇವ ಗಿರಿ, ವಿಎಚ್‌ಪಿ ಅಂತರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಕೋಟೇಶ್ವರ ಶರ್ಮಾ, ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ಇಒ ಜವಾಹರರೆಡ್ಡಿ ಉಪಸ್ಥಿತರಿದ್ದರು.